AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಡಕ್ಟರ್ ಮೇಲೆ ಸೇಡು ತೀರಿಸಿಕೊಳ್ಳಲು ಚೆನ್ನೈನಲ್ಲಿ ಬಸ್ಸನ್ನೇ ಅಪಹರಿಸಿದ ಕುಡುಕ

ತಮಿಳುನಾಡಿನ ಚೆನ್ನೈನ ಎಂಟಿಸಿ ಬಸ್​ನಲ್ಲಿನ ಕಂಡಕ್ಟರ್​ ಮೇಲಿನ ಕೋಪದಿಂದ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಡುಕ ವ್ಯಕ್ತಿಯೊಬ್ಬ ಬಸ್ ಅನ್ನೇ 'ಹೈಜಾಕ್' ಮಾಡಿದ್ದಾನೆ. ವಿಚಾರಣೆಯ ಸಮಯದಲ್ಲಿ ಅಬ್ರಹಾಂ ಎಂಬ ವ್ಯಕ್ತಿ ಕೆಲವು ದಿನಗಳ ಹಿಂದೆ ತನ್ನೊಂದಿಗೆ ಜಗಳ ನಡೆಸಿದ್ದ ಬಸ್ ಕಂಡಕ್ಟರ್ ಮೇಲೆ ಸೇಡು ತೀರಿಸಿಕೊಳ್ಳಲು ಖಾಲಿ ಬಸ್ಸನ್ನು ಅಪಹರಿಸಿದ್ದಾಗಿ ಬಹಿರಂಗಪಡಿಸಿದ್ದಾನೆ.

ಕಂಡಕ್ಟರ್ ಮೇಲೆ ಸೇಡು ತೀರಿಸಿಕೊಳ್ಳಲು ಚೆನ್ನೈನಲ್ಲಿ ಬಸ್ಸನ್ನೇ ಅಪಹರಿಸಿದ ಕುಡುಕ
Bus
ಸುಷ್ಮಾ ಚಕ್ರೆ
|

Updated on: Feb 13, 2025 | 4:44 PM

Share

ಚೆನ್ನೈ: ತಮಿಳುನಾಡಿನಲ್ಲಿ ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದು ನಡೆದಿದೆ. ಕುಡುಕ ವ್ಯಕ್ತಿಯೊಬ್ಬ ಚೆನ್ನೈ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಎಂಟಿಸಿ) ಬಸ್ಸನ್ನು ಅಪಹರಿಸಿ ಅಕ್ಕರೈ ಪ್ರದೇಶದ ಬಳಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆ ಬಸ್​ ಕಂಡಕ್ಟರ್ ಮೇಲಿನ ಕೋಪದಿಂದ ಸೇಡು ತೀರಿಸಿಕೊಳ್ಳಲು ಕುಡುಕ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಚೆನ್ನೈನ ಬೆಸೆಂಟ್ ನಗರದ ನಿವಾಸಿ, ಗುಡುವಾಂಚೇರಿಯಲ್ಲಿ ಕಾರ್ ಇಂಟೀರಿಯರ್ ಡೆಕೋರೇಟರ್ ಆಗಿ ಕೆಲಸ ಮಾಡುತ್ತಿದ್ದ ಅಬ್ರಹಾಂ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಿರುವನ್ಮಿಯೂರ್ ಬಸ್ ಟರ್ಮಿನಲ್‌ನಿಂದ ಬ್ರಾಡ್‌ವೇಯಿಂದ ಕೋವಲಂಗೆ ಚಲಿಸುತ್ತಿದ್ದ ಬಸ್ಸನ್ನು ಅಬ್ರಹಾಂ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಆ ಬಸ್ ಖಾಲಿಯಾಗಿತ್ತು. ಬಸ್​ ಅನ್ನು ಹೈಜಾಕ್ ಮಾಡಿ ಬೇರೆಡೆ ತೆಗೆದುಕೊಂಡು ಹೋದ ಕುಡುಕ ಆ ಬಸ್​ ಅನ್ನು ಡಿಕ್ಕಿ ಹೊಡೆಸಿದ್ದಾನೆ.

ಇದನ್ನೂ ಓದಿ: ಮಧ್ಯಪ್ರದೇಶ: ಕುಂಭ ಮೇಳದಿಂದ ಹಿಂದಿರುಗುವಾಗ ಅಪಘಾತ, ಬೆಳಗಾವಿಯ ನಾಲ್ವರು ಸೇರಿ ಆರು ಮಂದಿ ಸಾವು

ಮದ್ಯದ ಅಮಲಿನಲ್ಲಿ ಅವನು ಬಸ್ಸನ್ನು ಟರ್ಮಿನಸ್‌ನಿಂದ ಹೊರಗೆ ತೆಗೆದು ಪೂರ್ವ ಕರಾವಳಿ ರಸ್ತೆಯ ಕಡೆಗೆ ಹೋದನು. ಕೊನೆಗೆ, ಆ ಬಸ್​ನಿಂದ ಅಕ್ಕರೈ ಚೆಕ್‌ಪೋಸ್ಟ್ ಬಳಿ ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ಪರಿಣಾಮದಿಂದ ಎರಡೂ ವಾಹನಗಳು ಹಾನಿಗೊಳಗಾಗಿದ್ದು, ಪಕ್ಕದಲ್ಲಿದ್ದವರು ಮತ್ತು ವಾಹನ ಚಾಲಕರಲ್ಲಿ ಭಯಭೀತರಾಗಿದ್ದರು.

ಲಾರಿ ಚಾಲಕ ಅಬ್ರಹಾಂ ಕುಡಿದ ಮತ್ತಿನಲ್ಲಿದ್ದ ಎನ್ನಲಾಗಿದೆ. ಆತನೇ ಬಸ್​ ಡಿಕ್ಕಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದಾದ ನಂತರ, ಪೊಲೀಸ್ ತಂಡ ಬಸ್ ಅನ್ನು ತಡೆದು ಸ್ವಲ್ಪ ದೂರದವರೆಗೆ ಅದನ್ನು ಬೆನ್ನಟ್ಟಿ, ಅಂತಿಮವಾಗಿ ಬಸ್ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದೆ.

ಇದನ್ನೂ ಓದಿ: Madhya Pradesh: ಮಹಾಕುಂಭದಿಂದ ಹಿಂದಿರುಗುವಾಗ ಅಪಘಾತ, 7 ಮಂದಿ ಸಾವು

ವಿಚಾರಣೆಯ ಸಮಯದಲ್ಲಿ, ಕೆಲವು ದಿನಗಳ ಹಿಂದೆ ತನ್ನ ಜೊತೆ ಆ ಬಸ್​ ಕಂಡಕ್ಟರ್ ಜೊತೆ ಜಗಳವಾಗಿತ್ತು. ಆ ಬಸ್ ಕಂಡಕ್ಟರ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಖಾಲಿ ಬಸ್ ಅನ್ನು ಅಪಹರಿಸಿರುವುದಾಗಿ ಅಬ್ರಹಾಂ ಬಹಿರಂಗಪಡಿಸಿದ್ದಾನೆ. ತಿರುವನ್ಮಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ