ಬೆಂಗಳೂರು: ಬೈಕ್​ ಪಾರ್ಕಿಂಗ್​ ವಿಚಾರಕ್ಕೆ ಹತ್ಯೆ ಪ್ರಕರಣ; 15 ದಿನಗಳ ಬಳಿಕ ಆರೋಪಿಗಳನ್ನ ಬಂಧಿಸಿದ ಪೊಲೀಸರು

ಬೈಕ್​ ಪಾರ್ಕಿಂಗ್​ ವಿಚಾರಕ್ಕೆ ಜನಾರ್ದನ ಭಟ್ ಎಂಬಾತನ ಕೊಲೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ, 15 ದಿನಗಳ ಬಳಿಕ ಯಲಹಂಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು: ಬೈಕ್​ ಪಾರ್ಕಿಂಗ್​ ವಿಚಾರಕ್ಕೆ ಹತ್ಯೆ ಪ್ರಕರಣ; 15 ದಿನಗಳ ಬಳಿಕ ಆರೋಪಿಗಳನ್ನ ಬಂಧಿಸಿದ ಪೊಲೀಸರು
ಕೊಲೆ ಮಾಡಿದ ಆರೋಪಿಗಳು
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 15, 2023 | 7:43 AM

ಬೆಂಗಳೂರು: ಬೈಕ್​ ಪಾರ್ಕಿಂಗ್​ ವಿಚಾರಕ್ಕೆ ಜನಾರ್ದನ ಭಟ್ ಎಂಬಾತನ ಕೊಲೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ, 15 ದಿನಗಳ ಬಳಿಕ ಯಲಹಂಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ರಿಜ್ವಾನ್, ಸುಲೇಮಾನ್​ ಬಂಧನವಾದ ಆರೋಪಿಗಳು. ಮಾರ್ಚ್​ 29ರಂದು ಯಲಹಂಕದಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಸಹೋದ್ಯೋಗಿಗಳಿಂದಲೇ ಜನಾರ್ದನ ಭಟ್ ಎಂಬಾತನ ಕೊಲೆ ಆಗಿತ್ತು. ಕೊಲೆ ಬಳಿಕ ಇಬ್ಬರು ಆರೋಪಿಗಳು ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿದ ಯಲಹಂಕ ಪೊಲೀಸರು ಕೋಲ್ಕತ್ತಾಗೆ ತೆರಳಿ ಇಬ್ಬರನ್ನು ಬಂಧಿಸಿದ್ದಾರೆ.

ಒಂದೇ ಕಂಪನಿಯಲ್ಲಿ ಕೆಲಸಕ್ಕಿದ್ದ ಮೂವರು

ಹೌದು ಯೂನಾಫ್ ಡಿಜಿಟಲ್ ಸೆಲ್ಯೂಚನ್ ಎಂಬ ಟಿವಿ ರಿಪೇರಿ ಕಂಪನಿಯಲ್ಲಿ ಈ ಮೂವರು ಕೆಲಸಕ್ಕಿದ್ದರು. ಹೀಗಾಗಿ ಕಂಪನಿ ಮಾಲೀಕನೇ ಮೂವರಿಗೂ ಒಂದೇ ಮನೆ ಮಾಡಿ ಇರಿಸಿದ್ದರು. ಯಲಹಂಕದ ಶ್ರೀನಿವಾಸಪುರದ ಮನೆಯಲ್ಲಿ ಕಳೆದ ಆರು ತಿಂಗಳಿಂದ ಒಂದೇ ಮನೆಯಲ್ಲಿ ಮೂವರು ವಾಸವಿದ್ದರು.

ಇದನ್ನೂ ಓದಿ: ನರ್ಸ್​ ನಿಗೂಢ ಹತ್ಯೆ! ಹಂತಕ ಆ ಒಂದು ಸುಳಿವು ನೀಡಿದ ತಕ್ಷಣ, ಚಾಣಾಕ್ಷ ಗದಗ ಪೊಲೀಸರು ಆರೋಪಿಯನ್ನು ಲಾಕ್​ ಮಾಡಿಯೇ ಬಿಟ್ರು!

ಬುದ್ದಿ ಕಲಿಸಲು ಹೋಗಿ ಮಾಡಿಕೊಂಡ ಎಡವಟ್ಟಿಗೆ ನಡೆದಿತ್ತು ಕೊಲೆ

ಒಟ್ಟೆಗೆ ವಾಸವಿದ್ದ ಜನಾರ್ಧನ್, ರಿಜ್ವಾನ್ ಹಾಗೂ ಸುಲೇಮಾನ್, ಆದರೆ ಇತ್ತೀಚಿಗೆ ಜನಾರ್ಧನ್ ಹಾಗೂ ಇಬ್ಬರ ನಡುವೆ ಮನಸ್ತಾಪ ಶುರುವಾಗಿದ್ದು, ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಮಾರ್ಚ್​ 29ರಂದು ಕೆಲಸ ಮುಗಿಸಿ ಬೇಗ ರೂಂಗೆ ಬಂದಿದ್ದ ಜನಾರ್ಧನ್​ ಭಟ್ , ಒಳಗಡೆ ಬೈಕ್​ ಪಾರ್ಕ್​ ಮಾಡಿದ್ದ. ಬಳಿಕ ಬಂದ ಇಬ್ಬರು ತಮ್ಮ ಗಾಡಿ ಒಳಗೆ ಹಾಕಬೇಕಾಗಿತ್ತು ಎಂಬ ವಿಚಾರಕ್ಕೆ ರಿಜ್ವಾನ್ ಹಾಗೂ ಸುಲೇಮಾನ್​ ಸೇರಿ ಜನಾರ್ಧನ್​ ಜೊತೆ ಜಗಳ ಮಾಡಲು ಶುರುಮಾಡಿದ್ದಾರೆ. ಇದು ತಾರಕಕ್ಕೇರಿ ಹೊಡೆದಾಟ ಮಾಡಿಕೊಂಡಿದ್ದಾರೆ. ಬಳಿಕ ಇತನಿಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿದ ಇಬ್ಬರು, ಆತನ ಕೈಕಾಲು ಕಟ್ಟಿ ಹಾಕಿ ಬಾಯಿಗೆ ಟೇಪ್ ಸುತ್ತಿದ್ದು, ಜನಾರ್ಧನ ಉಸಿರುಗಟ್ಟಿ ಸಾವನಪ್ಪಿದ್ದ. ಕೊನೆಗೆ ಆತ ಸಾವನಪ್ಪಿರುವುದು ತಿಳಿದು ಆರೋಪಿಗಳು ಬೆಂಗಳೂರು ಬಿಟ್ಟು ಪರಾರಿಯಾಗಿದ್ದರು. ಸತತ ಕಾರ್ಯಾಚರಣೆ ನಡೆಸಿದ ಯಲಹಂಕ ಪೊಲೀಸರು ಇದೀಗ ಆರೋಪಿಗಳ ಬಂಧಿಸಿದ್ದಾರೆ.

ಅಕ್ರಮವಾಗಿ ರಕ್ತಚಂದನ ತುಂಡುಗಳನ್ನ ಮಾರುತ್ತಿದ್ದ ವ್ಯಕ್ತಿಯನ್ನ ಬಂಧಿಸಿದ ಪೊಲೀಸರು

ಬೆಂಗಳೂರು: ಅಕ್ರಮವಾಗಿ ರಕ್ತಚಂದನದ ತುಂಡುಗಳನ್ನು ಮಾರುತ್ತಿದ್ದ ಕೃಷ್ಣ(35)ಎಂಬಾತನನ್ನ ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ವಿದ್ಯಾನಗರ ಬಸ್​ ನಿಲ್ದಾಣ ಬಳಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಬಂಧಿಸಿದ್ದು, ಬಂಧಿತನಿಂದ 124 ಕೆಜಿಯ 14 ರಕ್ತಚಂದನದ ತುಂಡನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:24 am, Sat, 15 April 23

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್