ಹೆಂಡತಿ ಜತೆ ಜಗಳವಾಡಿ ಕೋಪದಲ್ಲಿ ಮನೆಯ 8 ಮಂದಿಯನ್ನು ಕೊಚ್ಚಿ ಕೊಂದ ವ್ಯಕ್ತಿ

ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಮನೆಯ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಳಿಕ ಆತ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೆಂಡತಿ ಜತೆ ಜಗಳವಾಡಿ ಕೋಪದಲ್ಲಿ ಮನೆಯ 8 ಮಂದಿಯನ್ನು ಕೊಚ್ಚಿ ಕೊಂದ ವ್ಯಕ್ತಿ
Image Credit source: Free Press Journal
Follow us
ನಯನಾ ರಾಜೀವ್
|

Updated on:May 29, 2024 | 10:45 AM

ಮಧ್ಯಪ್ರದೇಶದಲ್ಲೊಂದು ಸಾಮೂಹಿಕ ಹತ್ಯೆ ನಡೆದಿದೆ. ವ್ಯಕ್ತಿಯೊಬ್ಬ ಹೆಂಡತಿಯ ಜತೆ ಜಗಳವಾಡಿ ಕೋಪದಲ್ಲಿ ಮನೆಯ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದಾದ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಮಹುಲ್ಜಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೋದಲ್ ಕಚಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ ಆರೋಪಿ ಮಾನಸಿಕ ಅಸ್ವಸ್ಥ ಎಂದು ವರದಿಯಾಗಿದೆ. ಆತ ಯಾವುದಾದರೂ ಮಾದಕ ವ್ಯಸನಿಯಾಗಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಎಸ್ಪಿ ಮನೀಶ್ ಖತ್ರಿ ನೇತೃತ್ವದ ಪೊಲೀಸರು ಘಟನಾ ಸ್ಥಳದಿಂದ ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಭೀಕರ ಕೃತ್ಯದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ವ್ಯಕ್ತಿ ಇತ್ತೀಚೆಗೆ ಮದುವೆಯಾಗಿದ್ದ ಎನ್ನಲಾಗಿದೆ. ಕುಟುಂಬದ ಒಂದು ಮಗು ದಾಳಿಯಿಂದ ಪಾರಾಗಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ.

ಮತ್ತಷ್ಟು ಓದಿ: ಮುಸ್ಲಿಂ ಯುವಕರ ಗುಂಪಿನಿಂದ ಹಿಂದೂಗಳ ಮೇಲೆ ಹಲ್ಲೆ: ರೊಚ್ಚಿಗೆದ್ದ ಗ್ರಾಮಸ್ಥರು, ಬೆಳ್ಳೂರು ಪ್ರಕ್ಷುಬ್ಧ

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆತ ತನ್ನ ಪೋಷಕರು, ಹೆಂಡತಿ, ಮಗು ಮತ್ತು ಸಹೋದರ ಸೇರಿದಂತೆ ತನ್ನ ಕುಟುಂಬದ ಎಂಟು ಜನರನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ಮಂಗಳವಾರ ತಡರಾತ್ರಿ ಹತ್ಯೆ ನಡೆದಿದೆ ಮಹುಲ್ಜಿರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಡೀ ಗ್ರಾಮವನ್ನು ಸೀಲ್ ಮಾಡಿದ್ದಾರೆ. ಛಿಂದವಾರದ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇನ್ನೂ ಕಾಯಲಾಗುತ್ತಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರತರಾಗಿದ್ದಾರೆ.

ಮೃತರ ಶವಗಳು ಮನೆಯೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:43 am, Wed, 29 May 24