ಬೀಗ ಹಾಕಿದ್ದ ಮನೆಗಳೇ ಇವರ ಟಾರ್ಗೆಟ್: ಒಟ್ಟು 5 ಲಕ್ಷ ನಗದು,150 ಗ್ರಾಂಗೂ ಅಧಿಕ ಚಿನ್ನಾಭರಣ ಕಳ್ಳತನ

| Updated By: ಗಂಗಾಧರ​ ಬ. ಸಾಬೋಜಿ

Updated on: May 02, 2022 | 8:06 PM

ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ ಬಳಿ ಘಟನೆ ನಡೆದಿದ್ದು, ತೆಲಂಗಾಣದ ರಂಗಾರೆಡ್ಡಿ ಮೂಲದ ಸಾಯಿಕಿರಣ್ ರೆಡ್ಡಿ (25) ಆತನ ಸ್ನೇಹಿತ ಸಾವನ್ನಪ್ಪಿದ್ದಾರೆ.

ಬೀಗ ಹಾಕಿದ್ದ ಮನೆಗಳೇ ಇವರ ಟಾರ್ಗೆಟ್: ಒಟ್ಟು 5 ಲಕ್ಷ ನಗದು,150 ಗ್ರಾಂಗೂ ಅಧಿಕ ಚಿನ್ನಾಭರಣ ಕಳ್ಳತನ
ಸಾಂದರ್ಭಿಕ ಚಿತ್ರ
Follow us on

ತುಮಕೂರು: ತುಮಕೂರಿನಲ್ಲಿ ಮನೆಗಳ್ಳರ ಹಾವಳಿ ಹೆಚ್ಚಿದ್ದು, ನಗರದ ಒಂದೇ ಏರಿಯಾದಲ್ಲಿ 7 ಕಡೆ ಸರಣಿ ಮನೆಗಳ್ಳತನ (Theft) ನಡೆದಿರುವಂತಹ ಘಟನೆ ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ನಡೆದಿದೆ. ನಿನ್ನೆ ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿರುವ ಖದೀಮರು. ಒಟ್ಟು 5 ಲಕ್ಷ ನಗದು, 150 ಗ್ರಾಂ ಗೂ ಅಧಿಕ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದು, ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಸ್ ಮತ್ತು ಬೈಕ್ ನಡುವೆ ಅಪಘಾತ; ಬೈಕ್​ ಸವಾರ ಸ್ಥಳದಲ್ಲೇ ಸಾವು:

ಕಲಬುರಗಿ: ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ ಬಳಿ ಘಟನೆ ನಡೆದಿದ್ದು, ತೆಲಂಗಾಣದ ರಂಗಾರೆಡ್ಡಿ ಮೂಲದ ಸಾಯಿಕಿರಣ್ ರೆಡ್ಡಿ (25) ಆತನ ಸ್ನೇಹಿತ ಸಾವನ್ನಪ್ಪಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಟ್ರ್ಯಾಕ್ಟರ್ ಮಗುಚಿ ಬಿದ್ದು ಯುವಕ ದುರ್ಮರಣ:

ಕೊಡಗು: ಟ್ರ್ಯಾಕ್ಟರ್ ಮಗುಚಿ ಬಿದ್ದು ಯುವಕ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ಶಿವರಾಜು (21) ಮೃತ ಯುವಕ. ಚಾಲಕನ ನಿಯಂತ್ರಣ ತಪ್ಪಿ‌ ಟ್ರ್ಯಾಕ್ಟರ್ ಮಗುಚಿ ಬಿದ್ದು ಅವಘಡ ಸಂಭವಿಸಿದೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಸ ತೆಗೆಯುತ್ತಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ವೃದ್ಧ ಸಾವು:

ಕಾರವಾರ: ಕಸ ತೆಗೆಯುತ್ತಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದು ವೃದ್ಧ ಸಾವನ್ನಪ್ಪಿರುವಂತಹ ದುರ್ಘಟನೆ ಉ.ಕ ಜಿಲ್ಲೆಯ ಕುಮಟಾ ತಾಲೂಕಿನ ಅಳ್ವೆಕೋಡಿಯಲ್ಲಿ ನಡೆದಿದೆ. ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸುತ್ತಿರುವ ವೇಳೆ ಅವಘಡ ಸಂಭವಿಸಿದೆ. ಚಂದ್ರಶೇಖರ ಭೂಪಾಲ ನಾಯ್ಕ (72) ಮೃತ ದುರ್ದೈವಿ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಅನುಮಾನಸ್ಪದ ಸಾವು:

ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಓರ್ವ ಅನುಮಾನಸ್ಪದ ಸಾವನ್ನಪ್ಪಿರುವಂತಹ ಘಟನೆ ನಂಜನಗೂಡು ತಾಲ್ಲೂಕು ಹಿಮ್ಮಾವು ಗ್ರಾಮದಲ್ಲಿ ನಡೆದಿದೆ. ಬೇಬಿ (28) ಮೃತ ದುರ್ದೈವಿ. ಬೇಬಿ ಮೂಲತಃ ನಂಜನಗೂಡು ಲಲಿತಾಪುರ ಗ್ರಾಮದವರಾಗಿದ್ದು, 8 ವರ್ಷದ ಹಿಂದೆ ಹಿಮ್ಮಾವು ಗ್ರಾಮದ ಉಮೇಶ್‌ ಜೊತೆ ಮದುವೆಯಾಗಿದ್ದರು. ಹಣಕ್ಕಾಗಿ ಪೀಡಿಸುತ್ತಿದ್ದ ಉಮೇಶ್ ಜಗಳ ಮಾಡಿ ಕೊಲೆ ಮಾಡಿರುವುದಾಗಿ ಮೃತ ಬೇಬಿ ಪೋಷಕರು ಆರೋಪಿಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.