ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮೈದುನನ ಬರ್ಬರ ಹತ್ಯೆ

ಆತ ತಾನಾಯಿತು ತನ್ನ ಕೆಲಸವಾಯಿತು ಎಂದು ಜೀವನ ಸಾಗಿಸುತ್ತಿದ್ದ.ಆದ್ರೆ ತನ್ನ ಅತ್ತಿಗೆ ಜೊತೆ ಗ್ರಾಮದ ವ್ಯಕ್ತಿಯೊಬ್ಬ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಆತನನ್ನ ಕೆರಳಿಸುವಂತೆ ಮಾಡಿತ್ತು. ಅತ್ತಿಗೆಯಿಂದ ದೂರ ಇರು ಎಂದು ಆತನಿಗೆ ಸಾಕಷ್ಟು ಬಾರಿ ವಾರ್ನ್ ಮಾಡಿದ್ದನು. ಆದ್ರೂ ಆತ ಮಾತ್ರ ತನ್ನ ಛಾಳಿ ಮುಂದುವರೆಸಿದ್ದ, ಇದೇ ವಿಚಾರಕ್ಕೆ ಮೊನ್ನೆ ಇಬ್ಬರ ಮಧ್ಯೆ ಜಗಳ ನಡೆದು ವಿಕೋಪಕ್ಕೆ ಹೋಗಿದ್ದು, ಅತ್ತಿಗೆಯ ಮಾನ ಕಾಪಾಡಲು ಹೋಗಿ ತಾನೇ ಹೆಣವಾಗಿ ಇಡೀ ಕುಟುಂಬವನ್ನ ಅನಾಥವನ್ನಾಗಿ ಮಾಡಿದ್ದಾನೆ.

ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮೈದುನನ ಬರ್ಬರ ಹತ್ಯೆ
ಹೀರಾಲಾಲ ಲದಾಫ್(ಕೊಲೆಯಾದ ವ್ಯಕ್ತಿ) , ರವಿ( ಕೊಲೆ ಆರೋಪಿ)
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ರಮೇಶ್ ಬಿ. ಜವಳಗೇರಾ

Updated on:May 27, 2024 | 10:06 PM

ಕಲಬುರಗಿ, (ಮೇ 27): ತನ್ನ ಅಣ್ಣನ ಹೆಂಡತಿ (ಅತ್ತಿಗೆ) ಜೊತೆ ಅನೈತಿಕ ಸಂಬಂಧವನ್ನು (Illicit Affair) ಪ್ರಶ್ನಿಸಿದ್ದಕ್ಕೆ ಮೈದುನ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಕಲಬುರಗಿ (Kalaburagi) ಜಿಲ್ಲೆ ಆಳಂದ ತಾಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಹೀರಾಲಾಲ ಲದಾಫ್ ಕೊಲೆಯಾದ ವ್ಯಕ್ತಿ. ಹೀರಾಲಾಲ ಲದಾಫ್​ನ ಅತ್ತಿಗೆ ಅದೇ ಗ್ರಾಮದ ರವಿ ಎನ್ನುವಾತನ ಜೊತೆ ಅನೈತಿಕೆ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದು ಹೀರಾಲಾಲ ಲದಾಫ್ ರವಿಗೆ ಎಚ್ಚರಿಕೆ ನೀಡಿ ಇಲ್ಲಿಗೆ ಬಿಟ್ಟುಬಿಡು ಎಂದು ಎಚ್ಚರಿಕೆ ನೀಡಿದ್ದಾನೆ. ಆದ್ರೆ, ಆ ಜಗಳ ವಿಕೋಪಕ್ಕೆ ಹೋಗಿ ಕೊನೆಗೆ ಹೀರಾಲಾಲ ಲದಾಫ್ ದುರಂತ ಅಂತ್ಯಕಂಡಿದ್ದಾನೆ

ಹೀರಾಲಾಲ ಲದಾಫ್ ಸಣ್ಣಪುಟ್ಟ ಕಾಂಟ್ರಾಕ್ಟರ್ ಕೆಲಸ ಮಾಡಿಕೊಂಡು ಇದ್ದ. ಆದ್ರೆ ಇದೇ ಹೀರಾಲಾಲ್ ಲದಾಫ್‌ನ ಅತ್ತಿಗೆ ಕಳೆದ ಕೆಲ ದಿನಗಳಿಂದ ಮುನ್ನೊಳ್ಳಿ ಗ್ರಾಮದ ರವಿ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳಂತೆ.. ಈ ವಿಚಾರ ಹೀರಾಲಾಲ್ ಮತ್ತು ಆತನ ಸಹೋದರ ಬಾಬು ಲದಾಫ್‌ ನಿಗೂ ಗೊತ್ತಾಗಿತ್ತು ತಕ್ಷಣ ಬಾಬು ಲದಾಫ್ ತನ್ನ ಪತ್ನಿಗೆ ಬುದ್ದಿವಾದ ಹೇಳಿದ್ದಾರೆ. ಆದರೂ ಗಂಡನ ಬುದ್ದಿವಾದಕ್ಕೂ ಜಗ್ಗದ ಆಕೆ ರವಿ ಜೊತೆಗೆ ಅನೈತಿಕ ಸಂಬಂಧ ಮುಂದುವರಿಸಿದ್ದಳು. ಇದರಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಬಾಬು ಲಧಾಫ್ ಒಂದುವರೆ ವರ್ಷದ ಹಿಂದೆ ಊರು ಬಿಟ್ಟಿದ್ದ‌.

ಇದನ್ನೂ ಓದಿ: Crime News: ಹೇಟ್ ಸ್ಟೋರಿ; ಐಆರ್​ಎಸ್ ಅಧಿಕಾರಿ ಮನೆಯೊಳಗೆ ಯುವತಿಯ ಶವ ಪತ್ತೆ

ಇತ್ತ ಅತ್ತಿಗೆ ಅಕ್ರಮ ಸಂಬಂಧ ಮುಂದುವರಿಸಿಕೊಂಡಿದ್ದನ್ನ ಸಹಿಸಿಕೊಳ್ಳಲಾಗದೇ, ಅಣ್ಣನ ಸಂಸಾರ ಸರಿದಾರಿಗೆ ತರಬೇಕೆಂದು ತರಬೇಕೆಂದು ರವಿಗೆ ಮತ್ತೆ ಬುದ್ದಿವಾದ ಹೇಳಲು ಮುಂದಾಗಿದ್ದಾನೆ. ಈ ವೇಳೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿರುವಾಗ ಸ್ಥಳಕ್ಕೆ ರವಿ ಬಂದಿದ್ದಾನೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಹೀರಾಲಾಲ್ ಲದಾಫ್ ಜೊತೆ ರವಿ ಜಗಳ ತೆಗೆದಿದ್ದಾನೆ‌. ಜಗಳ ವಿಕೋಪಕ್ಕೆ ಹೋಗಿದ್ದು, ರವಿ, ಹೀರಾಲಾಲ್ ಲದಾಫ್‌ಗೆ ಕಲ್ಲಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.. ಇದರಿಂದ ತೀವ್ರವಾಗಿ ಗಂಭೀರವಾಗಿ ಗಾಯಗೊಂಡಿದ್ದ ಹೀರಾಲಾಲನ್ನ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹೀರಾಲಾಲ ಲದಾಫ್​ ಕೊನೆಯುಸಿರೆಳೆದಿದ್ದಾನೆ.

ಇನ್ನೂ ತನ್ನ ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತಿದ್ದ ಬಾಬು ಲದಾಫ್, ಪತ್ನಿಗೆ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ರು ಡೋಟ್‌ಕೇರ್ ಎಂದಿದ್ದಾಳೆ. ನಾಲ್ಕು ಮಕ್ಕಳ ತಾಯಿಯಾದರೂ ಸಹ ನನಗೆ ರವಿನೇ ಬೇಕು ಎಂದು ಹಠಹಿಡಿದ್ದಳು. ಹೀಗಾಗಿ ಪತ್ನಿ ನಡವಳಿಕೆಯಿಂದ ಬೇಸತ್ತು ಬಾಬು ಲದಾಫ್ ಖಿನ್ನತೆಗೊಳಗಾಗಿ ಮನೆ ಬಿಟ್ಟು ಹೋಗಿದ್ದಾನೆ. ಇನ್ನೂ ಘಟನೆ ನಡೆಯುತ್ತಿದ್ದಂತೆ ಹೀರಾಲಾಲ ಲದಾಫ್‌ನ ಅತ್ತಿಗೆ ಮತ್ತು ರವಿ ಪರಾರಿಯಾಗಿದ್ದು, ನರೋಣ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ಎಸ್ಪಿ ಅಕ್ಷಯ್ ಹಾಕೇ, ಈ ಸಂಬಂಧ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.

ಅದೇನೆ ಇರಲಿ ತನ್ನ ನಾಲ್ಕು ಮಕ್ಕಳು ಗಂಡನ ಜೊತೆಗೆ ಸುಖವಾಗಿ ಸಂಸಾರ ನಡೆಸಿಕೊಂಡುಹೋಗುವುದನ್ನು ಬಿಟ್ಟು ಪರ ಪುರುಷನ ಅನೈತಿಕ ಸಂಬಂಧವಿಟ್ಟುಕೊಂಡು ಮೈದುನನ ಜೀವ ತೆಗೆದುಕೊಂಡಿದ್ದಾಳೆ. ಇತ್ತ ಅಣ್ಣನ ಸಂಸಾರ ಸರಿ ಮಾಡಲು ಹೋಗಿ ಹೀರಾಲಾಲ ಲದಾಫ್ ತನ್ನ ಕುಟುಂಬವನ್ನ ಅನಾಥ ಮಾಡಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:51 pm, Mon, 27 May 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ