ತಡವಾಗಿ ಬಂದು ಪಂಡಿತ ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಿಎಂ ಸಿದ್ದರಾಮಯ್ಯ
ಸರಿಯಾದ ಸಮಯಕ್ಕೆ ಆಗಮಿಸಿದ್ದ ಬಸವರಾಜ ಹೊರಟ್ಟಿ ಮತ್ತು ನಾಗರಾಜ್ ಯಾದವ್ ಅರ್ಧಗಂಟೆಗೂ ಹೆಚ್ಚು ಸಮಯ ಮುಖ್ಯಮಂತ್ರಿ ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದರು. ನಮ್ಮ ರಾಜ್ಯ ಮತ್ತು ದೇಶದಲ್ಲಿ ಗಣ್ಯರು ತಡವಾಗಿ ಬರೋದು ಹೊಸದೇನೂ ಅಲ್ಲ, ಆದರೆ ವಿಧಾನ ಪರಿಷತ್ ಚೇರ್ಮನ್ರನ್ನು ಕಾಯುವಂತೆ ಮಾಡಿದ್ದು ಸರಿಯಲ್ಲವೇನೋ.
ಬೆಂಗಳೂರು: ಇಂದು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ (Pandit Jawaharlal Nehru) ಅವರ 60ನೇ ಪುಣ್ಯತಿಥಿ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಧಾನಸೌಧ ಆವರಣದಲ್ಲಿ ಪಂಡಿತ್ ನೆಹರೂ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಸಿದ್ದರಾಮಯ್ಯ ಅವರೊಂದಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಮತ್ತು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಸಹ ನೆಹರೂ ಭಾವಚಿತ್ರಕ್ಕೆ ಮಾಲೆ ಹಾಕಿ ಪುಷ್ಪಾರ್ಚನೆ ಮಾಡಿದರು. ಹಾಗೆ ನೋಡಿದರೆ, ಸಿದ್ದರಾಮಯ್ಯ ವಿಧಾನ ಸೌಧಕ್ಕೆ 10.30 ವರೆಗೆ ಬಂದು ಪುಚ್ಪಾರ್ಚನೆ ಮಾಡುವುದು ನಿಗದಿಯಾಗಿತ್ತು. ಆದರೆ ಅವರು ತಡವಾಗಿ ಅಲ್ಲಿಗೆ ಆಗಮಿಸಿದರು. ಸರಿಯಾದ ಸಮಯಕ್ಕೆ ಆಗಮಿಸಿದ್ದ ಬಸವರಾಜ ಹೊರಟ್ಟಿ ಮತ್ತು ನಾಗರಾಜ್ ಯಾದವ್ ಅರ್ಧಗಂಟೆಗೂ ಹೆಚ್ಚು ಸಮಯ ಮುಖ್ಯಮಂತ್ರಿ ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದರು. ನಮ್ಮ ರಾಜ್ಯ ಮತ್ತು ದೇಶದಲ್ಲಿ ಗಣ್ಯರು ತಡವಾಗಿ ಬರೋದು ಹೊಸದೇನೂ ಅಲ್ಲ, ಆದರೆ ವಿಧಾನ ಪರಿಷತ್ ಚೇರ್ಮನ್ರನ್ನು ಕಾಯುವಂತೆ ಮಾಡಿದ್ದು ಸರಿಯಲ್ಲವೇನೋ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ