ಗದಗದಲ್ಲಿ ಲವ್ ಜಿಹಾದ್ ಬೆಳಕಿಗೆ: ವಿವಾಹಿತ ಮುಸ್ಲಿಂ ಯುವಕನ ಮೋಸದ ಜಾಲಕ್ಕೆ ಬಿದ್ದ ಹಿಂದೂ ಯುವತಿ
ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗ ಗದಗ ಜಿಲ್ಲೆಯಲ್ಲೂ ಲವ್ ಜಿಹಾದ್ ಬೆಳಕಿಗೆ ಬಂದಿದ್ದು, ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬ ತಂಗಿ ತಂಗಿ ಎನ್ನುತ್ತಲೇ ಹಿಂದೂ ಯುವತಿಯನ್ನು ಬುಟ್ಟಿಗೆ ಬೀಳಿಸಿದ್ದು, ಯುವತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಆದರೆ, ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಯುವತಿ ಮನೆಯವರು ಕಣ್ಣೀರು ಸುರಿಸುತ್ತಿದ್ದಾರೆ.
ಗದಗ, ಜ.30: ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದು ಲವ್ ಜಿಹಾದ್ (Love Jihad) ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗ ಗದಗ (Gadag) ಜಿಲ್ಲೆಯಲ್ಲೂ ಲವ್ ಜಿಹಾದ್ ಬೆಳಕಿಗೆ ಬಂದಿದ್ದು, ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬ ತಂಗಿ ತಂಗಿ ಎನ್ನುತ್ತಲೇ ಹಿಂದೂ ಯುವತಿಯನ್ನು ಬುಟ್ಟಿಗೆ ಬೀಳಿಸಿದ್ದಾನೆ. ಅಷ್ಟೇ ಅಲ್ಲದೆ, ಈತ ಮತ್ತಿಬ್ಬರು ಹಿಂದೂ ಯುವತಿಯರ ಸಂಪರ್ಕದಲ್ಲಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಮುಸ್ಲಿಂ ಯುವಕನಿಗೆ ಮದುವೆಯಾಗಿದ್ದರೂ ಹಿಂದೂ ಯುವತಿ ಜೊತೆಗೆ ಪ್ರೀತಿಯ ನಾಟಕವಾಡುತ್ತಿದ್ದಾನೆ. ತಂಗಿ ತಂಗಿ ಅಂತಾ ಕರೆಯುತ್ತಿದ್ದ ಈತನ ಮೋಸದ ಜಾಲಕ್ಕೆ ತನ್ನ ಮಗಳು ಬಲಿಯಾದಳು ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ನೀನಿಲ್ಲದೆ ನಾವು ಹೇಗೆ ಇರೋಣ, ಬೇಗ್ ಬಾ ಮಗಳೇ ಅಂತ ಹೆತ್ತವ್ವ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ.
ಗದಗ ಬೆಟಗೇರಿ ಅವಳಿ ನಗರದ, ಮಂಜುನಾಥ ನಗರದ 19 ವರ್ಷದ ಹಿಂದೂ ಯುವತಿಯನ್ನು ವಿವಾಹಿತ ಮುಸ್ಲಿಂ ಯುವಕ ಅಮೀರ್ ಕುಕನೂರು (30) ಎಂಬಾತ ಸಂಪರ್ಕದಲ್ಲಿದ್ದ. ತಂಗಿ ತಂಗಿ ಅಂತ ಕರೆಯುತ್ತಿದ್ದನು. ಅಷ್ಟೇ ಅಲ್ಲದೆ, ಹಿಂದೂ ಧರ್ಮದ ಇನ್ನೂ ಇಬ್ಬರು ಯುವತಿಯರ ಜೊತೆ ಪ್ರೀತಿ ಪ್ರೇಮ ಅಂತಾ ನಾಟಕವಾಡುತ್ತಿದ್ದಾನೆ ಎನ್ನುವ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ: ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿದರೆ ನಮ್ಮ ಮಕ್ಕಳೂ ಲೆಹೆಂಗಾ ಧರಿಸಿ ಶಾಲೆಗೆ ಬರ್ತಾರೆ: ಬಿಜೆಪಿ ಶಾಸಕ
ಜನವರಿ 16 ರಂದು ಯುವತಿಯನ್ನು ಅಪಹರಣ ಮಾಡಿದ್ದಾನೆ ಎಂದು ಪೋಷಕರು ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಗದಗ ಎಸ್ಪಿಗೆ ಮನವಿ ಸಲ್ಲಿಸಿ, ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ನಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಎಚ್ಚೆತ್ತುಕೊಳ್ಳದ ಬೆಟಗೇರಿ ಠಾಣಾ ಪೊಲೀಸರು
ಪೋಷಕರು ಲವ್ ಜಿಹಾದ್ ಎಂದು ಆರೋಪಿಸುತ್ತಿದ್ದರೂ ಬೆಟಗೇರಿ ಠಾಣಾ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ. ದೂರು ನೀಡಿ ಒಂದು ವಾರ ಕಳೆದರೂ ನಮ್ಮ ಮಗಳನ್ನು ಹುಡುಕಾಡುವ ಪ್ರಯತ್ನ ಮಾಡುತ್ತಿಲ್ಲ. ಮಗಳ ಬಗ್ಗೆ ಕೇಳಿದರೆ ಕಾರ್ ಬಾಡಿಗೆ ಮಾಡಿ ನಾವು ನೀವು ಒಟ್ಟು ಸೇರಿಕೊಂಡು ಪತ್ತೆಹಚ್ಚೋಣ ಎನ್ನುತ್ತಿದ್ದಾರೆ. ಅಲ್ಲದೆ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಬಡವರು, ನಮ್ಮಿಂದ ಹಣ ಕೇಳಿದರೆ ಎಲ್ಲಿಂದ ತರೋಣ ಅಂತ ಅಸಮಾಧಾನ ಹೊರಹಾಕುತ್ತಿರುವ ಯುವತಿ ತಂದೆ, ನಮ್ಮ ಮಗಳಿಗೆ ಏನಾದರು ಆದರೆ ಹೇಗೆ ಎಂಬ ಭಯ ಕಾಡುತ್ತಿದೆ. ಮಗಳೇ ನೀ ಎಲ್ಲಿದ್ದಿ ಬಾರಮ್ಮ ಎಂದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮನೆಯ ಮುದ್ದಿನ ಮಗಳು. ನೀನಿಲ್ಲದೇ ನಾವು ಹೇಗೆ ಇರೋಣ ಬೇಗ್ ಬಾ ಅಂತ ಕಣ್ಣೀರು ಹಾಕುತ್ತಿದ್ದಾರೆ.
ಮಗಳ ಕಿಡ್ನಾಪ್ ನಂತರ ಪೋಷಕರಿಂದ ಆತ್ಮಹತ್ಯೆ ಯತ್ನ
ಮಗಳು ಅನ್ಯಕೋಮಿನ ವ್ಯಕ್ತಿಯೊಂದಿಗೆ ಹೋದ ವಿಚಾರ ತಿಳಿದ ತಂದೆ, ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ವಿಷಯದಿಂದ ನೊಂದು ನಾನು, ನನ್ನ ಹೆಂಡತಿ ಆತ್ಮಹತ್ಯೆ ಯತ್ನಿಸಿದ್ದೇವು. ಸಂಬಂಧಿಕರು ನಮ್ಮನ್ನು ಬದುಕಿಸಿದ್ದಾರೆ ಎಂದು ಟಿವಿ9ಗೆ ಯುವತಿ ತಂದೆ ಹೇಳಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Tue, 30 January 24