ಪ್ರತ್ಯೇಕ ಘಟನೆ: ಲವರ್ಸ್ ಬೈಕ್​​ಗೆ ಲಾರಿ ಡಿಕ್ಕಿಯಾಗಿ ಪ್ರಿಯಕರ ಸಾವು, ಬಸ್​ ಡಿಕ್ಕಿಯಾಗಿ ರೈತರಿಬ್ಬರ ದುರ್ಮರಣ

ಹಾಸನದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ ನಂತರ, ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಸ್ತೆ ಅಪಘಾತಗಳಲ್ಲಿ 51 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇಂದು ಕೂಡ ರಾಜ್ಯದ ಹಲವೆಡೆ ಅಪಘಾತಗಳು ಸಂಭವಿಸಿವೆ.

ಪ್ರತ್ಯೇಕ ಘಟನೆ: ಲವರ್ಸ್ ಬೈಕ್​​ಗೆ ಲಾರಿ ಡಿಕ್ಕಿಯಾಗಿ ಪ್ರಿಯಕರ ಸಾವು, ಬಸ್​ ಡಿಕ್ಕಿಯಾಗಿ ರೈತರಿಬ್ಬರ ದುರ್ಮರಣ
ಪ್ರತ್ಯೇಕ ಘಟನೆ: ಲವರ್ಸ್ ಬೈಕ್​​ಗೆ ಲಾರಿ ಡಿಕ್ಕಿಯಾಗಿ ಪ್ರಿಯಕರ ಸಾವು, ಬಸ್​ ಡಿಕ್ಕಿಯಾಗಿ ರೈತರಿಬ್ಬರ ದುರ್ಮರಣ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:May 27, 2024 | 6:03 PM

ಬೆಂಗಳೂರು, ಮೇ 27: ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು (Accidents) ಹೆಚ್ಚುತ್ತಿವೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (Alok Kumar)​​ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ರಸ್ತೆ ಅಪಘಾತಗಳಲ್ಲಿ 51 ಜನರು  ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಬೆನ್ನೆಲ್ಲೇ ರಾಜ್ಯದ ಹಲವೆಡೆ ಸೋಮವಾರ ಕೂಡ ಅಪಘಾತಗಳು ಸಂಭವಿಸಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತಾಗಿ ಒಂದು ವರದಿ ಇಲ್ಲಿದೆ.

ಲವರ್ಸ್ ಬೈಕ್​​ಗೆ ಲಾರಿ ಡಿಕ್ಕಿ: ಯುವತಿಗೆ ಗಾಯ, ಯುವಕ ಸಾವು

ಟ್ರಿಪ್ ಮುಗಿಸಿ ವಾಪಸ್ ಬರುತ್ತಿದ್ದ ಲವರ್ಸ್ ಬೈಕ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಕುಳಿತಿದ್ದ ಯುವತಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ4 ಟಿ.ಬೇಗೂರು ಬಳಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: 24 ಗಂಟೆ ಅವಧಿಯಲ್ಲಿ ರಸ್ತೆ ಅಪಘಾತದಲ್ಲಿ 51 ಸಾವು: ಅಜಾಗರೂಕ ಚಾಲನೆ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್​ ಕಳವಳ

ಕೊಪ್ಪಳದ ಜೇಮ್ಸ್ (23) ಮೃತ ಯುವಕ, ಚೈತ್ರ (23)ಗೆ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ತುಮಕೂರಿನ ಮಂದಾರ ಗಿರಿಯಿಂದ ವಾಪಸ್ ಬರುವ ವೇಳೆ ಅಪಘಾತ ಸಂಭವಿಸಿದೆ. ಬೆಂಗಳೂರಿನ ಬಿಟಿಎಂ ಲೇಔಟ್​​ನಲ್ಲಿ ಬಿಇ ವಿದ್ಯಾರ್ಥಿಗಳು ವಾಸವಿದ್ದರು. ಅಪಘಾತ ಬಳಿಕ ಲಾರಿ ನಿಲ್ಲಿಸದೆ ಚಾಲಕ ಪರಾರಿ ಆಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಂಟರ್​ ಡಿಕ್ಕಿ, ಬೈಕ್​ ಸವಾರ ಸ್ಥಳದಲ್ಲೇ ಸಾವು: ಯುವತಿಯ ನಾಲಿಗೆ ಕಟ್

ಕ್ಯಾಂಟರ್​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್​​ನ ಹಿಂಬದಿ ಕುಳಿತಿದ್ದ ಯುವತಿಯ ನಾಲಿಗೆ ಕಟ್​ ಆಗಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ 26 ವರ್ಷದ ಶಿವರಾಜ್ ದುರ್ಮರಣ. ಲಾವಣ್ಯ(20) ನಾಲಿಗೆ ಕಳೆದುಕೊಂಡ ಯುವತಿ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸರ್ಕಾರಿ ಬಸ್ ಬೈಕ್ ನಡುವೆ ಭೀಕರ ಅಪಘಾತ: ರೈತರು ಸ್ಥಳದಲ್ಲೇ ಸಾವು

ಸರ್ಕಾರಿ ಬಸ್​ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಇಬ್ಬರು ರೈತರು ದುರ್ಮರಣ ಹೊಂದಿರುವಂತಹ ಘಟನೆ  ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ನಡೆದಿದೆ. ಹಳ್ಳಿಗುಡಿ ಗ್ರಾಮದ ರೈತ ಪರಸಪ್ಪ ಜೋಗಿನ ಹಾಗೂ ಪೇಟಾಲೂರು ಗ್ರಾಮದ ಮಾರುತಿ ಯಾಟಿ ಮೃತರು.

ಇದನ್ನೂ ಓದಿ: ಪತಿಯ ಹಣಕ್ಕಿಂತ ಸ್ನೇಹ ಮುಖ್ಯ: ಸಾಲ ತೀರಿಸಲಾಗದೆ ಪರದಾಡುತ್ತಿದ್ದ ಸ್ನೇಹಿತೆಗಾಗಿ ದರೋಡೆ ನಾಟಕವಾಡಿದ ಗೆಳತಿ

ಬಿತ್ತನೆ ಬೀಜ ಖರೀದಿಸಿ ಊರಿಗೆ ಬರುವಾಗ ಘಟನೆ ಸಂಭವಿಸಿದೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:02 pm, Mon, 27 May 24