ಜಗತ್ತಿನ ಒಳಿತಿಗಾಗಿ ತಂತ್ರಜ್ಞಾನದ ಸದ್ಬಳಕೆ: ಬೈಡೆನ್ ಭೇಟಿಯ ನಂತರ ನರೇಂದ್ರ ಮೋದಿ ಹೇಳಿಕೆ

ಈ ದಶಕದಲ್ಲಿ ವ್ಯಾಪಾರವು ಒಂದು ಪ್ರಮುಖ ಕ್ಷೇತ್ರವಾಗಲಿದೆ. ಉಭಯ ದೇಶಗಳ ಸಂಬಂಧದಲ್ಲಿ ವ್ಯಾಪಾರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಜಗತ್ತಿನ ಒಳಿತಿಗಾಗಿ ತಂತ್ರಜ್ಞಾನದ ಸದ್ಬಳಕೆ: ಬೈಡೆನ್ ಭೇಟಿಯ ನಂತರ ನರೇಂದ್ರ ಮೋದಿ ಹೇಳಿಕೆ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 24, 2021 | 11:13 PM

ವಾಷಿಂಗ್​ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಶ್ವೇತಭವನದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ಶ್ವೇತಭವನಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ಮೋದಿ ಧನ್ಯವಾದ ಹೇಳಿದರು. ಮೋದಿ ಮಾತಿಗೆ ಪ್ರತಿಕ್ರಿಯಿಸಿದ ಬೈಡೆನ್, ನಿಮ್ಮ ಬಗ್ಗೆ ಹಲವು ವರ್ಷಗಳಿಂದ ನನಗೆ ಗೊತ್ತಿದೆ. 2014, 2016ರಲ್ಲೂ ನಿಮ್ಮ ಜೊತೆಗೆ ಮಾತುಕತೆ ನಡೆಸಿದ್ದೇನೆ. ಭಾರತ, ಅಮೆರಿಕ ಇತಿಹಾಸದಲ್ಲಿ ಇದು ಹೊಸ ಯುಗ ಎಂದು ಹೇಳಿದರು.

ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ತಂತ್ರಜ್ಞಾನವು ಪ್ರೇರಕ ಶಕ್ತಿಯಾಗುತ್ತಿದೆ. ಜಾಗತಿಕ ಒಳತಿಗಾಗಿ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳಲು ನಾವು ನಮ್ಮ ಪ್ರತಿಭೆಯನ್ನು ಬಳಸಿಕೊಳ್ಳಬೇಕು. ಬೈಡೆನ್ ಪ್ರಸ್ತಾಪಿಸಿದ ಪ್ರತಿಯೊಂದು ವಿಷಯವೂ ಭಾರತ-ಅಮೆರಿಕ ಬಾಂಧವ್ಯ ವೃದ್ಧಿಯಲ್ಲಿ ನಿರ್ಣಾಯಕವಾದವು. ಕೊವಿಡ್‌ ನಿಯಂತ್ರಣಕ್ಕಾಗಿ ಜೋ ಬೈಡೆನ್ ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಗಳು ಗಮನಾರ್ಹವಾಗಿವೆ. ಜಾಗತಿಕ ಸವಾಲುಗಳನ್ನು ಪರಿಹರಿಸಲು ಎರಡು ದೇಶಗಳ ಸಂಬಂಧದಿಂದ ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ ಎಂದರು.

ಈ ದಶಕದಲ್ಲಿ ವ್ಯಾಪಾರವು ಒಂದು ಪ್ರಮುಖ ಕ್ಷೇತ್ರವಾಗಲಿದೆ. ಉಭಯ ದೇಶಗಳ ಸಂಬಂಧದಲ್ಲಿ ವ್ಯಾಪಾರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಕೊವಿಡ್ ನಿಯಂತ್ರಿಸುವುದೇ ನಮ್ಮೆದುರಿನ ಬಹುದೊಡ್ಡ ಸವಾಲು ಎಂದು ಅಭಿಪ್ರಾಯಪಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಭಾರತ, ಅಮೆರಿಕ ಸಂಬಂಧ ಈಚಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗುತ್ತಿದೆ ಎಂದರು.

ದ್ವಿಪಕ್ಷೀಯ ಸಭೆಯಲ್ಲಿ ಭಾರತ-ಅಮೆರಿಕ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಿತು. ಜಾಗತಿಕ, ಪ್ರಾದೇಶಿಕ ವಿಚಾರಗಳ ಜೊತೆಗೆ ಅಫ್ಘಾನಿಸ್ತಾನದ ಬೆಳವಣಿಗೆಗಳು, ರಕ್ಷಣೆ, ವ್ಯಾಪಾರ ವೃದ್ಧಿ ಬಗ್ಗೆಯೂ ಮಹತ್ವದ ಚರ್ಚೆಗಳು ನಡೆದವು. ಬೈಡೆನ್ ಅಧ್ಯಕ್ಷರಾದ ಬಳಿಕ ಇದು ಮೊದಲ ಮುಖಾಮುಖಿ ಭೇಟಿಯಾಗಿದೆ. ಸಭೆಯಲ್ಲಿ ಉಭಯ ದೇಶಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಗೂ ಮುನ್ನ ಈ ಭೇಟಿ ನಡೆಯಿತು.

ಕೆಲ ಹೊತ್ತಿನಲ್ಲೇ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ಆರಂಭವಾಗಲಿದೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್ ದೇಶಗಳ ಉನ್ನತ ನಾಯಕತ್ವ ಈ ಸಭೆಯಲ್ಲಿ ಪಾಲ್ಗೊಳ್ಳಲಿದೆ. ಸಭೆಯ ಬಳಿಕೆ ಸಭೆ ಬಳಿಕ ಶ್ವೇತಭವನದಲ್ಲಿ ಜೋ ಬೈಡೆನ್‌ ಆಯೋಜಿಸಿರುವ ಔತಣಕೂಟದಲ್ಲಿ ಇತರ ದೇಶಗಳ ನಾಯಕರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಹ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಒಬಾಮ, ಟ್ರಂಪ್ ಬಳಿಕ ಜೋ ಬೈಡೆನ್ ಜತೆ ಮಾತುಕತೆ; ಪ್ರಧಾನಿ ಮೋದಿ ಭೇಟಿ ಆಗುತ್ತಿರುವ ಅಮೆರಿಕಾದ ಮೂರನೇ ಅಧ್ಯಕ್ಷ

ಇದನ್ನೂ ಓದಿ: ಮೋದಿ ಅಮೆರಿಕಕ್ಕೆ ಹೋದರೂ ಬಿಡದ ರಾಕೇಶ್ ಟಿಕಾಯತ್​; ಪ್ರಧಾನಿ ವಿರುದ್ಧ ಜೋ ಬೈಡನ್​ ಬಳಿಯೇ ದೂರು

(Narendra Modi in America Meeting President Joe Biden India US Bilateral Relations)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ