Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕ್ಷೌರಿಕ ಫ್ರೀ ಇಲ್ಲ, ವಿಜಯೇಂದ್ರನೇ ಬಂದು ಹೇರ್ ಕಟ್ ಮಾಡಲಿ: ಮಧು ಬಂಗಾರಪ್ಪ, ಶಿಕ್ಷಣ ಸಚಿವ

ನನ್ನ ಕ್ಷೌರಿಕ ಫ್ರೀ ಇಲ್ಲ, ವಿಜಯೇಂದ್ರನೇ ಬಂದು ಹೇರ್ ಕಟ್ ಮಾಡಲಿ: ಮಧು ಬಂಗಾರಪ್ಪ, ಶಿಕ್ಷಣ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2024 | 1:47 PM

ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳನ್ನು ಹೊಲಸೆಬ್ಬಿಸಿದ್ದ ಕಾರಣ ಅವುಗಳ ಪಾವಿತ್ರ್ಯತೆ ಹಾಳಾಗಿತ್ತು, ಎಲ್ಲವನ್ನು ಸ್ವಚ್ಛಗೊಳಿಸುವ ಕೆಲಸ ತಮ್ಮ ಇಲಾಖೆ ಮಾಡುತ್ತಿದೆ ಎಂದು ಸಚಿವ ಹೇಳಿದರು. ಶಾಲಾಮಕ್ಕಳ ಭವಿಷ್ಯ ಮತ್ತು ಅವರ ಹಿತಾಸಕ್ತಿಯ ದೃಷ್ಟಿಯಿಂದ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು

ಚಿತ್ರದುರ್ಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಾಗಿ ಪ್ರಚಾರ ಮಾಡಲು ಚಿತ್ರದುರ್ಗಕ್ಕೆ ಆಗಮಿಸಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಮ್ಮ ಕೇಶ ವಿನ್ಯಾಸದ ಮೇಲೆ ಕಾಮೆಂಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ (BY Vijayendra) ತಿರುಗೇಟು ನೀಡಿದರು. ಶಿಕ್ಷಣ ಸಚಿವ (education minister) ಇನ್ನೂ ಸಿನಿಮಾ ಭ್ರಮೆಯಲ್ಲಿದ್ದಾರೆ, ಮೊದಲು ಹೇರ್ ಕಟಿಂಗ್ ಮಾಡಿಸಿಕೊಳ್ಳಲಿ ಎಂದ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ನನ್ನ ಹೇರ್ ಕಟ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರನೇ ಬಂದು ಮಾಡಲಿ ಎಂದರು. ಮುಂದುವರಿದು ಮಾತಾಡಿದ ಅವರು ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳನ್ನು ಹೊಲಸೆಬ್ಬಿಸಿದ್ದ ಕಾರಣ ಅವುಗಳ ಪಾವಿತ್ರ್ಯತೆ ಹಾಳಾಗಿತ್ತು, ಎಲ್ಲವನ್ನು ಸ್ವಚ್ಛಗೊಳಿಸುವ ಕೆಲಸ ತಮ್ಮ ಇಲಾಖೆ ಮಾಡುತ್ತಿದೆ ಎಂದು ಸಚಿವ ಹೇಳಿದರು. ಶಾಲಾಮಕ್ಕಳ ಭವಿಷ್ಯ ಮತ್ತು ಅವರ ಹಿತಾಸಕ್ತಿಯ ದೃಷ್ಟಿಯಿಂದ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಮಧು ಬಂಗಾರಪ್ಪ, ಬಿಜೆಪಿ ಸರ್ಕಾರಕ್ಕೆ ಶಿಕ್ಷಕರ ನೇಮಕಾತಿ ಮಾಡುವುದು ಸಹ ಸಾಧ್ಯವಾಗಿರಲಿಲ್ಲ, ಅದನ್ನು ತಮ್ಮ ಸರ್ಕಾರ ಮಾಡಬೇಕಾಯಿತು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿTextbooks Revision; ಬಿಜೆಪಿ ಸರ್ಕಾರ ತೆಗೆದುಹಾಕಿದ್ದ ಪಾಠಗಳನ್ನು ವಾಪಸ್ಸು ಸೇರಿಸಲಾಗಿದೆ: ಮಧು ಬಂಗಾರಪ್ಪ, ಶಿಕ್ಷಣ ಸಚಿವ