ಉರಿ ಬಿಸಿಲಿನಲ್ಲಿ ಮನೆಯಲ್ಲಿ ತಂಪಾದ ಪಾನೀಯವನ್ನು ಕುಡಿಯಬೇಕು ಎಂದು ಎಲ್ಲರಿಗೂ ಅನಿಸುವುದು ಸಹಜ. ಹಾಗೆಯೇ ಮಹಿಳೆಯೊಬ್ಬರು ತನ್ನ ಗಂಡ ಹಾಗೂ ಮನೆಯವರಿಗೆ ಮಾವಿನ ಹಣ್ಣಿನ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿರುವ ಘಟನೆ ಮಹಾರಾಷ್ಟ್ರದ ತುಳಜಾಪುರದಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಪತ್ನಿ ಭಾಗ್ಯವತಿ ಚಿಂಗುಂಡೆ ವಿರುದ್ಧ ನಲದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಹೇಶ್ ಕುಮಾರ ಚಿಂಗುಂಡೆ ತುಳಜಾಪುರ ತಾಲೂಕಿನ ನಂದಗಾಂವ್ದವರು. ಮೇ 24 ರಂದು ಸಂಜೆ ಊಟಕ್ಕೆ ಬೇಗ ಬರುವಂತೆ ಪತ್ನಿಗೆ ಪತಿಗೆ ಹೇಳಿದ್ದರು.
ಮತ್ತಷ್ಟು ಓದಿ: ಕೊಪ್ಪಳ: ತನ್ನನ್ನು ಬಿಟ್ಟು ಸಹೋದರನನ್ನು ಮದ್ವೆಯಾಗಿದ್ದಕ್ಕೆ ಮೂವರನ್ನ ಕೊಂದ ಭಗ್ನ ಪ್ರೇಮಿ
ಊಟದ ಬಳಿಕ ಮಾವಿನ ಹಣ್ಣಿನ ಜ್ಯೂಸ್ಗೆ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಅದಾದ ಬಳಿಕ ಮಹೇಶಕುಮಾರ ಚಿಂಗುಂಡೆ ಹಾಗೂ ಅವರ ಮನೆಯ ಇತರ ಸದಸ್ಯರು ಅಸ್ವಸ್ಥಗೊಂಡಿದ್ದರು. ತಡವಾಗಿ ಮಲಗಿದ್ದರು, ಅಲ್ಲದೆ ನಿದ್ರೆಯಿಂದ ಎದ್ದ ನಂತರ ದೇಹದಲ್ಲಿ ಅಪಾರ ನೋವು ಕಾಣಿಸಿಕೊಂಡಿತ್ತು. ಇದಾಇ ಬಳಿಕ ಆಕೆ ಜ್ಯೂಸ್‌ನಲ್ಲಿ ಏನೋ ಬೆರೆಸಿದ್ದಳು ಎಂಬುದು ಗೊತ್ತಾಗಿದೆ. ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ನಲದುರ್ಗ ಪೊಲೀಸ್ ಠಾಣೆಯಲ್ಲಿ ಭಾಗ್ಯವತಿ ಚಿಂಗುಂಡೆ ವಿರುದ್ಧ ಸೆಕ್ಷನ್ 328ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಭಾಗ್ಯವತಿ ಜ್ಯೂಸ್‌ನಲ್ಲಿ ಏಕೆ ಮಾತ್ರೆಗಳನ್ನು ಹಾಕಿದ್ದರು, ಇದರ ಹಿಂದಿರುವ ಉದ್ದೇಶವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ