ಮನೆಯವರಿಗೆ ಹೆದರಿ ಪ್ರೇಮಿಗಳ ಆತ್ಮಹತ್ಯೆ, ಒಂದೂವರೆ ತಿಂಗ್ಳ ನಂತರ ಮೃತದೇಹ ಪತ್ತೆ!
ಆನೇಕಲ್: ಒಮ್ಮೊಮ್ಮೆ ಈ ಪ್ರೀತಿ ಅನ್ನೋ ಬುಟ್ಟಿಯೊಳೆಗೆ ಬಿದ್ರೆ ಮುಗಿತು ಕಥೆ. ಜಾತಿ, ಅಪ್ಪ ಅಮ್ಮ ಅನ್ನೋ ಪದ ಇದರ ಮುಂದೆ ಲೆಕ್ಕಕ್ಕೇ ಇಲ್ಲ. ಲವ್ ಅನ್ನೋದಕ್ಕೆ ಎಲ್ಲವನ್ನೂ ಮರೆಸುವ.. ಅದಕ್ಕಾಗಿ ಏನ್ ಬೇಕಾದ್ರೂ ಮಾಡಿಸುವ ತಾಕತ್ತಿದೆ.. ಮೇಲಿನ ಫೋಟೋದಲ್ಲಿ ಕಾಣುವ ಈ ಜೋಡಿ ಕೂಡ ಪ್ರೀತಿ ಅನ್ನೋ ಮಾಯಾಜಾಲದ ಬಲೆಗೆ ಬಿದ್ದಿತ್ತು. ಬಬ್ಬರನ್ನ ಒಬ್ಬರು ಬಿಟ್ಟು ಇರದಷ್ಟು ಪ್ರೀತಿಸುತ್ತಿದ್ರು.. ಈಗ ಇದೇ ಪ್ರೀತಿ ಇವರಿಬ್ಬರನ್ನ ಬಲಿ ಪಡೆದಿದೆ. ಸಾವಿನಲ್ಲಿ ಇವರಿಬ್ಬರ ಪ್ರೀತಿ ಒಂದಾಗಿದೆ! ಒಂದೂವರೆ ತಿಂಗಳ […]
ಆನೇಕಲ್: ಒಮ್ಮೊಮ್ಮೆ ಈ ಪ್ರೀತಿ ಅನ್ನೋ ಬುಟ್ಟಿಯೊಳೆಗೆ ಬಿದ್ರೆ ಮುಗಿತು ಕಥೆ. ಜಾತಿ, ಅಪ್ಪ ಅಮ್ಮ ಅನ್ನೋ ಪದ ಇದರ ಮುಂದೆ ಲೆಕ್ಕಕ್ಕೇ ಇಲ್ಲ. ಲವ್ ಅನ್ನೋದಕ್ಕೆ ಎಲ್ಲವನ್ನೂ ಮರೆಸುವ.. ಅದಕ್ಕಾಗಿ ಏನ್ ಬೇಕಾದ್ರೂ ಮಾಡಿಸುವ ತಾಕತ್ತಿದೆ..
ಮೇಲಿನ ಫೋಟೋದಲ್ಲಿ ಕಾಣುವ ಈ ಜೋಡಿ ಕೂಡ ಪ್ರೀತಿ ಅನ್ನೋ ಮಾಯಾಜಾಲದ ಬಲೆಗೆ ಬಿದ್ದಿತ್ತು. ಬಬ್ಬರನ್ನ ಒಬ್ಬರು ಬಿಟ್ಟು ಇರದಷ್ಟು ಪ್ರೀತಿಸುತ್ತಿದ್ರು.. ಈಗ ಇದೇ ಪ್ರೀತಿ ಇವರಿಬ್ಬರನ್ನ ಬಲಿ ಪಡೆದಿದೆ. ಸಾವಿನಲ್ಲಿ ಇವರಿಬ್ಬರ ಪ್ರೀತಿ ಒಂದಾಗಿದೆ!
ಒಂದೂವರೆ ತಿಂಗಳ ಬಳಿಕ ಸಿಕ್ತು ಲವರ್ಸ್ ಮೃತದೇಹ..! ಪಕ್ಕದ ಫೋಟೋದಲ್ಲಿ ಕಾಣುವ ಈ ಪ್ರೇಮಿಗಳಿಬ್ಬರನ್ನ ನೋಡಿ.. ಇವರಿಬ್ಬರ ಹೆಸರು ಜನಾರ್ದನ್ ಮತ್ತು ಶ್ರೀಲಕ್ಷ್ಮೀ ಅಂತ.. ಇಬ್ಬರೂ ಕೇರಳ ಮೂಲದವರು.. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಎಲೆಕ್ಟ್ರಾನಿಕ್ ಸಿಟಿ ಬಳಿಯ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ರು. ಅಲ್ಲಿ ಇಬ್ಬರಿಗೆ ಪರಿಚಯವಾಗಿ, ಆ ಪರಿಚಯ ಸ್ನೇಹವಾಗಿ.. ಆ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಪ್ರೀತಿ ಪ್ರೇಮ ಅಂತ ಸುತ್ತಾಡ್ಕೊಂಡಿದ್ರು.
ನಂತ್ರ ಇವರಿಬ್ಬರ ಲವ್ ಸ್ಟೋರಿ ಮನೆಯಲ್ಲಿ ಗೊತ್ತಾಗಿ, ವಿರೋಧ ವ್ಯಕ್ತವಾಗಿತ್ತು.. ಯಾವಾಗ ಮನೆಯಲ್ಲಿ ತಮ್ಮ ಪ್ರೀತಿಯನ್ನ ಒಪ್ಪುವುದಿಲ್ಲ ಅಂತ ಗೊತ್ತಾಯ್ತೋ, ಸಾಯುವ ನಿರ್ಧಾರ ಮಾಡಿದ್ರು. ಅದರಂತೆ ಆನೇಕಲ್ ತಾಲೂಕಿನ ಹುಸ್ಕೂರು ಬಳಿಯ ಚಿಂತಲ ಮಡಿವಾಳ ಬಳಿ ನಿರ್ಜನ ಪ್ರದೇಶವೊಂದರಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿನಲ್ಲಿ ಒಂದಾಗಿದ್ದಾರೆ..
ಅಂದಹಾಗೇ ಇವರು ಹೀಗೆ ಸಾವಿಗೆ ಕೊರಳೊಡ್ಡಿದ್ದು ನಿನ್ನೆ ಮೊನ್ನೆಯಲ್ಲ.. ಕಳೆದ ತಿಂಗಳು ಅಂದ್ರೆ ಅಕ್ಟೋಬರ್ 11ನೇ ತಾರೀಖಿನಂದು.. ಅಂದ್ರೆ ಒಂದೂವರೆ ತಿಂಗಳ ಹಿಂದೆ.. ಇವರಿಬ್ಬರೂ ಕಾಣಸದೆ ಇದ್ದಾಗ ಯವಕನ ಕಡೆಯವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅವತ್ತೇ ಮಿಸ್ಸಿಂಗ್ ಕೇಸ್ ದಾಖಲಿಸಿದ್ರು.. ಆದ್ರೆ ಒಂದೂವರೆ ತಿಂಗಳಾದ್ರು ಕೂಡ ಈ ಪ್ರೇಮಿಗಳು ಪತ್ತೆಯಾಗಿರಲಿಲ್ಲ.
ಪೊಲೀಸರು ಇವರಿಬ್ಬರನ್ನ ಹುಡುಕುತ್ತಿದ್ರೆ, ಮನೆಯವರು ಇವರಿಬ್ಬರು ಎಲ್ಲೋ ಹೋಗಿ ಮದುವೆ ಆಗಿ ಆರಾಮಾಗಿದ್ದಾರೆ ಅಂತ ಅನ್ಕೊಂಡಿದ್ರು. ಆದ್ರೆ ಮೊನ್ನೆ ಇವರಿಬ್ಬರು ನೇಣು ಹಾಕಿಕೊಂಡ ಜಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವ ಎದ್ನೋ ಬಿದ್ನೋ ಅಂತ ಓಡೋಗಿದ್ದಾನೆ. ಯಾಕಂದ್ರೆ ಅಲ್ಲಿ ಇವರಿಬ್ಬರ ಮೃತದೇಹ ಒಂದೂವರೆ ತಿಂಗಳಿನಿಂದ ಅಲ್ಲಿಯೇ ಕೊಳೆತು ನಾರುತ್ತಿತ್ತು. ನಂತ್ರ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಶವಗಳನ್ನ ಅವರ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ..
ಟ್ನಲ್ಲಿ ಬಾಳಿ ಬದುಕಬೇಕಿದ್ದ ಪ್ರೇಮಿಗಳು ಮನೆಯವರಿಗೆ ಹೆದರಿ ಸಾವಿನ ಮನೆ ಸೇರಿದ್ದಾರೆ. ಮನೆ ಮಕ್ಕಳನ್ನ ಕಳೆದುಕೊಂಡು ದುಃಖ ಪಡುವುದಕ್ಕಿಂದ ಇವರಿಬ್ಬರ ಪ್ರೀತಿಯನ್ನ ಮನೆಯವರು ಒಪ್ಪಿದ್ದರೆ ಈ ಪ್ರೇಮಿಗಳು ಪ್ರೇಮ ಲೋಕದಲ್ಲಿ ಹಕ್ಕಿಗಳಂತೆ ಹಾರಾಡುತ್ತಿದ್ರು ಅನ್ಸುತ್ತೆ. ಅದಕ್ಕೆ ಹೇಳುವುದು ಪ್ರೀತಿ ಮಾಯೆ ಹುಷಾರ್ ಅಂತ. (ಅಜಯ್, ಟಿವಿ9, ಆನೇಕಲ್)
Published On - 4:58 pm, Sat, 30 November 19