- Kannada News Photo gallery Ocean Photography 2021 results are announced see the amazing pics of the winners
ಈ ವರ್ಷದ ಸಾಗರ ಛಾಯಾಗ್ರಹಣ ಪ್ರಶಸ್ತಿಗಳು ಪ್ರಕಟ; ಕಣ್ಮನ ಸೆಳೆಯುವ ಚಿತ್ರಗಳು ಇಲ್ಲಿವೆ
Ocean Photography Awards 2021: ಈ ವರ್ಷದ ಸಾಗರ ಛಾಯಾಗ್ರಹಣ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬಹುಮಾನ ಪಡೆದ ಅದ್ಭುತವಾದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಸಾಮಾನ್ಯರಿಗೆ ಅಪರೂಪವಾದ ಈ ವಿಭಿನ್ನ ಪ್ರಪಂಚದ ಕಣ್ಮನ ಸೆಳೆಯುವ, ಮನಸ್ಸನ್ನು ಆರ್ದ್ರಗೊಳಿಸುವ ಅಪರೂಪದ ಚಿತ್ರಗಳು ಇಲ್ಲಿವೆ.
Updated on:Sep 25, 2021 | 3:58 PM

2021 ರ ಸಾಗರ ಛಾಯಾಗ್ರಹಣ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಗಾಜಿನ ಮೀನುಗಳಿಂದ (Glass Fish) ಆವೃತವಾದ ಹಸಿರು ಆಮೆಯ ಚಿತ್ರಕ್ಕಾಗಿ ಐಮಿ ಜಾನ್ ಪ್ರಥಮ ಸ್ಥಾನವನ್ನು ಪಡೆದಿದ್ದು, ವರ್ಷದ ಛಾಯಾಗ್ರಾಹಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ವರ್ಷದ ಸಾಗರ ಛಾಯಾಗ್ರಾಹಕರಲ್ಲದೆ, ಸ್ಪರ್ಧೆಯಲ್ಲಿ ಇತರ ಏಳು ಪ್ರಶಸ್ತಿಗಳಿವೆ. ಹೆನ್ಲಿ ಸ್ಪಿಯರ್ಸ್ ತನ್ನ ಕಡಲ ಪಕ್ಷಿಗಳ ಚಿತ್ರಕ್ಕಾಗಿ ಎರಡನೇ ಬಹುಮಾನವನ್ನು ಪಡೆದಿದ್ದಾರೆ.

ಮೂರನೆಯ ಸ್ಥಾನವು ಆಮೆ ಮೊಟ್ಟೆಯೊಡೆಯುವ ಅದ್ಭುತವಾದ ಚಿತ್ರಕ್ಕಾಗಿ ಮ್ಯಾಟಿ ಸ್ಮಿತ್ ಅವರಿಗೆ ಲಭಿಸಿದೆ. ಕೇವಲ ಮೂರು ನಿಮಿಷದ ಮೊದಲು ಮೊಟ್ಟೆ ಒಡೆದು ಹೊರಬಂದ ಈ ಆಮೆ, ತನ್ನ ಒಡಹುಟ್ಟಿದ ನೂರಾರು ಸೋದರರಿಗಿಂತ ಮೊದಲು ಹೊರಬಂತು. ತಕ್ಷಣ ಚಿತ್ರವನ್ನು ತೆಗದು ಅವುಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದಾಗ, ಛಾಯಾಗ್ರಾಹಕ ತಿಳಿಸಿದ್ದಾರೆ.

ಈ ಚಿತ್ರಕ್ಕಾಗಿ ಬೆಹನ್ ಥೌವರ್ಡ್ ವರ್ಷದ ಅಡ್ವೆಂಚರ್ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಮುದಾಯ ಆಯ್ಕೆ ಪ್ರಶಸ್ತಿ ವಿಭಾಗದಲ್ಲಿ, ಫಿಲ್ ಡಿ ಗ್ಲಾನ್ವಿಲ್ಲೆ ಅವರ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

ವರ್ಷದ ಸಾಗರ ಸಂರಕ್ಷಣಾ ಛಾಯಾಗ್ರಾಹಕ ಪ್ರಶಸ್ತಿಯು ಟರ್ಕಿಯಲ್ಲಿ ಪ್ರಸ್ತುತ ತ್ಯಜಿಸಲಾಗಿರುವ ಮೀನುಗಾರಿಕಾ ಮಾರ್ಗದಲ್ಲಿ ಸತ್ತ ಈಲ್ ಮೀನಿನ ಚಿತ್ರಕ್ಕಾಗಿ ಕೆರಿಮ್ ಸಬುನ್‌ಕುಗ್ಲು ಪಡೆದಿದ್ದಾರೆ.

ಗ್ಯಾಲಿಸ್ ಹೋರಾ ಸಂರಕ್ಷಣಾ ವಿಭಾಗದ ಪ್ರಶಸ್ತಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಮಾರ್ಟಿನ್ ಬ್ರೊಯೆನ್ ಅವರು ತಮ್ಮ ಈ ಅಪರೂಪದ ಚಿತ್ರಕ್ಕಾಗಿ ವರ್ಷದ ಎಕ್ಸ್ಪ್ಲೊರೇಷನ್ ಪ್ರಶಸ್ತಿ ಪಡೆದಿದ್ದಾರೆ.

ಸ್ಟೀವನ್ ಕೊವ್ಯಾಕ್ಸ್ ತೆಗೆದಿರುವ ಆಳವಾದ ಸಮುದ್ರದಲ್ಲಿ ಕಂಡುಬರುವ ಕಸ್ಕ್ ಈಲ್ ಲಾರ್ವಾಕ್ಕಾಗಿ ಎಕ್ಸ್ಪ್ಲೊರೇಷನ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಮಹಿಳೆಯರಿಗಾಗಿ ನೀಡಲಾಗುವ ‘ದಿ ಫೀಮೇಲ್ ಫಿಫ್ಟಿ ಫ್ಯಾಥಮ್ಸ್’ ಪ್ರಶಸ್ತಿಯನ್ನು ರೆನಿ ಕ್ಯಾಪೊಜೋಲಾ ಪಡೆದಿದ್ದಾರೆ.

ಈ ಚಿತ್ರಕ್ಕಾಗಿ ಹನ್ನಾ ಲೇ ಲೂ ವರ್ಷದ ಯುವ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Published On - 3:52 pm, Sat, 25 September 21




