ಸಂಪಾಜೆ: ಸರ್ಕಾರಿ ಬಸ್ ಡಿಕ್ಕಿ, ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರ ದುರ್ಮರಣ

|

Updated on: Apr 14, 2023 | 4:28 PM

ಸರ್ಕಾರಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ದುರ್ಘಟನೆ ಮಡಿಕೇರಿ-ಮಂಗಳೂರು ನಡುವೆ ಹೆದ್ದಾರಿಯಲ್ಲಿ ನಡೆದಿದೆ.

ಸಂಪಾಜೆ: ಸರ್ಕಾರಿ ಬಸ್ ಡಿಕ್ಕಿ, ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರ ದುರ್ಮರಣ
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತ
Follow us on

ಕೊಡಗು: ಸರ್ಕಾರಿ ಬಸ್​ ಡಿಕ್ಕಿ (accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿರುವಂತಹ ದುರ್ಘಟನೆ ಮಡಿಕೇರಿ-ಮಂಗಳೂರು ನಡುವೆ ಹೆದ್ದಾರಿಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಸಂಪಾಜೆ ಬಳಿ ಬಸ್​ಗೆ ಕಾರು ಅಪ್ಪಳಿಸಿದೆ. ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ 6 ಜನರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಮಂಡ್ಯ ಜಿಲ್ಲೆಯ ಮದ್ದೂರು ಮೂಲದವರು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮತ್ತಿಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊರ್ವ ಗಾಯಗೊಂಡಿರುವ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುನಿರಾಜು(68) ಮೃತದುರ್ದೈವಿ, ಮುರುಳಿ ಎಂಬಾತನ ಸ್ಥಿತಿ ಗಂಭೀರವಾಗಿದೆ. ಪ್ರಮೋದ್, ರವಿಕುಮಾರ್, ಪಲ್ಲವಿ ಎಂಬುವರು ಕೃತ್ಯ ಎಸಗಿದ ಆರೋಪಿಗಳು.

ಇದನ್ನೂ ಓದಿ: ನರ್ಸ್​ ನಿಗೂಢ ಹತ್ಯೆ! ಹಂತಕ ಆ ಒಂದು ಸುಳಿವು ನೀಡಿದ ತಕ್ಷಣ, ಚಾಣಾಕ್ಷ ಗದಗ ಪೊಲೀಸರು ಆರೋಪಿಯನ್ನು ಲಾಕ್​ ಮಾಡಿಯೇ ಬಿಟ್ರು!

ಆರೋಪಿ ಪ್ರಮೋದ್ ಮುನಿರಾಜು ಮನೆ ಬಳಿ ನಾಯಿ ಕರೆದುಕೊಂಡು ಬರುತ್ತಿದ್ದರು. ಇದಕ್ಕೆ ಮುನಿರಾಜು ಹಸ್ತಕ್ಷೇಪ ವ್ಯಕ್ತಪಡಿಸಿದ್ದು, ನಾಯಿ ಕರೆತಂದು ಗಲೀಜು ಮಾಡಿಸ್ತಿಯಾ ಎಂದು ಪ್ರಶ್ನಿಸಿದ್ದರು. ಈ ವಿಚಾರ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಆಗ ಪೊಲೀಸರು ಇಬ್ಬರ ಬಳಿಯೂ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು.

ಮರುದಿನ ಪ್ರಮೋದ್ ಮತ್ತು ರವಿಕುಮಾರ್ ಮತ್ತೆ ಮುನಿರಾಜ್​ ಜೊತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದರು. ಗಲಾಟೆ ವೇಳೆ ಪ್ರಮೋದ್​, ರವಿಕುಮಾರ್ ದೊಣ್ಣೆಯಿಂದ ಮುನಿರಾಜ್ ಮತ್ತು ಅವರ ಜೊತೆ ಇದ್ದ ಮುರುಳಿ ಎಂಬುವರಿಗೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಮುನಿರಾಜು ಸಾವನ್ನಪ್ಪಿದ್ದು, ಮುರಳಿಗೆ ಗಂಭೀರ ಗಾಯಗಳಾಗಿವೆ. ಇನ್ನು ಕೊಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಹ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಪೊಲೀಸ್ ‌ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ವಿವಿಪುರಂನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್​ ಪತ್ತೆ

ಬೆಂಗಳೂರು: ವಿವಿಪುರಂನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್​ ಪತ್ತೆ ಚುನಾವಣೆ ಹೊಸ್ತಿಲಿನಲ್ಲಿ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಬರೀ ವಿವಿಐಪಿಗಳೆ ಬಳಸುವ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ 1 ಕೇಜಿ 40 ಗ್ರಾಂ ಬ್ರೌನ್ ಎಂಡಿಎಂಎ ಪತ್ತೆಯಾಗಿವೆ. ಈ ಹಿನ್ನೆಲೆ ನಗರದಲ್ಲಿ ಭಾರೀ ಪ್ರಮಾಣದ ವಿವಿಐಪಿಗಳು ಡ್ರಗ್ಸ್ ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಕೆಲವುದಿನಗಳ ಹಿಂದೆ ವಿವಿಪುರಂ ಹಾಗೂ ಜಯನಗರ ನಗರ ಪೊಲೀಸರು ಐವರು ವಿದೇಶಿ ಡ್ರಗ್ ಪೆಡ್ಲರ್​ಗಳ ಬಂಧಿಸಿದ್ದರು. ಈ ವೇಳೆ ಬರೋಬ್ಬರಿ 8 ಕೋಟಿ 20 ಲಕ್ಷ ಮೌಲ್ಯದ ವಿವಿಧ ರೀತಿಯ ಡ್ರಗ್ಸ್ ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ನಾಲ್ಕು ಕೋಟಿ ಮೌಲ್ಯದ ಬ್ರೌನ್ ಎಂಡಿಎಂಎ ಪತ್ತೆಯಾಗಿತ್ತು. ಹೀಗಾಗಿ ಇದನ್ನ ನಗರದಲ್ಲಿ ಬಳಸುತ್ತಿದ್ದ ವಿವಿಐಪಿಗಳು, ಸೆಲಬ್ರೆಟಿಗಳು ಯಾರು ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:57 pm, Fri, 14 April 23