ಉದ್ಧವ್ ಠಾಕ್ರೆ, ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ಮುಖಕ್ಕೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರು
Shiv Sena: ಅಭಿಜೀತ್ ಲಿಮಾಯೆ (35) ಎಂದು ಗುರುತಿಸಲಾಗಿರುವ ಆರೋಪಿಯನ್ನು ಪುಣೆಯ ಸೈಬರ್ ಪೊಲೀಸರು ಮುಂಬೈನಲ್ಲಿರುವ ಅವರ ನಿವಾಸದಿಂದ ಶನಿವಾರ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ನೀಡಿತ್ತು.
ಪುಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ವ್ಯಕ್ತಿಗೆ ಶಿವಸೇನಾ ಕಾರ್ಯಕರ್ತರು ಮಸಿ ಬಳಿದಿದ್ದಾರೆ. ಭಾನುವಾರ ಪುಣೆಯ ನ್ಯಾಯಾಲಯದ ಹೊರಗೆ ಈ ಘಟನೆ ನಡೆದಿದೆ. ಅಭಿಜೀತ್ ಲಿಮಾಯೆ (35) ಎಂದು ಗುರುತಿಸಲಾಗಿರುವ ಆರೋಪಿಯನ್ನು ಪುಣೆಯ ಸೈಬರ್ ಪೊಲೀಸರು ಮುಂಬೈನಲ್ಲಿರುವ ಅವರ ನಿವಾಸದಿಂದ ಶನಿವಾರ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ನೀಡಿತ್ತು. ಲಿಮಾಯೆ ಬಿಡುಗಡೆಯಾದ ತಕ್ಷಣ ಆಕ್ರೋಶಗೊಂಡ ಶಿವಸೇನಾ ಕಾರ್ಯಕರ್ತರು ಪುಣೆ ನ್ಯಾಯಾಲಯದ ಹೊರಗೆ ಜಮಾಯಿಸಿ ಆತನ ಮುಖಕ್ಕೆ ಮಸಿ ಬಳಿದಿದ್ದಾರೆ.
ಮೇ ತಿಂಗಳಲ್ಲಿ ಉದ್ಧವ್ ಠಾಕ್ರೆ, ಬಾಳಾ ಸಾಹೇಬ್ ಠಾಕ್ರೆ ಮತ್ತು ಪವಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ‘ಲಕೋಬಾ ಲೋಖಂಡೆ’ ಹೆಸರಿನ ಸಾಮಾಜಿಕ ಮಾಧ್ಯಮದ ವಿರುದ್ಧ ಪುಣೆ ಸೈಬರ್ ಪೋಲಿಸ್ ಪ್ರಕರಣ ದಾಖಲಿಸಿತ್ತು. ಇತ್ತೀಚೆಗೆ, ಪೊಲೀಸರು ಆತನ ಗುರುತು ಪತ್ತೆ ಹಚ್ಚಿ ಬಂಧಿಸಿದ್ದಾರೆ.
This is what is done in Maharashtra to ordinary citizens AFTER they get bail. SS thugs attack in full view of the cops! pic.twitter.com/3xiTHSdlZL
— Shefali Vaidya. ?? (@ShefVaidya) September 19, 2021
ಲಿಮಾಯೆ ಮುಖಕ್ಕೆ ಮಸಿ ಬಳಿಯುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ ಶೆಫಾಲಿ ವೈದ್ಯ ಸಾಮಾನ್ಯ ನಾಗರಿಕರಿಗೆ ಜಾಮೀನು ಸಿಕ್ಕಿದ ನಂತರ ಮಹಾರಾಷ್ಟ್ರದಲ್ಲಿ ಇದನ್ನು ಮಾಡಲಾಗಿದೆ. ಶಿವಸೇನಾ ಕೊಲೆಗಡುಕರು ಪೊಲೀಸರ ಕಣ್ಮುಂದೆಯೇ ದಾಳಿ ಮಾಡುತ್ತಾರೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: Kirit Somaiya ಕೊಲ್ಹಾಪುರ ಭೇಟಿಗೆ ಮುನ್ನ ಕಿರೀಟ್ ಸೋಮಯ್ಯ ಪೊಲೀಸ್ ವಶಕ್ಕೆ; ಠಾಕ್ರೆ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಇದನ್ನೂ ಓದಿ: Charanjit Singh Channi ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ
(Shiv Sena workers outside a Pune court blacken the face of a man who allegedly put out defamatory posts against Uddhav Thackeray Sharad Pawar)
Published On - 1:47 pm, Mon, 20 September 21