ಮಹಾರಾಷ್ಟ್ರ: ಗರ್ಭಿಣಿ ಗೆಳತಿಯ ಕೊಂದು, ಸುಟ್ಟು ಹಾಕಿದ ವ್ಯಕ್ತಿ
ವ್ಯಕ್ತಿಯೊಬ್ಬ ಗರ್ಭಿಣಿ ಗೆಳತಿಯ ಕತ್ತು ಹಿಸುಕಿ ಕೊಂದು ದೇಹವನ್ನು ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಿದ್ದು, ರಿಮಾಂಡ್ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ಹೆಸರು ಶಕೀಲ್ ಮುಸ್ತಫಾ, ತನ್ನ 18 ವರ್ಷದ ಗೆಳತಿಯನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಆಕೆಯನ್ನು ಕೊಂಡೊಯ್ದು ಕತ್ತು ಹಿಸುಕಿ ಕೊಂದು, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ಇವರಿಬ್ಬರಿಗೆ ಕೆಲವು ತಿಂಗಳಿನಿಂದ ಸಂಬಂಧವಿತ್ತು, ಆಕೆಯ ಗೆಳತಿ ಗರ್ಭಿಣಿಯಾದಳು, ಆಕೆ ಅವನೊಂದಿಗೆ ಇರಬೇಕು ಎಂದು ಹಠ ಹಿಡಿದಿದ್ದಳು, ಅಲ್ಲಿಂದ ಆಕೆಯನ್ನು ಓಡಿಸಬೇಕೆಂದರೆ ಸಾಧ್ಯವಾಗಲಿಲ್ಲ, ಹಾಗಾಗಿ ಆಕೆಯನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಆಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಆಗಮಿಸಿತ್ತು, ಅಲ್ಲಿ ಹೊಲದಲ್ಲಿ ಅರೆ ಬೆಂದಿದ್ದ ಬೆತ್ತಲೆ ಶವ ಇತ್ತು, ಪೊಲೀಸರು ತನಿಖೆ ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿ ಶಕೀಲ್‌ನನ್ನು ಪತ್ತೆಹಚ್ಚಿದರು. ನ್ಯಾಯಾಲಯವು ಆರೋಪಿಗೆ ಪೊಲೀಸ್ ಕಸ್ಟಡಿ ವಿಧಿಸಿತು.
ಮತ್ತಷ್ಟು ಓದಿ: ಅರ್ಧಗಂಟೆಯಲ್ಲಿ ನಾಲ್ವರಿಗೆ ಚಾಕುವಿನಿಂದ ಇರಿದು ಪರಾರಿಯಾದ ಆರೋಪಿ ಕದಂಬ
ಮೊದಲಿಗೆ ಇದು ಕೊಲೆಯಂತೆ ಕಾಣುತ್ತಿತ್ತು. ಪ್ರಕರಣದ ತನಿಖೆಯನ್ನು ಸ್ಥಳೀಯ ಅಪರಾಧ ವಿಭಾಗ ಮತ್ತು ಗೋರೆಗಾಂವ್ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ, ಅಪರಿಚಿತ ಹುಡುಗಿಯನ್ನು ಗುರುತಿಸಲು ಮತ್ತು ಆಕೆಯ ಕೊಲೆಯ ನಿಗೂಢತೆಯನ್ನು ಭೇದಿಸಲು ವಿವಿಧ ತಂಡಗಳನ್ನು ರಚಿಸಲಾಯಿತು. ತನಿಖೆಯ ಸಮಯದಲ್ಲಿ ಆರೋಪಿಯು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಅಜಯ್ ಭೂಸಾರಿ ಹೇಳಿದರು.
ಆರೋಪಿಯನ್ನು ವಿಚಾರಣೆ ನಡೆಸಿದಾಗ ಆಕೆಯನ್ನು ಕತ್ತು ಹಿಸುಕಿ ಕೊಂದು ನಂತರ ಆಕೆಯ ದೇಹವನ್ನು ಸುಟ್ಟು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ಪಿತೂರಿಯಂತೆ, ಫೆಬ್ರವರಿ 10 ರಂದು, ಶಕೀಲ್ ಬಾಲಕಿಯನ್ನು ದೇವುತೋಲಾ ಹೊಲಕ್ಕೆ ಕರೆದು ದುಪಟ್ಟಾದಿಂದ ಕತ್ತು ಹಿಸುಕಿ ಕೊಂದಿದ್ದಾನೆ. ಪಿತೂರಿಯಂತೆ, ಫೆಬ್ರವರಿ 10 ರಂದು, ಶಕೀಲ್ ಬಾಲಕಿಯನ್ನು ದೇವುತೋಲಾ ಹೊಲಕ್ಕೆ ಕರೆದು ದುಪಟ್ಟಾದಿಂದ ಕತ್ತು ಹಿಸುಕಿ ಕೊಂದಿದ್ದಾನೆ.
ಆಕೆಯ ದೇಹವನ್ನು ಹಾಳೆ ಮತ್ತು ಒಣಹುಲ್ಲಿನಿಂದ ಮುಚ್ಚಿ, ಸಾಕ್ಷ್ಯವನ್ನು ನಾಶಮಾಡಲು ದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ