ಬೆಂಗಳೂರು: ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಸಾವಿರಾರು ಜನರನ್ನು ನಂಬಿಸಿ 158 ಕೋಟಿ ವಂಚನೆ ಮಾಡಿದ್ದ ದೊಡ್ಡ ಗ್ಯಾಂಗ್ ಅರೆಸ್ಟ್
ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ಇನ್ಸ್ಟಾಗ್ರಾಂ ಅಕೌಂಟ್ಗೆ ಲಿಂಕ್ ಕಳಿಸಿ ನಂತರ ಹಣ ಎಗರಿಸ್ತಿದ್ದ ಗ್ಯಾಂಗನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಇಲ್ಲಿವರೆಗೆ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಬೆಂಗಳೂರು, ಜ.30: ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು (Cyber Crime Police) ಭರ್ಜರಿ ಕಾರ್ಯಾಚರಣೆ ನಡೆಸಿ ತೆಲಂಗಾಣದ ಇಬ್ಬರು, ಹೈದರಾಬಾದ್ನ ಮೂವರು, ಮಹಾರಾಷ್ಟ್ರದ ಇಬ್ಬರು ಸೇರಿ 11 ಮಂದಿಯನ್ನು ಬಂಧಿಸಿದ್ದಾರೆ. ಕೆಲಸಕ್ಕಾಗಿ ಪರದಾಡುತ್ತಿರುವವರನ್ನು ಟಾರ್ಗೆಟ್ ಮಾಡಿ ವರ್ಕ್ ಫ್ರಂ ಹೋಂ (Work From Home) ಕೆಲಸ ನೀಡೋದಾಗಿ ನಂಬಿಸಿ ವಂಚಿಸ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 2143 ಪ್ರಕರಣಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿದ್ದ ಸೈಬರ್ ವಂಚನೆ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಈ ಆರೋಪಿಗಳು 2143 ಅಕೌಂಟ್ಗಳಿಂದ 158 ಕೋಟಿ 94 ಲಕ್ಷಕ್ಕೂ ಅಧಿಕ ಹಣ ಎಗರಿಸಿದ್ದರು. ಸದ್ಯ ಸೈಬರ್ ಪೊಲೀಸರು 30 ಅಕೌಂಟ್ ಫ್ರೀಜ್ ಮಾಡಿದ್ದಾರೆ. 62 ಲಕ್ಷದ 83 ಸಾವಿರ ರೂಪಾಯಿಗಳು ಬೆಂಗಳೂರು ಪೊಲೀಸರಿಂದ ಫ್ರೀಜ್ ಆಗಿದೆ. ಮನೆಯಿಂದಲೇ ಕೆಲಸ ಮಾಡಿ ದಿನಕ್ಕೆ ಸಾವಿರಾರು ರೂ ಗಳಿಸಿ ಎಂದು ಈ ಗ್ಯಾಂಗ್ ನಂಬಿಸುತ್ತಿತ್ತು. ಇನ್ಸ್ಟಾಗ್ರಾಂ ಅಕೌಂಟ್ಗೆ ಲಿಂಕ್ ಕಳಿಸಿ ನಂತರ ಹಣ ಎಗರಿಸ್ತಿದ್ರು. ಸದ್ಯ ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ, ಮುಂಬೈ ಸೇರಿ ಒಟ್ಟು 11 ಮಂದಿ ಅರೆಸ್ಟ್ ಆಗಿದ್ದಾರೆ. 11 ಮೊಬೈಲ್, 2 ಲ್ಯಾಪ್ ಟಾಪ್, 15 ಸಿಮ್ ಕಾರ್ಡ್, 3 ಬ್ಯಾಂಕ್ ಚೆಕ್ ಬುಕ್ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಡಿಸಿಪಿ ಅಬ್ದುಲ್ ಅಹಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಇದನ್ನೂ ಓದಿ: ಆಂಧ್ರಪ್ರದೇಶ: ಕೇಬಲ್ ಆಪರೇಟರ್ನಿಂದ ಒಂಟಿ ಮಹಿಳೆಯ ಚಿನ್ನದ ಸರ ಕದಿಯಲು ಯತ್ನ, ವಿಡಿಯೋ ವೈರಲ್
ಶಾಲಾ ಬಸ್ಗೆ ಟ್ರ್ಯಾಕ್ಟರ್ ಡಿಕ್ಕಿ, 4 ವಿದ್ಯಾರ್ಥಿಗಳು ಬಲಿ
ಶಾಲಾ ಬಸ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭಿಸಿದ್ದು, ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 8ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ, ಶಾಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳುವಾಗ ತಡರಾತ್ರಿ 12 ಗಂಟೆಗೆ ಟ್ರ್ಯಾಕ್ಟರ್, ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ 9ನೇ ತರಗತಿ ವಿದ್ಯಾರ್ಥಿಗಳಾದ ಶ್ವೇತಾ, ಗೋವಿಂದ, PUC ವಿದ್ಯಾರ್ಥಿಗಳಾದ ಸಾಗರ ಕಡಕೋಳ, ಬಸವರಾಜ ಸಾವನ್ನಪ್ಪಿದ್ದಾರೆ, ಈ ಎಲ್ಲರೂ ವರ್ಧಮಾನ ಮಹಾವೀರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಾಗಿದ್ದಾರೆ. ಮಕ್ಕಳ ಶವಗಳನ್ನು ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಊರ ಹೊರಗೆ ನಾಲ್ಕೂ ವಿದ್ಯಾರ್ಥಿಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ.
ಇನ್ನು, ಅಪಘಾತದಲ್ಲಿ ವಿದ್ಯಾರ್ಥಿಗಳು ಮೃತಪಟ್ಟ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ.. ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ