ವೃದ್ಧೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪ್ರಿಯಕರನಿಂದಲೇ ದರೋಡೆಗೆ ಸ್ಕೆಚ್ ಹಾಕಿಸಿದ್ಲು
ಬೆಂಗಳೂರು: ಕೊರಿಯರ್ ಕೊಡವ ನೆಪದಲ್ಲಿ ಮನೆಗೆ ಬಂದು ವೃದ್ಧೆಯ ಮೇಲೆ ಹಲ್ಲೆ ಮಾಡಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನವೀನ್ ಕುಮಾರ್, ಮಂಜುನಾಥ್ ಬಂಧಿತ ಆರೋಪಿಗಳು. ಬಂಧಿತರಿಂದ 2ಲಕ್ಷ ಮೌಲ್ಯದ 620ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಕೊರಿಯರ್ ಕೊಡುವ ನೆಪದಲ್ಲಿ ದರೋಡೆ: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳ ಹಿಂದೆ ವೃದ್ಧೆ ಉಷಾ ಬಾಲಕೃಷ್ಣನ್ ಎಂಬುವರು ಮನೆಯಲ್ಲಿ ಒಬ್ಬರೇ ಇದ್ದಾಗ ರಾಬರಿ ಮಾಡಲಾಗಿತ್ತು. ಆರೋಪಿ ನವೀನ್ ಕುಮಾರ್ […]
ಬೆಂಗಳೂರು: ಕೊರಿಯರ್ ಕೊಡವ ನೆಪದಲ್ಲಿ ಮನೆಗೆ ಬಂದು ವೃದ್ಧೆಯ ಮೇಲೆ ಹಲ್ಲೆ ಮಾಡಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನವೀನ್ ಕುಮಾರ್, ಮಂಜುನಾಥ್ ಬಂಧಿತ ಆರೋಪಿಗಳು. ಬಂಧಿತರಿಂದ 2ಲಕ್ಷ ಮೌಲ್ಯದ 620ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಕೊರಿಯರ್ ಕೊಡುವ ನೆಪದಲ್ಲಿ ದರೋಡೆ: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳ ಹಿಂದೆ ವೃದ್ಧೆ ಉಷಾ ಬಾಲಕೃಷ್ಣನ್ ಎಂಬುವರು ಮನೆಯಲ್ಲಿ ಒಬ್ಬರೇ ಇದ್ದಾಗ ರಾಬರಿ ಮಾಡಲಾಗಿತ್ತು. ಆರೋಪಿ ನವೀನ್ ಕುಮಾರ್ ಕೊರಿಯರ್ ಕೊಡುವ ನೆಪದಲ್ಲಿ ಮನೆಗೆ ಬಂದು ವೃದ್ಧೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕದ್ದಿದ್ದ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹಲವೆಡೆ ತನಿಖೆ ನಡೆಸಿ ಸಾಕಷ್ಟು ತಲೆಕೆಡಿಸಿಕೊಂಡಿದ್ದರು.
ಕೊನೆಗೆ ವೃದ್ಧೆಯ ಮನೆಯಲ್ಲಿ ಕೆಲಸಮಾಡುತ್ತಿದ್ದ ಯುವತಿಯ ಪ್ರಿಯಕರನಿಂದ ದರೋಡೆಗೆ ಸ್ಕೆಚ್ ನಡೆದಿರುವುದು ಬೆಳಕಿಗೆ ಬಂದಿದೆ. ಯುವತಿಯ ಪ್ರಿಯಕರ ಮಂಜುನಾಥ್ ರಾಬರಿಗೆ ಸ್ಕೆಚ್ ಹಾಕಿದ್ದ. ಮನೆಗೆಲಸ ಮಾಡುತ್ತಿದ್ದ ಯುವತಿ ತನ್ನ ಲವ್ವರ್ ಮಂಜುನಾಥ್ನನ್ನ ಗಾರ್ಡನ್ ಕೆಲಸಕ್ಕೆ ಸೇರಿಸಿದ್ದಳು. ಗಾರ್ಡನ್ನಲ್ಲೇ ಕೆಲಸ ಮಾಡುತ್ತಾ ವೃದ್ಧೆಯ ಮನೆಯಲ್ಲಿ ದರೋಡೆ ಮಾಡುವ ಸ್ಕೆಚ್ ಹಾಕಿದ್ದ.
ಚಿನ್ನಾಭರಣ ಹಂಚಿಕೊಂಡಿದ್ದ ಆರೋಪಿಗಳು: ಮೊದಲಿಗೆ ಆರೋಪಿ ಮಂಜುನಾಥ್ ವೃದ್ಧೆಯ ಮನೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ. ಬಳಿಕ ತನ್ನ ಸ್ನೇಹಿತ ನವೀನ್ ಕುಮಾರ್ಗೆ ವಿಚಾರ ತಿಳಿಸಿದ್ದಾನೆ. ಮನೆಯಲ್ಲಿ ಯಾರು ಇಲ್ಲದೆ ಇರುವ ಸಮಯದಲ್ಲಿ ನವೀನ್ ದರೋಡೆ ಮಾಡಿದ್ದಾನೆ. ಬಳಿಕ ಸಿಕ್ಕ ಚಿನ್ನಾಭರಣಗಳನ್ನ ಆರೋಪಿಗಳಿಬ್ಬರೂ ಹಂಚಿಕೊಂಡಿದ್ದರು. ಆದ್ರೆ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಲೊಕೇಷನ್ನಲ್ಲಿ ಆಕ್ಟೀವ್ ಆಗಿದ್ದ ನಂಬರ್ ಆಧಾರದ ಮೇಲೆ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.