AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madhya Pradesh: ಪತ್ನಿಯ ಶವವನ್ನು 3 ದಿನಗಳ ಕಾಲ ಫ್ರೀಜರ್​ನಲ್ಲಿಟ್ಟಿದ್ದ ಪತಿ, ಕೊಲೆ ಎಂದ ಕುಟುಂಬ

ಪತಿಯೊಬ್ಬ ತನ್ನ ಪತ್ನಿಯ ಶವವನ್ನು 3 ದಿನಗಳ ಕಾಲ ಫ್ರೀಜರ್​ನಲ್ಲಿ ಇರಿಸಿದ್ದ ಘಟನೆ ಮಧ್ಯಪ್ರದೇಶ(Madhya Pradesh)ದ ರೇವಾ ಜಿಲ್ಲೆಯಲ್ಲಿ ನಡೆದಿದೆ.

Madhya Pradesh: ಪತ್ನಿಯ ಶವವನ್ನು 3 ದಿನಗಳ ಕಾಲ ಫ್ರೀಜರ್​ನಲ್ಲಿಟ್ಟಿದ್ದ ಪತಿ, ಕೊಲೆ ಎಂದ ಕುಟುಂಬ
ಕ್ರೈಂಸೀನ್
ನಯನಾ ರಾಜೀವ್
|

Updated on: Jul 03, 2023 | 9:06 AM

Share

ಪತಿಯೊಬ್ಬ ತನ್ನ ಪತ್ನಿಯ ಶವವನ್ನು 3 ದಿನಗಳ ಕಾಲ ಫ್ರೀಜರ್​ನಲ್ಲಿ ಇರಿಸಿದ್ದ ಘಟನೆ ಮಧ್ಯಪ್ರದೇಶ(Madhya Pradesh)ದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಭಾನುವಾರ ಶವವನ್ನು ವಶಪಡಿಸಿಕೊಂಡಿದ್ದಾರೆ. ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಆಕೆಯ ಸಹೋದರ ಆರೋಪಿಸಿದ್ದಾರೆ. ಆದರೆ ಆಕೆ ಜಾಂಡೀಸ್​ನಿಂದ ಮೃತಪಟ್ಟಿರುರುವುದಾಗಿ ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಆಕೆ ಶುಕ್ರವಾರ ಮೃತಪಟ್ಟಿದ್ದಳು, ಅಂತ್ಯಕ್ರಿಯೆಗಾಗಿ ತಮ್ಮ ಮಗ ಮುಂಬೈನಿಂದ ಹಿಂದಿರುಗುವವರೆಗೆ ಕಾಯಬೇಕಿತ್ತು ಅದಕ್ಕೆ ಫ್ರೀಜರ್​ನಲ್ಲಿ ಇರಿಸಿದ್ದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಫೈನಾನ್ಶಿಯರ್ ಜತೆ ಲವ್ವಿಡವ್ವಿ: ಹೋಟೆಲ್​ ನಡೆಸುತ್ತಿದ್ದ ಗಂಡನನ್ನೇ ಮುಗಿಸಿದ್ದ ಕೊಲೆಗಾತಿ ಪತ್ನಿ ಸಿಕ್ಕಿಬಿದ್ಲು

ಮಹಿಳೆಯ ಸಾವಿಗೆ ಕಾರಣ ತಿಳಿಯಲು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಮಿತ್ರಿ ಎಂದು ಗುರುತಿಸಲಾದ 40 ವರ್ಷದ ಮಹಿಳೆಯ ಶವವನ್ನು ವಶಪಡಿಸಿಕೊಂಡಿದ್ದೇವೆ.

ಆಕೆಯ ಸಹೋದರ ಅಭಯ್ ತಿವಾರಿ ತನ್ನ ಭಾವ ಅಕ್ಕನನ್ನು ಕೊಂದಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್​ಸ್ಪೆಕ್ಟರ್ ವಿಜಯ್ ಸಿಂಗ್ ತಿಳಿಸಿದ್ದಾರೆ. ಮಿಶ್ರಾ ತನ್ನ ಸಹೋದರಿಯನ್ನು ಥಳಿಸುತ್ತಿದ್ದರು ಹೀಗಾಗಿ ಮೃತಪಟ್ಟಿರಬಹುದು ಎಂದು ದೂರುದಾರರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ