Viral News: ಹೆಣ್ಣುಮಕ್ಕಳ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಟ್ಯೂಷನ್ ಶಿಕ್ಷಕನ ಬೆತ್ತಲೆ ಮೆರವಣಿಗೆ!

|

Updated on: Aug 28, 2024 | 10:20 PM

ಮಹಾರಾಷ್ಟ್ರದಲ್ಲಿ ಟ್ಯೂಷನ್ ಕ್ಲಾಸ್​ಗೆ ಬರುತ್ತಿದ್ದ ಹೆಣ್ಣು ಮಕ್ಕಳೊಂದಿಗೆ ಶಿಕ್ಷಕರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ, ಈ ವಿಷಯ ಗೊತ್ತಾಗುತ್ತಿದ್ದಂತೆ ಟ್ಯೂಷನ್ ಶಿಕ್ಷಕನಿಗೆ ತಾವೇ ತಕ್ಕ ಪಾಠ ಕಲಿಸಲು ಮುಂದಾದ ಪೋಷಕರು ಆತನ ಬಟ್ಟೆ ಬಿಚ್ಚಿ, ಮೆರವಣಿಗೆ ಮಾಡಿದ್ದಾರೆ.

Viral News: ಹೆಣ್ಣುಮಕ್ಕಳ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಟ್ಯೂಷನ್ ಶಿಕ್ಷಕನ ಬೆತ್ತಲೆ ಮೆರವಣಿಗೆ!
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಟ್ಯೂಷನ್ ಕ್ಲಾಸ್​ಗೆ ಬರುತ್ತಿದ್ದ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಆ ಬಾಲಕಿಯರ ಪೋಷಕರು ಮತ್ತು ಸ್ಥಳೀಯರು ಸೇರಿ ಟ್ಯೂಷನ್ ಶಿಕ್ಷಕನನ್ನು ಥಳಿಸಿ, ಆತನ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ಇದಾದ ಬಳಿಕ ಆ ಶಿಕ್ಷಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಬಹುತೇಕರು ಇಂತಹ ಕಾಮುಕರಿಗೆ ಕಾನೂನಿನಲ್ಲೇ ಶಿಕ್ಷೆಯಾಗಬೇಕೆಂದು ಕಾಯುತ್ತಾ ಕುಳಿತರೆ ಮನೆಯ ಹೆಣ್ಣುಮಕ್ಕಳು ವಾಪಾಸ್ ಸುರಕ್ಷಿತವಾಗಿ ಮನೆ ತಲುಪುತ್ತಾರೆ ಎಂಬ ನಂಬಿಕೆಯೇ ಇಲ್ಲವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Viral Video: ರಸ್ತೆಯಲ್ಲಿ ಓಡಾಡುವ ಕುಡುಕರಿಗೆ ಪೊರಕೆಯಲ್ಲಿ ಥಳಿಸಿದ ಮಹಿಳೆಯರು; ವಿಡಿಯೋ ವೈರಲ್

13 ವರ್ಷದ ಬಾಲಕಿ ಆತನ ಟ್ಯೂಷನ್ ತರಗತಿಗೆ ಹೋಗಲು ನಿರಾಕರಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಆಕೆಯ ಪೋಷಕರು ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, ಆಕೆ ಟ್ಯೂಷನ್ ಶಿಕ್ಷಕ ದಿನವೂ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ತಿಳಿಸಿದಳು. ಇದರಿಂದ ಎಚ್ಚೆತ್ತುಕೊಂಡ ಪೋಷಕರು ಆ ಟ್ಯೂಷನ್ ಕ್ಲಾಸ್​ನ ಬೇರೆ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಅವರಿಗೂ ಇದೇ ರೀತಿಯ ಅನುಭವವಾಗಿದ್ದು ಗೊತ್ತಾಯಿತು.

ಇನ್ನು ಸುಮ್ಮನಿದ್ದರೆ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲ ಎಂದು ತಿಳಿದ ಪೋಷಕರು ತಾವೇ ಆ ಶಿಕ್ಷಕನಿಗೆ ಬುದ್ಧಿ ಕಲಿಸಲು ನಿರ್ಧರಿಸಿದರು. ಆ ಬಾಲಕಿಯರ ಪೋಷಕರು ಮತ್ತು ಇತರ ನಾಗರಿಕರು ಶಿಕ್ಷಕರನ್ನು ಥಳಿಸಿದರು. ವಿರಾರ್‌ನಲ್ಲಿನ ಅವರ ತರಗತಿಗಳಿಂದ ಆ ಶಿಕ್ಷಕನನ್ನು ಹೊರಗೆ ಎಳೆದ ನಂತರ ಅವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದರು.

ಇದನ್ನೂ ಓದಿ: Shocking Video: ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ; ಶಾಕಿಂಗ್ ವಿಡಿಯೋ ವೈರಲ್

ಬಳಿಕ ಆ ಶಿಕ್ಷಕರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ವಿರಾರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಜಯ್ ಪವಾರ್ ತಿಳಿಸಿದ್ದಾರೆ. ಟ್ಯೂಷನ್ ಶಿಕ್ಷಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ