ಪತ್ನಿ ಬಗ್ಗೆ ಶಂಕೆ, ಕೋಪದಲ್ಲಿ ಚಾಕುವಿನಿಂದ ಆಕೆಯ ಕಣ್ಣುಗುಡ್ಡೆಗಳನ್ನು ಕಿತ್ತ ರಕ್ಕಸ ಪತಿ

ಪತ್ನಿ ಬೇರೆ ವ್ಯಕ್ತಿ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನ ವ್ಯಕ್ತಪಡಿಸಿದ ಪತಿ ಚಾಕುವಿನಿಂದ ಕಣ್ಣುಗುಡ್ಡೆಗಳನ್ನು ಕಿತ್ತಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆ ವ್ಯಕ್ತಿ ಆಕೆಯ ಎರಡೂ ಕಣ್ಣುಗಳನ್ನು ಚಾಕುವಿನಿಂದ ಕಿತ್ತುಹಾಕಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳು ಸೇರಿದಂತೆ ಹಲವು ಕಡೆ ಗಾಯಗಳನ್ನು ಮಾಡಿದ ಘಟನೆ ವರದಿಯಾಗಿದೆ.ಬುಧವಾರ ಪೋಹ್ರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಛೋಟು ಖಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಆತ ತನ್ನ ಪತ್ನಿಯ ಮೊಬೈಲ್ ಫೋನ್ ಕೇಳಿದ್ದ, ಆದರೆ ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.

ಪತ್ನಿ ಬಗ್ಗೆ ಶಂಕೆ, ಕೋಪದಲ್ಲಿ ಚಾಕುವಿನಿಂದ ಆಕೆಯ ಕಣ್ಣುಗುಡ್ಡೆಗಳನ್ನು ಕಿತ್ತ ರಕ್ಕಸ ಪತಿ
ಕಣ್ಣು
Image Credit source: Chromoviso

Updated on: Feb 13, 2025 | 11:11 AM

ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನ ಪಟ್ಟ ಪತಿ ಕೋಪದಲ್ಲಿ ಚಾಕುವಿನಿಂದ ಆಕೆಯ ಕಣ್ಣುಗುಡ್ಡೆಗಳನ್ನೇ ಕಿತ್ತು ಹಾಕಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಆ ವ್ಯಕ್ತಿ ಆಕೆಯ ಎರಡೂ ಕಣ್ಣುಗಳನ್ನು ಚಾಕುವಿನಿಂದ ಕಿತ್ತುಹಾಕಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳು ಸೇರಿದಂತೆ ಹಲವು ಕಡೆ ಗಾಯಗಳನ್ನು ಮಾಡಿದ ಘಟನೆ ವರದಿಯಾಗಿದೆ.

ಬುಧವಾರ ಪೋಹ್ರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಛೋಟು ಖಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಆತ ತನ್ನ ಪತ್ನಿಯ ಮೊಬೈಲ್ ಫೋನ್ ಕೇಳಿದ್ದ, ಆದರೆ ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. 24 ವರ್ಷದ ಬಲಿಪಶುವಿನ ಸ್ಥಿತಿ ಗಂಭೀರವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದಂಪತಿ ಮದುವೆಯಾಗಿ ಮೂರು ವರ್ಷಗಳು ಕಳೆದಿದ್ದವು, ಆಗಾಗ ಅವರ ಮಧ್ಯೆ ವೈಮನಸ್ಸು ಮೂಡುತ್ತಿತ್ತು. ಪತ್ನಿಯ ಮೇಲೆ ಹಲ್ಲೆ ಮಾಡಿದ ನಂತರ, ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನೆರೆಹೊರೆಯವರು ಸಂತ್ರಸ್ತೆಯ ಕುಟುಂಬಕ್ಕೆ ಮಾಹಿತಿ ನೀಡಿದ ನಂತರವೇ, ರಕ್ತಸಿಕ್ತವಾಗಿ ಬಿದ್ದಿದ್ದ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸ್ ಅಧಿಕಾರಿಗಳು ಪ್ರಸ್ತುತ ಸಂತ್ರಸ್ತೆ ಮತ್ತು ಆಕೆಯ ಕುಟುಂಬದಿಂದ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಏತನ್ಮಧ್ಯೆ, ಪರಾರಿಯಾಗಿರುವವ ಪತಿಯನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ಗರ್ಭಿಣಿ ಗೆಳತಿಯ ಕೊಂದು, ಸುಟ್ಟು ಹಾಕಿದ ವ್ಯಕ್ತಿ

ಜೈಲಿನಿಂದ ಹೊರಬಂದ ನಂತರ ಪತ್ನಿ ಮತ್ತು ಮಗಳನ್ನು ಕೊಂದ ಅಸ್ಸಾಂ ವ್ಯಕ್ತಿ
ಮತ್ತೊಂದು ಪ್ರಕರಣದಲ್ಲಿ, ಅಸ್ಸಾಂನ ಗುವಾಹಟಿಯಲ್ಲಿ ವ್ಯಕ್ತಿಯೊಬ್ಬ ಆಕೆಯ 42 ವರ್ಷದ ಪತ್ನಿ ಮತ್ತು ಮಗಳನ್ನು ಕೊಂದು, ನಂತರ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆ ವ್ಯಕ್ತಿ ಜೈಲಿನಿಂದ ಹೊರಬಂದ ಕೆಲವು ದಿನಗಳ ನಂತರ ಈ ಕೊಲೆಗಳು ನಡೆದಿವೆ. ಮೃತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆತನ ಮೇಲೆ ಜೈಲು ಶಿಕ್ಷೆ ವಿಧಿಸಲಾಗಿತ್ತು, ಆ ಬಾಲಕಿಯು ಆ ಮಹಿಳೆಯ ಮೊದಲ ಗಂಡನ ಮಗಳಾಗಿದ್ದಳು.

ಕಳೆದ ವರ್ಷ ಜುಲೈನಲ್ಲಿ, ಈಶಾನ್ಯ ಗಡಿನಾಡು ರೈಲ್ವೆಯಲ್ಲಿ ಡೀಸೆಲ್ ಎಂಜಿನ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ, ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ತನ್ನ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ನಂತರ, ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲಾಯಿತು.

ರಾಜ್ಯ ರಾಜಧಾನಿಯ ಬಮುನಿಮೈದಂ ಪ್ರದೇಶದಲ್ಲಿರುವ ಮಹಿಳೆಯ ಅಧಿಕೃತ ನಿವಾಸದಲ್ಲಿ ಈ ಕೊಲೆಗಳು ನಡೆದಿವೆ ಎಂದು ಡಿಸಿಪಿ (ಕೇಂದ್ರ) ಅಮಿತಾಭ್ ಬಸುಮಟರಿ ಪಿಟಿಐಗೆ ತಿಳಿಸಿದ್ದಾರೆ. ಮೃತರನ್ನು ಜೂಲಿ ದೇಕಾ, ಅವರ 15 ವರ್ಷದ ಮಗಳು ಮತ್ತು ಲೋಹಿತ್ ಠಾಕುರಿಯಾ (47) ಎಂದು ಗುರುತಿಸಲಾಗಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ