ಪೊಲೀಸ್ ಠಾಣೆ ಮೇಲೆ ದಾಂಧಲೆ ನಡೆದು ಮೂರು ದಿನಗಳ ಬಳಿಕ ಸಹಜ ಸ್ಥಿತಿಗೆ ಚನ್ನಗಿರಿ ಪಟ್ಟಣ
ಏತನ್ಮಧ್ಯೆ, ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದು ಡಿವೈಎಸ್ಪಿ (ಸಿಐಡಿ ವಿಭಾಗ) ಕನಕಲಕ್ಷ್ಮಿ ಅವರ ನೇತೃತ್ವದ ತಂಡವೊಂದು ಚನ್ನಗಿರಿಗೆ ಆಗಮಿಸಿದ್ದು ಪೊಲೀಸ್ ಠಾಣೆ ಮೇಲೆ ನಡೆಸಿದ ದಾಂಧಲೆಗೆ ಸಂಬಂಧಿಸಿದಂತೆ ಸುಮಾರು 35 ಜನರನ್ನು ವಶಕ್ಕೆ ಪಡೆದಿದೆ ಎಂದು ವರದಿಗಾರ ಹೇಳುತ್ತಾರೆ.
ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ (Channagiri town) ಮೂರುದಿನಗಳ ಹಿಂದೆ ಕಿಡಿಗೇಡಿಗಳು (miscreants) ಪೊಲೀಸ್ ಠಾಣೆ ಮತ್ತು ವಾಹನಗಳ ಮೇಲೆ ನಡೆಸಿದ ದಾಂಧಲೆಯನ್ನು (vandalism) ನಾವು ವಿಸ್ತೃತವಾಗಿ ವರದಿ ಮಾಡಿದ್ದೇವೆ. ಆ ಘಟನೆಯಿಂದಾಗಿ ಚನ್ನಗಿರಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಏರ್ಪಟ್ಟಿತ್ತ್ತು. ಇವತ್ತು ಅಂದರೆ ಸೋಮವಾರ ಅಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಟಿವಿ9 ದಾವಣಗೆರೆ ವರದಿಗಾರ ವಿವರಿಸಿದ್ದಾರೆ. ಆದಿಲ್ ಹೆಸರಿನ ವ್ಯಕ್ತಿ ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಕುಸಿದುಬಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದ. ಅವನ ಸಾವಿನ ಬಗ್ಗೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದರು. ಗೃಹ ಇಲಾಖೆಯು ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಈಗಾಗಲೇ ಆದೇಶ ಹೊರಡಿಸಿದೆ. ಏತನ್ಮಧ್ಯೆ, ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದು ಡಿವೈಎಸ್ಪಿ (ಸಿಐಡಿ ವಿಭಾಗ) ಕನಕಲಕ್ಷ್ಮಿ ಅವರ ನೇತೃತ್ವದ ತಂಡವೊಂದು ಚನ್ನಗಿರಿಗೆ ಆಗಮಿಸಿದ್ದು ಪೊಲೀಸ್ ಠಾಣೆ ಮೇಲೆ ನಡೆಸಿದ ದಾಂಧಲೆಗೆ ಸಂಬಂಧಿಸಿದಂತೆ ಸುಮಾರು 35 ಜನರನ್ನು ವಶಕ್ಕೆ ಪಡೆದಿದೆ ಎಂದು ವರದಿಗಾರ ಹೇಳುತ್ತಾರೆ. ಚನ್ನಗಿರಿ ಇವತ್ತು ಸಹಜ ಸ್ಥಿತಿಗೆ ಮರಳಿದ್ದು ಕೋರ್ಟ್ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಅಂಗಡಿ ಮುಂಗಟ್ಟುಗಳು ಸಹ ಓಪನ್ ಆಗಿದ್ದು ಜನ ನಿರಾತಂಕದಿಂದ ಓಡಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಕೇಸ್ಗೆ ಟ್ವಿಸ್ಟ್: ಉಲ್ಟಾ ಹೊಡೆದ ಆದಿಲ್ ತಂದೆ