ಸಂಬಂಧಿಕರನ್ನು ಬಲೆಗೆ ಬೀಳಿಸಲು ಮಗಳನ್ನೇ ಪಣಕ್ಕಿಟ್ಟು, ಕೊನೆಗೆ ಆಕೆಯ ಹತ್ಯೆ ಮಾಡಿದ ಕ್ರೂರ ತಂದೆ

| Updated By: ನಯನಾ ರಾಜೀವ್

Updated on: Nov 13, 2022 | 12:56 PM

ತಂದೆಯೊಬ್ಬ ತನ್ನ ಸಂಬಂಧಿಕರನ್ನು ಬಲೆಗೆ ಬೀಳಿಸಲು ಮಗಳನ್ನೇ ಪಣಕ್ಕಿಟ್ಟು, ಕೊನೆಯಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಸಂಬಂಧಿಕರನ್ನು ಬಲೆಗೆ ಬೀಳಿಸಲು ಮಗಳನ್ನೇ ಪಣಕ್ಕಿಟ್ಟು, ಕೊನೆಗೆ ಆಕೆಯ ಹತ್ಯೆ ಮಾಡಿದ ಕ್ರೂರ ತಂದೆ
Death
Follow us on

ತಂದೆಯೊಬ್ಬ ತನ್ನ ಸಂಬಂಧಿಕರನ್ನು ಬಲೆಗೆ ಬೀಳಿಸಲು ಮಗಳನ್ನೇ ಪಣಕ್ಕಿಟ್ಟು, ಕೊನೆಯಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಒಬ್ಬ ತಂದೆ ತನ್ನ ಅಪ್ರಾಪ್ತ ಮಗಳನ್ನು ತನ್ನ ಸಂಬಂಧಿಕರನ್ನು ಬಲೆಗೆ ಬೀಳಿಸಲು ಬಳಸಿಕೊಂಡು, ಸಂಬಂಧಿಕರ ವಿರುದ್ಧ ಸೂಸೈಡ್ ನೋಟ್ ಬರೆಸಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸುವಂತೆ ಹೇಳಿ, ಕೊನೆಗೆ ನಿಜವಾಗಿಯೂ ಮಗಳನ್ನು ಹತ್ಯೆ ಮಾಡಿರುವ ಮನಕಲಕುವ ಘಟನೆ ಇದಾಗಿದೆ.

ನಾಗಪುರ ನಗರದ ಕಲಾಮ್ನಾ ಪ್ರದೇಶದಲ್ಲಿ ನವೆಂಬರ್ 6 ರಂದು 16 ವರ್ಷದ ಬಾಲಕಿ ತನ್ನ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಕೊಠಡಿಯಲ್ಲಿ ಪತ್ತೆಯಾದ ಐದು ಸೂಸೈಡ್ ನೋಟ್‌ಗಳ ಆಧಾರದ ಮೇಲೆ ಪೊಲೀಸರು ಆತನ ಮಲತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅಜ್ಜಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಕಾಳಮನ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ತನಿಖೆಯ ವೇಳೆ, ಸಂತ್ರಸ್ತೆಯ ತಂದೆಯ ಮೊಬೈಲ್ ಫೋನ್‌ನಿಂದ, ಘಟನೆಯ ಹಿಂದೆ ಆತ್ಮಹತ್ಯೆಯಂತೆ ಕಾಣುವ ಪಿತೂರಿ ಇದೆ ಎಂದು ತಿಳಿದುಬಂದಿತ್ತು.

ಆರೋಪಿ ಸಂಬಂಧಿಕರಿಗೆ ಪಾಠ ಕಲಿಸಲು ಬಯಸಿದ್ದ. ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ ಮೃತ ಬಾಲಕಿಯ ತಂದೆಯ ಮೊಬೈಲ್ ಪೋಲೀಸರ ಕೈಗೆ ಸಿಕ್ಕಿದ್ದು, ಅದರಲ್ಲಿ ಹುಡುಕಾಡಿದಾಗ ಅದರಲ್ಲಿ ಸಂತ್ರಸ್ತೆಯ ಫೋಟೋಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ.

ಆತ ಮಗಳಿಗೆ ಸೂಸೈಡ್​ ನೋಟ್​ನಲ್ಲಿ ಸಂಬಂಧಿಕರ ಹೆಸರನ್ನು ಬರೆಯುವಂತೆ ಒತ್ತಾಯಿಸಿದ್ದ, ಇಷ್ಟೆಲ್ಲಾ ಮಾಡಿದ ಬಳಿಕ ಬಾಲಕಿ ತನ್ನ ತಂದೆಯ ಸೂಚನೆಯಂತೆ ಕುತ್ತಿಗೆಗೆ ನೇಣು ಬಿಗಿದು ಸ್ಟೂಲ್ ಮೇಲೆ ನಿಂತಿದ್ದಳು.

ಈ ವೇಳೆ ಆರೋಪಿಯು ಫೋಟೋ ಕ್ಲಿಕ್ಕಿಸಿಕೊಂಡಿದ್ದ. ನಂತರ ವ್ಯಕ್ತಿ ಕುರ್ಚಿಯನ್ನು ಒದ್ದಿದ್ದ, ಪರಿಣಾಮವಾಗಿ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದಾಳೆ, ಈ ಘಟನೆ ನಡೆದಾಗ ಆಕೆಯ 12 ವರ್ಷದ ಸಹೋದರಿ ಕೂಡ ಅಲ್ಲಿದ್ದಳು.

ತಾನು ಯಾವುದೋ ಕೆಲಸದ ನಿಮಿತ್ತ ಹೊರ ಹೋಗಿದ್ದೆ ವಾಪಸಾಗುವಷ್ಟರಲ್ಲಿ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡಿದ್ದ. ಪೊಲೀಸರು ಆರಂಭದಲ್ಲಿ ಐದು ಸಂಬಂಧಿಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದರು. ಆದರೆ ನಂತರ ತನಿಖಾಧಿಕಾರಿಗಳು ತಮ್ಮ ತನಿಖೆಯಲ್ಲಿ ವಿಭಿನ್ನವಾದ ವಿಷಯಗಳನ್ನು ಕಂಡುಕೊಂಡರು.

ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಅವನು ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಇವರ ಮೊದಲ ಪತ್ನಿ 2016ರಲ್ಲಿ ತೀರಿಕೊಂಡಿದ್ದು, ಎರಡನೇ ಪತ್ನಿಯೂ ಮನೆ ಬಿಟ್ಟು ಹೋಗಿದ್ದಾರೆ. ಕೂಲಿ ಕೆಲಸ ಮಾಡುತ್ತಿರುವ ಈತನನ್ನು ಇದೀಗ ಕೊಲೆ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

ಇತರೆ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ