ಪುತ್ರ ವ್ಯಾಮೋಹದಲ್ಲಿ ವಂಚನೆಗೀಡಾದ ವೃದ್ಧೆ: ಸಂಬಂಧಿ ನಿರ್ದೇಶಕ, ನಿರ್ಮಾಪಕ ಪರಾರಿ
ಬೆಂಗಳೂರು: ಸಂಬಂಧಿಕರ ನಂಬಿ ವೃದ್ಧೆಯೊಬ್ಬರು 10 ಲಕ್ಷ ರೂಪಾಯಿ ಮತ್ತು ಸುಮಾರು ಅರ್ಧ ಕೆಜಿ ಚಿನ್ನ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಕೇಸ್‌ವೊಂದರಲ್ಲಿ ವೃದ್ಧೆ ಗಿರಿಜಮ್ಮ ಅವರ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಪುತ್ರನನ್ನ ಬಿಡಿಸುವುದಾಗಿ ನಂಬಿಸಿ, ಗಿರಿಜಮ್ಮಗೆ ಅವರ ಸಂಬಂಧಿಗಳೇ ಆದ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಿರ್ಮಾಪಕ ನವೀನ್ ರಾಜ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಿರ್ದೇಶಕ ಪ್ರಶಾಂತ್ ರಾಜ್, ನಿರ್ಮಾಪಕ ನವೀನ್ ರಾಜ್ ಮತ್ತು ಆತನ ಮಾವ ನಾಗರಾಜ್ ಗಿರಿಜಮ್ಮ ಬಳಿ ₹10 ಲಕ್ಷ, 542 […]
ಬೆಂಗಳೂರು: ಸಂಬಂಧಿಕರ ನಂಬಿ ವೃದ್ಧೆಯೊಬ್ಬರು 10 ಲಕ್ಷ ರೂಪಾಯಿ ಮತ್ತು ಸುಮಾರು ಅರ್ಧ ಕೆಜಿ ಚಿನ್ನ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಕೇಸ್‌ವೊಂದರಲ್ಲಿ ವೃದ್ಧೆ ಗಿರಿಜಮ್ಮ ಅವರ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಪುತ್ರನನ್ನ ಬಿಡಿಸುವುದಾಗಿ ನಂಬಿಸಿ, ಗಿರಿಜಮ್ಮಗೆ ಅವರ ಸಂಬಂಧಿಗಳೇ ಆದ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಿರ್ಮಾಪಕ ನವೀನ್ ರಾಜ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಿರ್ದೇಶಕ ಪ್ರಶಾಂತ್ ರಾಜ್, ನಿರ್ಮಾಪಕ ನವೀನ್ ರಾಜ್ ಮತ್ತು ಆತನ ಮಾವ ನಾಗರಾಜ್ ಗಿರಿಜಮ್ಮ ಬಳಿ ₹10 ಲಕ್ಷ, 542 ಗ್ರಾಂ ಚಿನ್ನ ಪಡೆದು ವಂಚನೆ ಎಸಗಿದ್ದಾರೆ. ಜೊತೆಗೆ, ಪುತ್ರನನ್ನ ಬಿಡಿಸುವುದಕ್ಕೆ ವೃದ್ಧೆ ಗಿರಿಜಮ್ಮ ಬಳಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ. ಗಿರಿಜಮ್ಮಗೆ ಈ ಮೂವರೂ ಹತ್ತಿರ ಸಂಬಂಧಿಗಳು ಎಂದು ತಿಳಿದುಬಂದಿದೆ.
ಮೊದಲು, ಆರೋಪಿಗಳ ಮಾತನ್ನು ನಂಬಿ ಗಿರಿಜಮ್ಮ 10 ಲಕ್ಷ ರೂಪಾಯಿ ನೀಡಿದ್ದರು. ಆದ್ರೆ ಈ ಹಣ ಸಾಕಾಗಲ್ಲ ಅಂದಿದ್ದಕ್ಕೆ 542 ಗ್ರಾಂ ಚಿನ್ನ ಸಹ ನೀಡಿದ್ರು. ಆದ್ರೆ ಕಾನೂನು ಪ್ರಕಾರವೇ ವೃದ್ಧೆ ಗಿರಿಜಮ್ಮ ಅವರ ಪುತ್ರ ಬಿಡುಗಡೆಯಾಗಿದ್ದ. ಪುತ್ರ ಮನೆಗೆ ಬಂದ ಬಳಿಕ ಆರೋಪಿಗಳ ವಂಚನೆ ಬೆಳಕಿಗೆ ಬಂದಿದೆ. ಗಿರಿಜಮ್ಮ, ಕೂಡಲೇ HAL ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಹೆಚ್‌ಎಎಲ್ ಠಾಣೆ ಪೊಲೀಸರಿಂದ ಶೋಧ ನಡೆದಿದೆ.
Published On - 10:30 am, Sun, 15 December 19