AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡ್ಗೀರ ಎಡಿಟೆಡ್ ಬೆತ್ತಲೆ ಫೋಟೋ ತೋರಿಸಿ ಮಂಚಕ್ಕೆ ಕರೆಯುತ್ತಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದ

ದಾವಣೆಗೆರೆಯ ಚನ್ನಗಿರಿ ಆದಿಲ್ ಸಾವು ಪ್ರಕರಣ ಖಂಡಿಸಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಸಂಬಂಧ 25 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಹುಡ್ಗೀರ ಎಡಿಟೆಡ್ ಬೆತ್ತಲೆ ಫೋಟೋ ತೋರಿಸಿ ಮಂಚಕ್ಕೆ ಕರೆಯುತ್ತಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದ
ಅರುಣ ಲಕ್ಷ್ಮಣ ಗೌಡ
TV9 Web
| Edited By: |

Updated on:May 26, 2024 | 5:46 PM

Share

ಕಾರವಾರ, (ಮೇ 26): ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಂದರ ಯುವತಿಯರ ಸ್ನೇಹ ಗಿಟ್ಟಿಸಿಕೊಂಡು ಅವರೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಕಾಮುಕರ ಗುಂಪಿನ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಮೂವರು ಪೊಲೀಸರಿಗೆ ಗಾಯಗಳಾಗಿವೆ.

ಬಂಧಿಸಲು ಬಂದಿದ್ದ ಪೊಲೀಸರಿಗೆ ಕಲ್ಲೇಟು

ಅತ್ಯಾಚಾರ, ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಎನ್ನುವಾತನನ್ನು ಬಂಧಿಸಲು ವಾರೆಂಟ್​ನೊಂದಿಗೆ ಹೋಗಿದ್ದ ಮೂವರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣ ಗೌಡ (50) ಹಾಗೂ ಸಂಬಂಧಿ ಬಾಲಚಂದ್ರ ಗೌಡ (42) ಎಂಬುವರು ಪೊಲೀಸರ ಮೇಲೆಯೇ ಕಲ್ಲು ತೂಡಿದ್ದಾರೆ. ಕಲ್ಲು ಹಾಗೂ ಹೆಂಚು ತುಂಡುಗಳ ದಾಳಿಯಿಂದ ಬನವಾಸಿ ಪೊಲೀಸ್ ಠಾಣೆಯ ಜಗದೀಶ ಕೆ., ಮಂಜಪ್ಪ ಪಿ. ಮಂಜುನಾಥ ಡಿ. ನಡುವಿನಮನೆ ಎಂಬವರಿಗೆ ಗಾಯಗಳಾಗಿವೆ.

ಇನ್ನು ಕಲ್ಲು ತೂರಿದ ಆರೋಪಿಯ ಸಂಬಂಧಿ ಬಾಲಚಂದ್ರ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಆರೋಪಿ ತಾಯಿ ನಾಗವೇಣಿ ಲಕ್ಷ್ಮಣಗೌಡ ಪರಾರಿಯಾಗಿದ್ದಾಳೆ. ಇನ್ನು ಪೊಲೀಸರು ಬಂಧಿಸಲು ಬಂದಾಗ ಕಲ್ಲು ತೂರಿದ್ದ ಆರೋಪಿ ನಂತರ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಆರೋಪಿ ಅರ್ಜುನ್ ಅಲಿಯಾನ್ ಅರುಣ್ ಗೌಡನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಶಿರಸಿ ಗ್ರಾಮೀಣ ಪೊಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಡಿಟೆಡ್ ಬೆತ್ತಲೆ ಫೋಟೋ ತೋರಿಸಿ ಬ್ಲ್ಯಾಕ್​ ಮೇಲ್

ಆರೋಪಿ ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವ ಕರಾವಳಿ ಮೂಲದ ಸುಂದರ ಯುವತಿಯರ ಜೊತೆಗೆ ಚಾಟ್ ಮಾಡುತ್ತಾ ಅವರನ್ನು ಪಟಾಯಿಸುತ್ತಿದ್ದ. ಕೆಲವು ದಿನ ಯುವತಿಯರೊಂದಿಗೆ ಚಾಟ್ ಮಾಡುತ್ತಾ ಅವರ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡುತ್ತಾ ಆತ್ಮೀಯತೆ ಬೆಳೆಸಿಕೊಂಡು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಯುವತಿಯರೊಂದಿಗೆ ಖಾಸಗಿ ಫೋಟೋ ತೆಗೆದುಕೊಂಡರೆ, ಇನ್ನು ಕೆಲವರ ಸಾಮಾನ್ಯ ಫೋಟೋ ತೆಗೆದುಕೊಳ್ಳುತ್ತಿದ್ದ.

ನಂತರ ಅಶ್ಲೀಲವಾಗಿ ಎಡಿಟ್ ಮಾಡಿ ಅವುಗಳನ್ನು ಯುವತಿಯರಿಗೆ ತೋರಿಸಿ ಬ್ಲ್ಯಾಕ್​ ಮೇಲ್ ಮಾಡಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದೀಗ ಕೊನೆಗೂ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:45 pm, Sun, 26 May 24

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​