AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯ ಹಣಕ್ಕಿಂತ ಸ್ನೇಹ ಮುಖ್ಯ: ಸಾಲ ತೀರಿಸಲಾಗದೆ ಪರದಾಡುತ್ತಿದ್ದ ಸ್ನೇಹಿತೆಗಾಗಿ ದರೋಡೆ ನಾಟಕವಾಡಿದ ಗೆಳತಿ

ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದ ಹೂವಿನ ತೋಟದ ಆಂಜನೇಯ ದೇವಸ್ಥಾನದ ಬಳಿ ನಡೆದಿದ್ದ ಸಿನಿಮೀಯ ಶೈಲಿಯ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ರಾಯಚೂರು ಗ್ರಾಮೀಣ ಠಾಣೆ ಪೊಲೀಸರ ತನಿಖೆಯಲ್ಲಿ ದೂರುದಾರ ಮಹಿಳೆಯರ ಖರಾಮತ್ತು ಬಯಲಾಗಿದೆ.

ಪತಿಯ ಹಣಕ್ಕಿಂತ ಸ್ನೇಹ ಮುಖ್ಯ: ಸಾಲ ತೀರಿಸಲಾಗದೆ ಪರದಾಡುತ್ತಿದ್ದ ಸ್ನೇಹಿತೆಗಾಗಿ ದರೋಡೆ ನಾಟಕವಾಡಿದ ಗೆಳತಿ
ಪತಿಯ ಹಣಕ್ಕಿಂತ ಸ್ನೇಹ ಮುಖ್ಯ: ಸ್ನೇಹಿತೆಗಾಗಿ ದರೋಡೆ ನಾಟಕವಾಡಿದ ಗೆಳತಿ
ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ|

Updated on: May 27, 2024 | 3:31 PM

Share

ರಾಯಚೂರು, ಮೇ 27: ರಾಯಚೂರು (Raichur) ತಾಲೂಕಿನ ಮನ್ಸಲಾಪುರ ಗ್ರಾಮದ ಹೂವಿನ ತೋಟದ ಆಂಜನೇಯ ದೇವಸ್ಥಾನದ ಬಳಿ ನಡೆದಿದ್ದ ಸಿನಿಮೀಯ ಶೈಲಿಯ ಚಿನ್ನಾಭರಣ ದರೋಡೆ (Robbery) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ರಾಯಚೂರು ಗ್ರಾಮೀಣ ಠಾಣೆ ಪೊಲೀಸರ ತನಿಖೆಯಲ್ಲಿ ದೂರುದಾರ ಮಹಿಳೆಯರ ಖರಾಮತ್ತು ಬಯಲಾಗಿದೆ. ರಾಜೇಶ್ವರಿ ಮತ್ತು ರೇಣುಕಾ ದರೋಡೆ ನಾಟಕವಾಡಿದ ಆರೋಪಿಗಳು.

ರಾಜೇಶ್ವರಿ ಮತ್ತು ರೇಣುಕಾ ಇಬ್ಬರು ಸ್ನೇಹಿತರು. ರಾಯಚೂರು ನಗರದಲ್ಲಿ ವಾಸವಾಗಿದ್ದಾರೆ. ರಾಜೇಶ್ವರಿ ಮಗ ಈಗಾಗಲೇ ಕಾನ್ಸ್​ಟೇಬಲ್​ ಪರೀಕ್ಷೆ ಬರೆದಿದ್ದಾರೆ. ಆದರೆ ಅವರು ಪಿಎಸ್​ಐ ಆಗಲಿ ಅನ್ನೋದು ತಾಯಿ ರಾಜೇಶ್ವರಿ ಕನಸು. ಈ ಕನಸು ನನಸಾಗಲೆಂದು ರಾಜೇಶ್ವರಿ ಮತ್ತು ಇವರ ಸ್ನೇಹಿತೆ ರೇಣುಕಾ ಹಾಗೂ ಇತರೆ ಮಹಿಳೆಯರು ಜೊತೆಯಾಗಿ ಆಟೋದಲ್ಲಿ ಮೇ 24 ರಂದು ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದ ಹೊರಭಾಗದಲ್ಲಿರುವ ಹೋವಿನ ತೋಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುರುತ್ತಾರೆ.

ರೇಣುಕಾ ಮತ್ತು ರಾಜೇಶ್ವರಿ ದೇವಸ್ಥಾನವನ್ನು ಪ್ರವೇಶಿಸುವ ಮುನ್ನ ಬಹಿರ್ದೆಸೆಗೆ ಹೋಗಿದ್ದರು. ಹೀಗೆ ಹೋದವರು ಕೆಲ ಸಮಯದಲ್ಲಿ ಏಕಾಏಕಿ ಕಿರುಚಾಡುತ್ತಾ ಓಡೋಡಿ ಬಂದರು. ಇಲ್ಲಿದ್ದಂತಹ ಜನರ ಬಳಿ ಅಳುತ್ತ, ಕಿರುಚಾಡುತ್ತಾ “ಬೈಕ್​ನಲ್ಲಿ ಬಂದಿದ್ದ ಇಬ್ಬರು ಬಟನ್ ಚಾಕು ತೆಗೆದು ನಮ್ಮ ಕತ್ತಿಗೆಗೆ ಇಟ್ಟರು. ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದರು. ನನ್ನ (ರಾಜೇಶ್ವರಿ) ಮೈಲೇಲಿದ್ದ ಬೆಂಡೋಲೆ, ಚಿನ್ನದ ಸರ, ಬ್ರಾಸ್ಲೆಟ್​ ಸೇರಿ ಸುಮಾರು 100 ಗ್ರಾಂ ಚಿನ್ನಾಭರಣ ಕಿತ್ತುಕೊಂಡು ಹೋದರು. ನನ್ನ (ರೇಣುಕಾ) ಅರ್ಧ ತೊಲೆ ಬಂಗಾರ ಕದ್ದು ಪರಾರಿಯಾದರು” ಎಂದು ರಾಜೇಶ್ವರಿ ಮತ್ತು ರೇಣುಕಾ ಹೇಳಿದ್ದಾರೆ.

ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ. ಬಳಿಕ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿಕೊಂಡರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರ ಬಂದಿದೆ. ರಾಜೇಶ್ವರಿ ಮತ್ತು ರೇಣುಕಾ ಆಡಿದ ಬಯಲು ನಾಟಕ ತಿಳಿದಿದೆ.

ಇದನ್ನೂ ಓದಿ: ಹುಡ್ಗೀರ ಎಡಿಟೆಡ್ ಬೆತ್ತಲೆ ಫೋಟೋ ತೋರಿಸಿ ಮಂಚಕ್ಕೆ ಕರೆಯುತ್ತಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದ

ಬಯಲಾದ ಇಬ್ಬರ ನಾಟಕ

ರೇಣುಕಾ ರಾಜೇಶ್ವರಿ ಪತಿಯಿಂದ 10 ಲಕ್ಷ ಸಾಲ ಪಡೆದಿದ್ದಳು. ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ರೇಣುಕಾ 20 ಸಾವಿರ ನೀಡಬೇಕಿತ್ತು. ರೇಣುಕಾ ಕೆಲ ತಿಂಗಳು ಬಡ್ಡಿ ನೀಡಿದ್ದಳು. ಆದರೆ ಈಚಿಗೆ ಬಡ್ಡಿ ನೀಡಲು ಸಾಧ್ಯವಾಗಲಿಲ್ಲ. ಬಡ್ಡಿ ಕೊಡಲಾಗದೆ ಮನೆ ಮಾರಿ ಸಾಲ ತೀರಿಸುವುದಾಗಿ ರೇಣುಕಾ ರಾಜೇಶ್ವರಿ ಮುಂದೆ ಹೇಳಿದ್ದಳು. ಆಗ ರಾಜೇಶ್ವರಿ ಮತ್ತು ಉಳಿದ ಸ್ನೇಹಿತರು ಮನೆ ಮಾರಬೇಡ ಎಂದು ಸಲಹೆ ನೀಡಿ, ದರೋಡೆ ಕಥೆ ಕಟ್ಟಿದ್ದರು.

ಬಹಿರ್ದೆಸೆಗೆ ಹೋದಾಗ ನಡೆದ ಅಸಲಿ ಘಟನೆ

ರಾಜೇಶ್ವರಿ ಮತ್ತು ರೇಣುಕಾ ಬಹಿರ್ದೆಸೆಗೆ ಹೋಗುವ ನಾಟವಾಡಿ, ಅಲ್ಲಿಗೆ ರಾಜೇಶ್ವರಿ ತನ್ನ ಪುತ್ರನನ್ನು ಕರೆಸಿಕೊಳ್ಳುತ್ತಾಳೆ. ಅಲ್ಲಿ ಇಬ್ಬರು ತಮ್ಮ ಮೈಲಿನ ಒಡವೆಗಳನ್ನು ಬಿಚ್ಚಿ ಆತನ ಕೈಗೆ ಕೊಡುತ್ತಾರೆ. ಬಳಿಕ ನಮ್ಮ ಒಡವೆಗಳನ್ನು ದರೋಡೆ ಮಾಡಿದರು ಅಂತ ನಾಟಕವಾಡಲು ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ