ದಾವಣಗೆರೆ: ಬಾಲ್ಯದ ಗೆಳೆಯನ ಜೊತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ; ತನಿಖೆ ದಿಕ್ಕು ತಪ್ಪಿಸಲು ಖತರ್ನಾಕ್​ ಪ್ಲ್ಯಾನ್​

ಅವಳು ಸ್ವಲ್ಪ ಓದಿದ್ದಳು. ಜೊತೆಗೆ ವಕೀಲರೊಬ್ಬರ ಬಳಿ ಸಹಾಯಕಿ ಆಗಿದ್ದಳು. ಆದರೆ ಪತಿ ಕಟಿಂಗ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ. ಮುದ್ದಾದ ಎರಡು ಅವಳಿ ಜವಳಿ ಮಕ್ಕಳಿದ್ರು ಪತಿಯೊಂದಿಗೆ ಮಾತ್ರ ಸರಿ ಇರಲಿಲ್ಲ. ಈ ವಿಚಾರ ಮನೆಯಲ್ಲಿ ಗೊತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಪತಿ ನಡು ರಸ್ತೆಯಲ್ಲಿ ಕೊಲೆಯಾಗಿದ್ದ. ಬಳಿಕ ಪೊಲೀಸರು ತನಿಖೆ ಆರಂಭಿಸಿದಾಗ ಗೊತ್ತಾಗಿದೆ ಕೈ ಹಿಡಿದವಳೇ ಆತನನ್ನ ಮುಗಿಸಿ ಹಾಕಿದ್ದಳು. ಏನಿದು ಕಥೆ ಅಂತೀರಾ ಇಲ್ಲಿದೆ ನೋಡಿ.

ದಾವಣಗೆರೆ: ಬಾಲ್ಯದ ಗೆಳೆಯನ ಜೊತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ; ತನಿಖೆ ದಿಕ್ಕು ತಪ್ಪಿಸಲು ಖತರ್ನಾಕ್​ ಪ್ಲ್ಯಾನ್​
ಆರೋಪಿ ಪತ್ನಿ ಶ್ವೇತಾ, ಚಂದ್ರಶೇಖರ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 30, 2023 | 8:32 AM

ದಾವಣಗೆರೆ: ಇದೇ ತಿಂಗಳ 23 ರಂದು ದಾವಣಗೆರೆ ನಗರದ ರಿಂಗ್ ರಸ್ತೆಯಲ್ಲಿ ಒರ್ವ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕಾರದ ಪುಡಿ ಎರಚಿ ಬಳಿಕ ಚಾಕುವಿನಿಂದ ಆತನ ಕುತ್ತಿಗೆ ಕತ್ತರಿಸಲಾಗಿತ್ತು. ಇದನ್ನ ನೋಡಿದ ಬಹುತೇಕರು ಇತ ರೌಡಿಶೀಟರ್ ಇರಬೇಕು. ವಿರೋಧಿ ಗ್ಯಾಂಗ್​ನವರು ಹೊಡೆದು ಹಾಕಿರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದರು. ಆತನ ಜೇಬಿನಲ್ಲಿ ಎರಡು ಬೆಂಗಳೂರಿಂದ ಬಂದ ರೇಲ್ವೆ ಟಿಕೆಟ್ ಬಿಟ್ಟರೇ ಏನು ಇರಲಿಲ್ಲ. ಹೀಗೆ ಶವ ಸಿಕ್ಕ ಸಂಜೆಯೊಳಗಾಗಿ ಇತನ ಗುರುತು ಪತ್ತೆಯಾಗಿತ್ತು. ಇತ ಶವವನ್ನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿತ್ತು. ಇತ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿ‌, ವೃತ್ತಿಯಲ್ಲಿ ಕಟಿಂಗ್​ ಶಾಪ್​ ನಡೆಸುತ್ತಿದ್ದ ಇತನನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಇತನ ಕುರುಹು ಸಿಕ್ಕ ಮೇಲೆ ಪೊಲೀಸರು ಆತನ ಮನೆಯವರಿಗೆ ತಿಳಿಸಿದ್ದಾರೆ. ಹತ್ಯೆಯಾದ ವ್ಯಕ್ತಿಯ ಸಹೋದರ, ಚಿಕ್ಕಪ್ಪ. ಅಕ್ಕ ಭಾವ ಹೀಗೆ ಬಹುತೇಕ ಸಂಬಂಧಿಕರು ಬಂದಿದ್ದಾರೆ. ಆದರೆ ಪತ್ನಿ ಶ್ವೇತಾ ಮಾತ್ರ ಕಾಣುತ್ತಿರಲಿಲ್ಲ. ಅಲ್ಲಿಗೆ ಪೊಲೀಸರಿಗೆ ಒಂದು ಚಿಕ್ಕ ಅನುಮಾನ ಶುರುವಾಗಿತ್ತು. ಇನ್ನು 35 ವರ್ಷದ ಮೃತ ಮಹಾಂತೇಶ್​, ದಾವಣಗೆರೆಯಲ್ಲಿ ತನ್ನ ಸಹೋದರಿಯ ಪುತ್ರಿ ಶ್ವೇತಾಳನ್ನ ಮದ್ವೆ ಆಗಿದ್ದನು. ಇವರಿಗೆ ಅವಳಿ ಜವಳಿ ಮಕ್ಕಳಿದ್ದಾರೆ. ಇವರ ಕುಲಕಸುಬು ಕಟಿಂಗ್ ಶಾಪ್ ನಡೆಸುವುದು. ಗ್ರಾಮದಲ್ಲಿ ಸಹ ಕಟಿಂಗ್ ಶಾಪ್ ಇಟ್ಟಿದ್ದ. ಗ್ರಾಮೀಣ ಪ್ರದೇಶದಲ್ಲಿ ಉದ್ರಿ ಗಿರಾಕಿಗಳೇ ಜಾಸ್ತಿ. ಹೀಗಾಗಿ ಪತ್ನಿ ಶ್ವೇತಾ ಇಲ್ಲಿ ಇರಲ್ಲ ಎಂದಿದ್ದಾಳೆ. ಬಳಿಕ ತನ್ನೂರಿನಿಂದ ನೇರವಾಗಿ ದಾವಣಗೆರೆ ಬಂದಿದ್ದಾರೆ. ಬೇರೆಯವರ ಅಂಗಡಿಯಲ್ಲಿ ಕಟಿಂಗ್​ ಕೆಲಸಕ್ಕೆ ಸೇರಿಕೊಂಡಿದ್ದು ಚೆನ್ನಾಗಿದ್ದ ಸಂಸಾರದಲ್ಲಿ ಆತನನ್ನ ಕೊಲೆ ಮಾಡಲು ಕಾರಣ ಹುಡುಕಿದ ಪೊಲೀಸರು ದಂಗಾಗಿದ್ದರು.

ಇದನ್ನೂ ಓದಿ:ಬಿಜೆಪಿ ಮುಖಂಡ ಯೋಗೀಶ್ ಗೌಡ ಬರ್ಬರ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಧಾರವಾಡ ಎಂಟ್ರಿಗೆ ಅನುಮತಿ ನಿರಾಕರಿಸಿದ ಸುಪ್ರೀಂ

ಪೊಲೀಸ್​ ತನಿಖೆಯಿಂದ ಹೊರಬಿತ್ತು ಕೊಲೆ ಮಾಡಿದ್ದು ಯಾರು ಎಂದು?

ಹೌದು ಇತ್ತೀಚಿಗೆ ವಿಪರೀತ ಕುಡಿಯುತ್ತಿದ್ದ ಇತ. ಒಂದೊಂದು ಸಲ ಕಟಿಂಗ್ ಶಾಪ್​ನಲ್ಲಿಯೇ ಮಲಗುತ್ತಿದ್ದ. ಉಳಿದಂತೆ ರೇಲ್ವೆ ನಿಲ್ದಾಣ, ಬಸ್ ಸ್ಟಾಂಡ್​ನಲ್ಲಿ ರಾತ್ರಿಗಳನ್ನ ಕಳೆಯುತ್ತಿದ್ದ. ಇನ್ನು ಯಾರಾದ್ರು ರೇಲ್ವೆ ನಿಲ್ದಾಣದಲ್ಲಿ ಸಿಕ್ಕದರೆ ಸಾಕು ದಾವಣಗೆರೆಯಿಂದ ಬೆಂಗಳೂರು, ಬೆಂಗಳೂರಿನಿಂದ ದಾವಣಗೆರೆ ರಾತ್ರಿ ಪ್ರಯಾಣ ಮಾಡುತ್ತಿದ್ದ. ಇದೇ ಕಾರಣಕ್ಕೆ 12ಕ್ಕೂ ಹೆಚ್ಚು ರೇಲ್ವೆ ಟಿಕೆಟ್ ಆತನ ಜೇಬಿನಲ್ಲಿ ಸಿಕ್ಕಿವೆ. ಕಳೆದ ಒಂದು ತಿಂಗಳಿಂದ ಇದೇ ರೀತಿ ಮಾಡುತ್ತಿದ್ದನಂತೆ. ಹೀಗಿದ್ದ ವ್ಯಕ್ತಿ ಇದಕ್ಕಿದ್ದಂತೆ ಸಾವನ್ನಪ್ಪಿದ್ದು ಮಾತ್ರ ವಿಚಿತ್ರವಾಗಿತ್ತು. ಪೊಲೀಸ್ ತನಿಖೆಯಿಂದ ಗೊತ್ತಾಗಿದ್ದು ಇದನ್ನ ಮಾಡಿದ್ದು ಬೇರೆಯಾರು ಅಲ್ಲ ಸ್ವಂತ ಮಹಾಂತೇಶನ ಪತ್ನಿ ಸೌಮ್ಯ ಎಂದು.

ಆದರೆ ನೇರವಾಗಿ ಅವಳೇ ಕೊಲೆ ಮಾಡದೇ ತನ್ನ ಬಾಲ್ಯ ಸ್ನೇಹಿತ ಚಂದ್ರಶೇಖರನಿಂದ ಹತ್ಯೆ ಮಾಡಿಸಿದ್ದಳು. ಹೌದು ಈ ಚಂದ್ರಶೇಖರ ಮೆಡಿಕಲ್ ರೆಪ್​ಯಾಗಿದ್ದ. ಇತ ಪ್ರಾಥಮಿಕ ಶಾಲೆಯಿಂದಲೂ ಸೌಮ್ಯಾ ಮತ್ತು ಚಂದ್ರಶೇಖರ ಸಹ ಪಾಠಿಗಳು. ಜೊತೆಗೆ ಮದ್ವೆ ಆದ ಮೇಲೂ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ಗೊತ್ತಾಗಿಯೇ ಪತಿ ಮಹಾಂತೇಶ ರೇಲ್ವೆ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದ, ಕುಡಿತ ಕೂಡ ಸುರು ಮಾಡಿದ್ದ. ತನ್ನ ಪಲ್ಲಂಗದಾಟಕ್ಕೆ ಕಂಟಕವಾಗಿದ್ದ ಪತಿಯನ್ನ ಮುಗಿಸಿ ಹಾಕಿದ್ರೆ ನೆಮ್ಮದಿಯಿಂದ ಇರಬಹುದು ಎಂದು ಪ್ಲಾನ್ ಮಾಡಿ ಗಂಡನನ್ನೇ ಪರಲೋಕ ಕಳಿಸಿದ್ದಾಳೆ.

ಇದನ್ನೂ ಓದಿ:ನಾನು ಕೊಲೆಯಾಗುವುದು ಗ್ಯಾರಂಟಿ, ಜೈಲಿನಿಂದ ಹೊರಬರಲಾರೆ: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್

ತನಿಖೆ ದಿಕ್ಕು ತಪ್ಪಿಸಲು ಕಾರದ ಪುಡಿ ಹಾಕಿದ್ದ ಪ್ರಿಯಕರ

ಇನ್ನು ಮೃತ ಮಹಾಂತೇಶ್ ಕೆಲ ದಿನಗಳಿಂದ ರೇಲ್ವೆ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದ ವಿಷಯ ತಿಳಿದ ಪತ್ನಿ ಶ್ವೇತಾ ಹಾಗೂ ಅವಳ ಪ್ರಿಯಕರ ಚಂದ್ರಶೇಖರ್ ಮಾ. 23 ರಾತ್ರಿ ರೇಲ್ವೆ ನಿಲ್ದಾಣದಲ್ಲಿ ಕುಳಿತ ಮಹಾಂತೇಶನನ್ನ ಕರೆದುಕೊಂಡ ಚಂದ್ರಶೇಖರ್​ ರಿಂಗ್ ರಸ್ತೆಗೆ ಹೋಗಿದ್ದಾನೆ. ಅಲ್ಲಿ ಆತನಿಗೆ ಕಂಠಪೂರ್ತಿ ಕುಡಿಸಿದ್ದಾನೆ. ಜೊತೆಗೆ ಚಂದ್ರಶೇಖರ ಮೆಡಿಕಲ್ ರೆಪ್ ಆದ ಹಿನ್ನೆಲೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಗೊತ್ತಿತ್ತು. ಮದ್ಯದಲ್ಲಿ ನಿದ್ರೆ ಮಾತ್ರ ಮಿಕ್ಸ್ ಮಾಡಿದ್ದಾನೆ. ಹೀಗೆ ನಿದ್ರೆ ಮಾತ್ರ ಮಿಕ್ಸ್ ಮಾಡಿದ್ದರಿಂದ ಕುಡಿದ ನಿದ್ರೆಗೆ ಜಾರಿದ್ದಾನೆ ಮಹಾಂತೇಶ್​. ಆಗ ಕಲ್ಲು ಎತ್ತಿ ತಲೆ ಮೇಲೆ ಹಾಕಿದ್ದಾನೆ. ನಂತರ ಒಂದು ಗಂಟೆ ಅಲ್ಲಿಯೇ ಕುಳಿತು ಜೀವಂತ ಇದ್ದಾನಾ ಎಂದು ನೋಡಿದ್ದಾನೆ. ಸಂಶಯ ಬಂದು ಚಾಕುವಿನಿಂದ ಕುತ್ತಿಗೆ ಕತ್ತರಿಸಿದ್ದಾನೆ. ಜೊತೆಗೆ ತನಿಖೆ ದಾರಿ ತಪ್ಪಿಸಲು ದೇಹದ ತುಂಬೆಲ್ಲಾ ಕಾರದ ಪುಡಿ ಹಾಕಿ ಪರಾರಿ ಆಗಿದ್ದಾನೆ.

ಬಳಿಕ ಆತನ ಗುರುತು ಪತ್ತೆಯಾಗಿ ದೂರು ಸ್ವೀಕರಿಸಲು ಪತ್ನಿ ಶ್ವೇತಾಳನ್ನ ಕರೆಸಿದ ಪೊಲೀಸರು. ವಕೀಲರ ಬಳಿ ಕೆಲ್ಸಕ್ಕೆ ಹೋಗಿದ್ದ ಶ್ವೇತಾ ಮನೆಗೆ ಪೋನ್ ಮಾಡಿ ತನ್ನ ಪತಿ ಮರ್ಡರ್ ಆಗಿದೆ. ಪೊಲೀಸ್ ಠಾಣೆಗೆ ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಪತ್ನಿಯ ವರ್ತನೆ ಅವಳು ಸ್ಟೈಲ್ ನೋಡಿ ತನಿಖಾಧಿಕಾರಿಗಳಿಗೆ ಸಂಶಯ ಬಂದು ಆಕೆಯ ಮೊಬೈಲ್ ನಂಬರ್ ಸಿಡಿಆರ್ ಹಾಕಿದ್ದಾರೆ. ಚಂದ್ರಶೇಖರನ ಮೊಬೈಲ್ ಗೆ ಹೆಚ್ಚು ಪೋನ್ ಮಾಡಿದ್ದು ಗೊತ್ತಾಗಿದೆ. ಆತ ಇರುವ ಸ್ಥಳ ಪತ್ತೆ ಹಚ್ಚಿ ಇಬ್ಬರನ್ನ ಪ್ರತ್ಯೆಕವಾಗಿಟ್ಟು ತನಿಖೆ ಮಾಡಿದ್ದಾರೆ. ಆಗ ಇಬ್ಬರು ಕೊಲೆ ಮಾಡಿದ್ದು ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಇದೀಗ ವಿದ್ಯಾನಗರ ಠಾಣೆಯ ಪೊಲೀಸರು ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದರಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ ಎಂಬುದೇ ದುರಂತ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:30 am, Thu, 30 March 23

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ