AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime Against Kids: ಕರ್ನಾಟಕದಲ್ಲಿ 8 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾದ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು

ಕರ್ನಾಟಕವು ಕಳೆದ 8 ವರ್ಷಗಳಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. 2013 ರಲ್ಲಿ ರಾಜ್ಯವು ಅಂತಹ 1,353 ಪ್ರಕರಣಗಳನ್ನು ವರದಿ ಮಾಡಿದರೆ, ಎಂಟು ವರ್ಷಗಳಲ್ಲಿ ಐದು ಪಟ್ಟು ಹೆಚ್ಚು ಏರಿಕೆ ಕಂಡಿದೆ.

Crime Against Kids: ಕರ್ನಾಟಕದಲ್ಲಿ 8 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾದ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು
Kids
TV9 Web
| Updated By: ನಯನಾ ರಾಜೀವ್|

Updated on: Nov 13, 2022 | 10:48 AM

Share

ಕರ್ನಾಟಕವು ಕಳೆದ 8 ವರ್ಷಗಳಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. 2013 ರಲ್ಲಿ ರಾಜ್ಯವು ಅಂತಹ 1,353 ಪ್ರಕರಣಗಳನ್ನು ವರದಿ ಮಾಡಿದರೆ, ಎಂಟು ವರ್ಷಗಳಲ್ಲಿ ಐದು ಪಟ್ಟು ಹೆಚ್ಚು ಏರಿಕೆ ಕಂಡಿದೆ. 2021 ರಲ್ಲಿ 7,261 ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದಾಖಲೆಗಳು ಹೆಚ್ಚಿನ ಪ್ರಕರಣಗಳು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿವೆ ಎಂದು ತೋರಿಸುತ್ತವೆ.

2813 ಅಪಹರಣ ಕ್ರಮವಾಗಿ 2469 ಹಾಗೂ 2559 ಪ್ರಕರಣಗಳು ದಾಖಲಾಗಿದ್ದವು. 2012ರಲ್ಲಿ ಪೋಕ್ಸೋ ಕಾಯ್ದೆಯನ್ನು ಜಾರಿಗೊಳಿಸುವುದರಿಂದಾಗಿ ಇದೀಗ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜನರು ದೂರು ಕೊಡಲು ಮುಂದಾಗುತ್ತಿದ್ದಾರೆ ಎಂದು ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತ ಡಾ. ಎಸ್​ಡಿ ಶರಣಪ್ಪ ತಿಳಿಸಿದ್ದಾರೆ.

2020ರಿಂದ ಸುಮಾರು 2563 ಪ್ರಕರಣಗಳನ್ನು ಪೊಲೀಸರು ಇನ್ನೂ ತನಿಖೆ ಮಾಡಬೇಕಿದೆ. 2022ರಲ್ಲಿ ತನಿಖೆ ಮಾಡಬೇಕಾದ ಒಟ್ಟು ಪ್ರಕರಣಗಳ ಸಂಖ್ಯೆಯು ಇದೀಗ 9824ಕ್ಕೆ ಏರಿಕೆಯಾಗಿದೆ.

ಮಕ್ಕಳು ಹಾಗೂ ಮಹಿಳೆಯರ ವಿರುದ್ಧದ ಅಪರಾಧಗಳ ತನಿಖೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾವು ನಿಯಮಿತವಾಗಿ ಪ್ರಗತಿಯನ್ನು ಪರಿಶೀಲಿಸುತ್ತಿದ್ದೇವೆ.

ಮಕ್ಕಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 13,903 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ, 4673 ಪ್ರಕರಣಗಳನ್ನು 2021ರಲ್ಲಿ ವಿಚಾರಣೆಗೆ ಕಳುಹಿಸಲಾಗಿದೆ.

ಮಕ್ಕಳು ರಕ್ಷಣಾ ನಿರ್ದೇಶನಾಲಯದ ಮಕ್ಕಳ ಕಲ್ಯಾಣ ಸಮಿತಿಯು ಪೋಷಕರಿಗೆ ಹೆಚ್ಚು ಜಾಗರೂಕರಾಗಿರಲು ಸಲಹೆಗಳನ್ನು ಕೂಡ ನೀಡಿದ್ದಾರೆ. ವಿವಿಧ ಹೊಸ ತಂತ್ರಜ್ಞಾನಗಳಿಂದ ಕೇವಲ ಅನುಕೂಲ ಮಾತ್ರವಲ್ಲ ಬೆದರಿಕೆಯೂ ಹೆಚ್ಚಾಗುತ್ತಿದೆ, ಗ್ಯಾಜೆಟ್​ಗಳು, ಇಂಟರ್​ನೆಟ್ ವ್ಯಸನವು ಹದಿಹರೆಯದವರನ್ನು ದುರ್ಬಲಗೊಳಿಸಬಹುದು ಎಂದು ಸಿಬ್ಲ್ಯೂಸಿಯ ಅಧ್ಯಕ್ಷೆ ನಾಗರತ್ನ ಹೇಳಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ