ಕೊಪ್ಪಳ: ತನ್ನನ್ನು ಬಿಟ್ಟು ಸಹೋದರನನ್ನು ಮದ್ವೆಯಾಗಿದ್ದಕ್ಕೆ ಮೂವರನ್ನ ಕೊಂದ ಭಗ್ನ ಪ್ರೇಮಿ

ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನಯೆಲ್ಲಿ ಮೂವರು ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತದೆಹಗಳನ್ನು ನೋಡಿದವರೆಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದರು. ಆದ್ರೆ, ಆತ್ಮಹತ್ಯೆ ಅಲ್ಲ. ಬದಲಾಗಿ ಮೂವರನ್ನು ಹತ್ಯೆ ಮಾಡಲಾಗಿದೆ. ಹೌದು... ತಾನು ಪ್ರೀತಿಸುತ್ತಿದ್ದವಳು ತನ್ನಸಹೋದರನನ್ನು ಮದ್ವೆಯಾಗಿದ್ದಾಳೆಂದು ಭಗ್ನ ಪ್ರೇಮಿಯೊಬ್ಬ ಮೂವರನ್ನು ಕೊಲೆ ಮಾಡಿದ್ದಾನೆ.

ಕೊಪ್ಪಳ: ತನ್ನನ್ನು ಬಿಟ್ಟು ಸಹೋದರನನ್ನು ಮದ್ವೆಯಾಗಿದ್ದಕ್ಕೆ ಮೂವರನ್ನ ಕೊಂದ ಭಗ್ನ ಪ್ರೇಮಿ
ವಸಂತಾ, ರಾಜೇಶ್ವರಿ, ಸಾಯಿಧರ್ಮತೇಜ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: May 29, 2024 | 7:20 PM

ಕೊಪ್ಪಳ, (ಮೇ 29): ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದ ಒಂದೇ ಮನೆಯಲ್ಲಿ (ಮೇ 28) ಮಗಳು, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದರು. ಶವ ನೋಡಿದವರು ಆತ್ಮಹತ್ಯೆ ಅಂತಲೇ ಹೇಳಿದ್ದರು. ಮೇಲ್ನೋಟಕ್ಕೆ ಮೂವರ ಸಾವು ಕೂಡಾ ಆತ್ಮಹತ್ಯೆ ರೀತಿಯೇ ಇತ್ತು. ಆದ್ರೆ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಬಯಲಾಗಿದೆ. ಮೂವರದು ಆತ್ಮಹತ್ಯೆಯಲ್ಲ ಬದಲಾಗಿ ಕೊಲೆ ಮಾಡಿರುವುದು ಖಚಿತವಾಗಿದ್ದು, ತನಿಖೆ ವೇಳೆ ಇಡೀ ಪೊಲೀಸರೇ ಬೆಚ್ಚಿಬೀಳುವಂತಹ ‌ವಿಚಾರ ಪತ್ತೆಯಾಗಿದೆ. ಹೌದು ತನ್ನನ್ನು ಬಿಟ್ಟು ತನ್ನ ಸಹೋದರನನ್ನು ಮದುವೆಯಾಗಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೋರ್ವ ಮೂವರನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದ್ದು, ಇಪ್ಪತ್ನಾಲ್ಕು ಗಂಟೆಯಲ್ಲೇ ಪೊಲೀಸರು ಪ್ರಕರಣವನ್ನು ಭೇದಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನಯೆಲ್ಲಿ ನಿನ್ನೆ ಮೂವರು ಶವವಾಗಿ ಪತ್ತೆಯಾಗಿದ್ದರು. ಹೊಸ ಲಿಂಗಾಪುರ ಗ್ರಾಮದ ನಿವಾಸಿಗಳಾದ ಐವತ್ತು ವರ್ಷದ ರಾಜೇಶ್ವರಿ,ರಾಜಶ್ವರಿ ಪುತ್ರಿಯಾಗಿರುವ ಇಪ್ಪತ್ತೆಂಟು ವರ್ಷದ ವಸಂತಾ, ಮತ್ತು ವಸಂತಾಳ ಐದು ವರ್ಷದ ಮಗ ಸಾಯಿಧರ್ಮತೇಜ್, ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ನಿಗೂಢವಾಗಿ ಮೃತಪಟ್ಟ ಮೂವರ ಶವ ನೋಡಿ ಇಡೀ ಗ್ರಾಮಕ್ಕೆ ಗ್ರಾಮದ ಜನರೇ ಬೆಚ್ಚಿಬಿದಿದ್ದರು. ಹೌದು ಮೇ 27 ರಂದು ಮುಂಜಾನೆಯಿಂದ ಸಂಜೆವರಗೆ ಕಂಡಿದ್ದ ಮೂವರು ಕೂಡಾ, ಸಂಜೆ ನಂತರ ಹೊರಗೆ ಕಂಡಿರಲಿಲ್ಲಾ. ಆದ್ರೆ ಮೇ 28 ರಂದು ಮುಂಜಾನೆ ಮನೆ ಬಾಗಿಲು ತಗೆದು ನೋಡಿದಾಗ, ಅಡುಗೆ ಮನೆಯಲ್ಲಿ ವಸಂತಾಳ ಶವ ಸಿಕ್ಕರೆ, ಮನೆಯ ಬೆಡ್ ರೂಮ್ ನಲ್ಲಿ ರಾಜೇಶ್ವರಿ ಮತ್ತು ರಾಜೇಶ್ವರಿ ಮೊಮ್ಮಗ ಸಾಯಿಧರ್ಮತೇಜ್ ಶವ ಇತ್ತು. ಮೂವರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಲೇ ಎಲ್ಲರು ಅಂದುಕೊಂಡಿದ್ದರು. ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಸ್ಥಳಕ್ಕೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಕೂಡಾ ಆಗಮಿಸಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಕೊಪ್ಪಳ: ಒಂದೇ ಕುಟುಂಬದ 3 ಜನ ಅನುಮಾನಾಸ್ಪದವಾಗಿ ಸಾವು, ಕೊಲೆ ಶಂಕೆ

ತನಿಖೆ ವೇಳೆ ಪೊಲೀಸರೇ ಶಾಕ್

ಮೂವರ ಶವಗಳನ್ನು ನೋಡಿದಾಗ ಆರಂಭದಲ್ಲಿಯೇ ಪೊಲೀಸರು ಕೂಡಾ ಆತ್ಮಹತ್ಯೆಯ ಶಂಕೆ ವ್ಯಕ್ತಪಡಿಸಿದ್ದರು. ಆದ್ರೆ ಆತ್ಮಹತ್ಯೆ ಯಾಕೆ ಮಾಡಿಕೊಂಡರು, ಆತ್ಮಹತ್ಯೆ ಹೇಗೆ ಮಾಡಿಕೊಂಡರು ಎಂದು ಸುದೀರ್ಘವಾಗಿ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಆತ್ಮಹತ್ಯೆಗೆ ಕಾರಣವಾಗಿದ್ದ ಯಾವುದೇ ಸಂಗತಿ ಕೂಡಾ ಪತ್ತೆಯಾಗಿರಲಿಲ್ಲ. ಹೀಗಾಗಿ ತನಿಖೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನಡೆಸಿದಾಗ, ಸ್ವತ ಪೊಲೀಸರೇ ಬೆಚ್ಚಿಬಿದ್ದಾರೆ. ಯಾಕಂದ್ರೆ ಮೂವರದ್ದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎನ್ನುವುದು ಗೊತ್ತಾಗಿದೆ.

ಪೊಲೀಸರ ತನಿಖೆಯಲ್ಲಿ ಮೂವರು ಕೂಡಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಮೂವರನ್ನು ಕೂಡಾ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಹಾಗಾದ್ರೆ ಕೊಲೆ ಮಾಡಿದವರು ಯಾರು ಎಂದು ಪತ್ತೆ ಹಚ್ಚಲು ಮುಂದಾದಗ ಮತ್ತೆ ಪೊಲೀಸರು ಬೆಚ್ಚಿಬಿದ್ದಿದ್ದಾರೆ.ಯಾಕಂದ್ರೆ ಕೊಲೆ ಮಾಡಿದವರು, ವಸಂತಾ ಎರಡನೇ ಮದುವೆಯಾಗಿದ್ದ ಆರೀಫ್​ನ ಸಹೋದರ ಆಸೀಫ್​. ಹೌದು… ಹೊಸಪೇಟೆ ನಿವಾಸಿಯಾಗಿರುವ 28 ವರ್ಷದ ಆಸೀಫ್ ಮೂವರನ್ನು ಕೊಲೆ ಮಾಡಿದ್ದಾನೆ.

ತನ್ನನ್ನು ಬಿಟ್ಟು ಸಹೋದರನ್ನು ಮದ್ವೆಯಾಗಿದ್ದಕೆ ಮೂವರ ಹತ್ಯೆ

ಕೊಲೆಯಾಗಿರುವ ವಸಂತಾಳಿಗೆ ಮೊದಲು ಆಂಧ್ರ ಪ್ರದೇಶದ ನಂದ್ಯಾಲ ಮೂಲದ ವ್ಯಕ್ತಿ ಜೊತೆ ಮದುವೆಯಾಗಿತ್ತು. ದಂಪತಿಗೆ ಸಾಯಿಧರ್ಮತೇಜ್ ಅನ್ನೋ ಪುತ್ರ ಕೂಡಾ ಇದ್ದ. ಆದ್ರೆ ಕೌಟುಂಬಿಕ ಕಲಹದಿಂದ ವಸಂತಾ, ಮೊದಲ ಪತಿಯನ್ನು ಬಿಟ್ಟು ಬಂದು, ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ ಮತ್ತು ಮಗನ ಜೊತೆ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಇನ್ನು ಹೊಸಲಿಂಗಾಪುರ ಗ್ರಾಮದ ಹೊರವಲಯಲ್ಲಿರುವ ಗೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಅದೇ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್​(ಕೊಲೆ ಆರೋಪಿ) ಎನ್ನುವಾತನ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿತ್ತು. ಬಳಿಕ ಆರೀಫ್​ ಮತ್ತು ವಸಂತಾ ಆರು ತಿಂಗಳ ಹಿಂದೆ ಮದುವೆಯಾಗಿದ್ದರಂತೆ. ಮದುವೆ ನಂತರ ಆರೀಫ್​​ ಆಗಾಗ ವಸಂತಾ ಇದ್ದ ಬಾಡಿಗೆ ಮನೆಗೆ ಬಂದು ಹೋಗುತ್ತಿದ್ದ. ಇನ್ನು ಆರೀಫ್​ಗೆ ಕೂಡಾ ಮೊದಲ ಪತ್ನಿಯಿದ್ದು, ದಂಪತಿಗೆ ಮಕ್ಕಳು ಕೂಡಾ ಇದ್ದಾರೆ. ಆದ್ರೆ ಯಾವಾಗ ಆರೀಫ್​, ವಸಂತಾಳನ್ನು ಮದುವೆಯಾದನೋ ಆಗ, ಆಸೀಫ್​ ಕ್ರೋಧಗೊಂಡಿದ್ದ.

ಯಾಕಂದ್ರೆ ಆರೀಫ್​ನ ಮದುವೆಯಾಗೋ ಮೊದಲು ಆಸೀಫ್​ ಮತ್ತು ವಸಂತಾ ಪ್ರೀತಿಸುತ್ತಿದ್ದರಂತೆ. ಇಬ್ಬರು ಕೂಡಾ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದ್ರೆ ಬದಲಾದ ಸಮಯದಲ್ಲಿ ವಸಂತಾ,ಆಸೀಫ್​ ನನ್ನು ಬಿಟ್ಟು ಆತನ ಸಹೋದರ ಆರೀಫ್​ನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆರೀಫ್​ ಮತ್ತು ವಸಂತಾ ಮದುವೆಯಾದ ನಂತರ ಆಸೀಫ್​ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಇದೇ ಸಿಟ್ಟಿನಲ್ಲಿ ಆಸೀಫ್​, ಮೇ 27 ರಂದು ಸಂಜೆ ಐದರಿಂದ ಆರು ಗಂಟೆ ಸಮಯದಲ್ಲಿ ವಸಂತಾಳ ಮನೆಗೆ ಬಂದಿದ್ದ. ಮೊದಲು ರಾಜೇಶ್ವರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಸಾಯಿಧರ್ಮತೇಜ್ ನನ್ನು ಕೊಲೆ ಮಾಡಿದ್ದ. ಬಳಿಕ ಕೊನೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ವಸಂತಾಳನ್ನು ಕೂಡಾ ಕೊಲೆ ಮಾಡಿದ್ದ.

ಸದ್ಯ ಮೂವರ ಸಾವಿನ ಬಗ್ಗೆ ತನಿಖೆ ನೆಡಸಿದ ಪೊಲೀಸರು ಮೂವರದು ಕೂಡಾ ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅನ್ನೋದನ್ನು ಬಯಲಿಗೆಳದಿದ್ದಾರೆ. ಜೊತೆಗೆ ಘಟನೆ ನಡೆದ ಇಪ್ಪತ್ನಾಲ್ಕು ಗಂಟೆಯಲ್ಲಿಪ್ರಕರಣವನ್ನು ಭೇದಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದ್ರೆ ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ಬಾಳಿ ಬದುಕಬೇಕಿದ್ದ ಮೂವರು ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ