‘ಸೋಜುಗಾದ ಸೂಜುಮಲ್ಲಿಗೆ..’ ಸಿಂಗರ್​ ಅನನ್ಯಾ ಭಟ್​ ಈಗ ಹೀರೋಯಿನ್​; ‘ಸೇನಾಪುರ’ಕ್ಕೆ ಸಂಗೀತವೂ ಅವರದ್ದೇ

‘ಸೋಜುಗಾದ ಸೂಜುಮಲ್ಲಿಗೆ..’ ಹಾಡಿನಿಂದಾಗಿ ಗಾಯಕಿ ಅನನ್ಯಾ ಭಟ್​ ಅವರ ಖ್ಯಾತಿ ದುಪ್ಪಟ್ಟಾಗಿತ್ತು. ಇಷ್ಟೆಲ್ಲ ಜನಪ್ರಿಯತೆ ಗಳಿಸಿರುವ ಅವರು ಈಗ ‘ಸೇನಾಪುರ’ ಚಿತ್ರದಲ್ಲಿ ಹೀರೋಯಿನ್​ ಆಗಿದ್ದಾರೆ.

‘ಸೋಜುಗಾದ ಸೂಜುಮಲ್ಲಿಗೆ..’ ಸಿಂಗರ್​ ಅನನ್ಯಾ ಭಟ್​ ಈಗ ಹೀರೋಯಿನ್​; ‘ಸೇನಾಪುರ’ಕ್ಕೆ ಸಂಗೀತವೂ ಅವರದ್ದೇ
ಅನನ್ಯಾ ಭಟ್​


ಕನ್ನಡ ಚಿತ್ರರಂಗದ ಖ್ಯಾತ ಗಾಯಕಿ ಅನನ್ಯಾ ಭಟ್​ ಅವರು ಓರ್ವ ಉತ್ತಮ ನಟಿ ಕೂಡ ಹೌದು. ‘ರಾಮಾ ರಾಮಾ ರೇ’, ‘ಕೆಜಿಎಫ್​: ಚಾಪ್ಟರ್​ 1’ ಮುಂತಾದ ಸಿನಿಮಾದ ಹಾಡುಗಳಿಗೆ ಧ್ವನಿ ನೀಡುವ ಮೂಲಕ ಅವರು ಫೇಮಸ್​ ಆಗಿದ್ದಾರೆ. ಅಲ್ಲದೇ, ‘ಸೋಜುಗಾದ ಸೂಜುಮಲ್ಲಿಗೆ..’ ಹಾಡಿನಿಂದಾಗಿ ಅವರ ಖ್ಯಾತಿ ದುಪ್ಪಟ್ಟಾಗಿದೆ. ಇಷ್ಟೆಲ್ಲ ಜನಪ್ರಿಯತೆ ಗಳಿಸಿರುವ ಅವರು ಈಗ ‘ಸೇನಾಪುರ’ ಚಿತ್ರದಲ್ಲಿ ಹೀರೋಯಿನ್​ ಆಗಿದ್ದಾರೆ. ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಅಲ್ಲದೇ, ‘ಸೇನಾಪುರ’ ಹಾಡುಗಳಿಗೆ ಸಂಗೀತ ನಿರ್ದೇಶನವನ್ನೂ ಅವರೇ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಮುಖ್ಯ ಪಾತ್ರ ಮಾಡಿ, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿರುವುದು ಅನನ್ಯಾ ಭಟ್​ ಅವರ ಹೆಚ್ಚುಗಾರಿಕೆ. ಈ ಚಿತ್ರಕ್ಕೆ ಗುರು ಸಾವನ್​ ನಿರ್ದೇಶನ ಮಾಡಿದ್ದಾರೆ. ದಿನೇಶ್‌ ಮಂಗಳೂರು, ಬಿ.ಎಂ. ಗಿರಿರಾಜ್, ಸಿಂಧೂ, ಶೇಖರ್‌ ರಾಜ್, ರೀನಾ, ಅಮೂಲ್ಯ, ಪರಮೇಶ್ ಮುಂತಾದವರು ಇನ್ನುಳಿದ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಪ್ರಶಾಂತ್‌ ಸಾಗರ್ ಛಾಯಾಗ್ರಹಣ, ಪ್ರಮೋದ್‌ ಮರವಂತೆ ಸಾಹಿತ್ಯ, ಅರ್ಜುನ್‌ ಶ್ರೀನಿವಾಸಯ್ಯ ಸಂಕಲನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಮಂಗಳೂರು, ಸಂಪೆಕಟ್ಟೆ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರಸ್ತುತ ‘ಸೇನಾಪುರ’ದ ಡಬ್ಬಿಂಗ್​ ಕೆಲಸಗಳು ಜಾಲ್ತಿಯಲ್ಲಿವೆ. ಅಮಿತ್​ ಕುಮಾರ್​ ಮತ್ತು ರಾಹುಲ್​ ದೇವ್​ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

(ಸೇನಾಪುರ ಚಿತ್ರದ ಟೀಸರ್​)

ಇತ್ತೀಚೆಗೆ ಈ ಸಿನಿಮಾ ಟೀಸರ್​ ಬಿಡುಗಡೆ ಆಗಿದೆ. ಆ ಮೂಲಕ ಕಥೆ ಏನೆಂಬುದನ್ನು ಚುಟುಕಾಗಿ ವಿವರಿಸಲಾಗಿದೆ. ಕರುನಾಡಿನಲ್ಲಿ ಎಗ್ಗಿಲ್ಲದೇ ರಾರಾಜಿಸಿದ್ದ ಗಣಿ ದಂಧೆಯ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗಲಿದೆ. ಕರಾವಳಿ ಭಾಗದಲ್ಲೂ ಈ ದಂಧೆ ಸಕ್ರಿಯವಾಗಿತ್ತು. ಅದಕ್ಕೆ ಸಂಬಂಧಿಸಿದ ನೈಜ ಘಟನೆಗಳನ್ನೇ ಆಧರಿಸಿ ‘ಸೇನಾಪುರ’ ಚಿತ್ರ ಮಾಡಲಾಗುತ್ತಿದೆ.

Senapura Kannada Movie

(ಸೇನಾಪುರ ಸಿನಿಮಾ ತಂಡ)

ಮೊದಲು ಈ ಕಥೆ ಇಟ್ಟುಕೊಂಡು ವೆಬ್​ ಸಿರೀಸ್​ ಮಾಡಬೇಕು ಎಂಬುದು ನಿರ್ದೇಶಕರ ಪ್ಲ್ಯಾನ್​ ಆಗಿತ್ತು. ಆದರೆ ಅದೀಗ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಈ ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:

Ananya Bhat: ‘ಪ್ರೀತಿ ಎಂದರೇನು’ ಮ್ಯೂಸಿಕ್​ ವಿಡಿಯೋ ಮೂಲಕ ಗಮನ ಸೆಳೆದ ಅನನ್ಯಾ ಭಟ್​, ಹೃದಯ ಶಿವ

ಭರ್ಜರಿಯಾಗಿ ರೆಡಿ ಆಗ್ತಿದೆ ಕಿಚ್ಚನ ‘ಕೋಟಿಗೊಬ್ಬ 3’ ಕಟೌಟ್​; ಸಂಭ್ರಮಕ್ಕೆ ತಯಾರಿ ಹೇಗಿದೆ ನೋಡಿ

Read Full Article

Click on your DTH Provider to Add TV9 Kannada