ಪ್ರಿಯಕರನೊಂದಿಗೆ ಪತ್ನಿ ಪರಾರಿಯಾಗಿರುವ ಕೋಪದಲ್ಲಿ ಮಾವನನ್ನು ಅಳಿಯ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪತ್ನಿ ಓಡಿ ಹೋಗಿರುವ ಕೋಪದಲ್ಲಿ ಮಾವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ, ಅಂಬಾಡ್‌ದ ಶಾರದಾ ನಗರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಆರೋಪಿಯು ಪೈಠಾಣ್‌ನ ಅದೂಲ್ ನಿವಾಸಿಯಾಗಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಯ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋಗಿ ಔರಂಗಾಬಾದ್‌ನಲ್ಲಿ ನೆಲೆಸಿದ್ದಳು. ಪತ್ನಿಯ ಕೃತ್ಯದಿಂದ ಕುಪಿತಗೊಂಡ ಆರೋಪಿ ತನ್ನ ಮಾವನನ್ನು ಕೊಲೆ ಮಾಡಿದ್ದಾರೆ.
ಇಬ್ಬರ ನಡುವೆ ಪತ್ನಿ ವಿಚಾರವಾಗಿ ಜಗಳ ನಡೆದಿದೆ ಆ ಸಂದರ್ಭದಲ್ಲಿ ಕೋಪಗೊಂಡ ವ್ಯಕ್ತಿ ಮಾವನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Thu, 30 March 23