ನಮ್ಮ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆ ಹೇಯಕರ ಮತ್ತು ಅತ್ಯಂತ ಖಂಡನೀಯ: ಡಾ ಸಿಎನ್ ಮಂಜುನಾಥ್

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ ಐಆರ್ ದಾಖಲಾಗಿದೆ ಮತ್ತು ತಾವು ಕೂಡ ಡಿಐಜಿ ಜೊತೆ ಮಾತಾಡಿರುವುದಾಗಿ ಡಾ ಮಂಜುನಾಥ್ ಹೇಳಿದರು. ಇಂಥ ಘಟನೆಗಳಿಂದ ಮತದಾರರು ಭಯಭೀತರಾಗೋದು ಸ್ವಾಭಾವಿಕ, ಆದರೆ ತಮ್ಮ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು, ಆತಂಕಕ್ಕೊಳಗಾಗಬಾರದು, ಎರಡೂ ಪಕ್ಷಗಳ ಹಿರಿಯ ನಾಯಕರು ಅವರ ಜೊತೆಗಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆ ಹೇಯಕರ ಮತ್ತು ಅತ್ಯಂತ ಖಂಡನೀಯ: ಡಾ ಸಿಎನ್ ಮಂಜುನಾಥ್
|

Updated on: Apr 11, 2024 | 6:29 PM

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಕ್ತಸಿಕ್ತ ರಾಜಕಾರಣಕ್ಕೆ ಅಣಿಯಾಗುತ್ತಿದೆಯೇ? ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ (Kunigal Assembly segment) ಮೂವರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದ್ದು ಹಲ್ಲೆಗೊಳಗಾದವರು ರಕ್ತದ ಕಲೆಗಳಿರುವ ಬಟ್ಟೆಗಳೊಂದಿಗೆ ತಮ್ಮ ಇಮೇಜುಗಳನ್ನು ಸೋಶಿಯಲ್ ಮೀಡಿಯದಲ್ಲಿ ಶೇರ್ ಮಾಡಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ರಾಮನಗರ ವರದಿಗಾರ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ (Dr CN Manjunath) ಅವರನ್ನು ಮಾತಾಡಿಸಿದಾಗ, ಮೊದಲು ಇದ್ಯಾವುದನ್ನು ನೋಡಿರದ ಡಾಕ್ಟರ್ ಬೇಸರ, ಅಕ್ರೋಶ ಮತ್ತು ಹೇವರಿಕೆಯನ್ನು ವ್ಯಕ್ತಪಡಿಸಿದರು. ಇದು ಸಂಸ್ಕೃತಿ ಅಲ್ಲ ಸಂಸ್ಕಾರವೂ ಅಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು, ಈಗ ನಡೆದಿರೋದು ಪ್ರಜಾಪ್ರಭುತ್ವ (democracy) ವ್ಯವಸ್ಥೆಗೆ ಅವಮಾನ, ಹಲ್ಲೆ ಮಾಡಿರುವ ಘಟನೆ ಅತ್ಯಂತ ಖಂಡನೀಯ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ ಐಆರ್ ದಾಖಲಾಗಿದೆ ಮತ್ತು ತಾವು ಕೂಡ ಡಿಐಜಿ ಜೊತೆ ಮಾತಾಡಿರುವುದಾಗಿ ಡಾ ಮಂಜುನಾಥ್ ಹೇಳಿದರು. ಇಂಥ ಘಟನೆಗಳಿಂದ ಮತದಾರರು ಭಯಭೀತರಾಗೋದು ಸ್ವಾಭಾವಿಕ, ಆದರೆ ತಮ್ಮ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು, ಆತಂಕಕ್ಕೊಳಗಾಗಬಾರದು, ಎರಡೂ ಪಕ್ಷಗಳ ಹಿರಿಯ ನಾಯಕರು ಅವರ ಜೊತೆಗಿದ್ದಾರೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಿಕೆ ಸಹೋದರರು ಮಾಡುವ ಟೀಕೆಗಳಿಗೆ ಮತದಾರರೇ ಉತ್ತರ ನೀಡಲಿದ್ದಾರೆ: ಡಾ ಸಿಎನ್ ಮಂಜುನಾಥ್

Follow us