ಬೆಂಗಳೂರು: ಬಿಜೆಪಿ ಕಚೇರಿಗೆ ಇಂದು ಅನಿರೀಕ್ಷಿತ ಭೇಟಿ ನೀಡಿದಾಗಲೂ ಡಾ ಸಿಎನ್ ಮಂಜುನಾಥ್ ಟೈ ಧರಿಸಿದ್ದರು!
ನಿಮಗೆ ನೆನಪಿರಬಹುದು, ಡಾ ಮಂಜುನಾಥ್ ಇನ್ನೂ ಸೇವೆಯಲ್ಲಿದ್ದ ದಿನಗಳಲ್ಲಿ ಆಗಷ್ಟೆ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದ ಸಿದ್ದರಾಮಯ್ಯರನ್ನು ಭೇಟಿಯಾಗಲು ಸೂಟ್ ಧರಿಸಿ ಹೋಗಿದ್ದರು. ಹಾಗಾಗೇ ನಾವು ಅವರನ್ನು ಶಿಸ್ತಿನ ವ್ಯಕ್ತಿ ಅಂತ ಹೇಳುತ್ತಿರೋದು.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ (Dr CN Manjunath) ಇಂದು ನಗರದ ಮ್ಲಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ (BJP office) ಭೇಟಿ ನೀಡಿದರು. ಅವರ ಭೇಟಿ ಅನಿರೀಕ್ಷಿತವಾಗಿತ್ತು ಅನಿಸುತ್ತೆ. ಅವರು ಕಚೇರಿಯಲ್ಲಿ ಕಾಲಿಟ್ಟಾಗ ಕೆಲ ಪದಾಧಿಕಾರಿಗಳು ಮಾತ್ರ ಅಲ್ಲಿದ್ದರು. ತಾವು ಭೇಟಿ ನೀಡುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ಮಲ್ಲೇಶ್ವರಂನಲ್ಲೇ ವಾಸವಾಗಿರುವ ಸ್ಥಳೀಯ ಬಿಜೆಪಿ ಶಾಸಕ ಡಾ ಸಿಎನ್ ಅಶ್ವತ್ ನಾರಾಯಣ (Dr CN Ashwath Narayan) ಕಚೇರಿಗೆ ಬಂದಿರುತ್ತಿದ್ದರು. ಡಾ ಮಂಜುನಾಥ್ ನಿಸ್ಸಂದೇಹವಾಗಿ ಭಾರೀ ಶಿಸ್ತಿ ಮನುಷ್ಯ ಮಾರಾಯ್ರೇ. ಬಿಜೆಪಿ ಕಚೇರಿಗೆ ಅವರು ಅನೌಪಚಾರಿಕ ಭೇಟಿ ನೀಡಿದ್ದರೂ ಟೈ ಧರಿಸಿದ್ದಾರೆ. ವೃತ್ತಿಪರತೆ ಅವರಿಗೆ ನಮ್ಮ ರಾಜಕಾರಣಿಗಳಿಗಿಂತ ಬಹಳ ಚೆನ್ನಾಗಿ ಗೊತ್ತು. ಕೇವಲ ಖಾದಿ ತೊಟ್ಟವರು ಮಾತ್ರ ರಾಜಕಾರಣಿ ಅನಿಸಿಕೊಳ್ಳಲಾರರು. ನಿಮಗೆ ನೆನಪಿರಬಹುದು, ಡಾ ಮಂಜುನಾಥ್ ಇನ್ನೂ ಸೇವೆಯಲ್ಲಿದ್ದ ದಿನಗಳಲ್ಲಿ ಆಗಷ್ಟೆ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದ ಸಿದ್ದರಾಮಯ್ಯರನ್ನು ಭೇಟಿಯಾಗಲು ಸೂಟ್ ಧರಿಸಿ ಹೋಗಿದ್ದರು. ಹಾಗಾಗೇ ನಾವು ಅವರನ್ನು ಶಿಸ್ತಿನ ವ್ಯಕ್ತಿ ಅಂತ ಹೇಳುತ್ತಿರೋದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಾ ಸಿಎನ್ ಮಂಜುನಾಥ್ ಸ್ಪರ್ಧೆ ಡಿಕೆ ಸಹೋದರರ ಶಿಬಿರದಲ್ಲಿ ಆತಂಕ ಮೂಡಿಸಿದೆಯೇ? ಶಿವಕುಮಾರ್ ಪ್ರತಿಕ್ರಿಯೆ ಅದನ್ನು ಸೂಚಿಸುತ್ತದೆ!