ಆಸ್ತಿ ಕಲಹ: ತಮ್ಮನ ಮೇಲೆ ಅಣ್ಣ, ಆತನ ಮಕ್ಕಳಿಂದಲೇ ಮಾರಣಾಂತಿಕ ಹಲ್ಲೆ

|

Updated on: Dec 14, 2019 | 3:40 PM

ಬೆಳಗಾವಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣ, ಅಣ್ಣನ ಮಕ್ಕಳಿಬ್ಬರು ಸಹೋದರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಮಚಂದ್ರ ದೇಸಾಯಿ(55) ಮೇಲೆ ರುದ್ರಪ್ಪಾ ದೇಸಾಯಿ ಹಾಗೂ ಮಕ್ಕಳಾದ ನಾಗೇಶ್, ಮಹೇಶ್‌ ಎಂಬುವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಮಚಂದ್ರಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಆರೋಪಿ ರುದ್ರಪ್ಪ ದೇಸಾಯಿಯನ್ನು ಕಿತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಆಸ್ತಿ ಕಲಹ: ತಮ್ಮನ ಮೇಲೆ ಅಣ್ಣ, ಆತನ ಮಕ್ಕಳಿಂದಲೇ ಮಾರಣಾಂತಿಕ ಹಲ್ಲೆ
Follow us on

ಬೆಳಗಾವಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣ, ಅಣ್ಣನ ಮಕ್ಕಳಿಬ್ಬರು ಸಹೋದರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾಮಚಂದ್ರ ದೇಸಾಯಿ(55) ಮೇಲೆ ರುದ್ರಪ್ಪಾ ದೇಸಾಯಿ ಹಾಗೂ ಮಕ್ಕಳಾದ ನಾಗೇಶ್, ಮಹೇಶ್‌ ಎಂಬುವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಮಚಂದ್ರಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಆರೋಪಿ ರುದ್ರಪ್ಪ ದೇಸಾಯಿಯನ್ನು ಕಿತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.