ಸಾಮೂಹಿಕ ವಿವಾಹದಲ್ಲಿ ಮತದಾನ ಜಾಗೃತಿ, ನವಜೋಡಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ

ಸಾಮೂಹಿಕ ವಿವಾಹದಲ್ಲಿ ಮತದಾನ ಜಾಗೃತಿ, ನವಜೋಡಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on: Apr 11, 2024 | 5:35 PM

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ವಿವಿಧ ರೀತಿ ಆಮಿಷ ಒಡ್ಡುತ್ತಿವೆ. ಹೀಗಾಗಿ ಚುನಾವಣೆ ಆಯೋಗ ಮತದಾನ ಜಾಗೃತಿ ಮೂಡಿಸಿಸುತ್ತಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದ್ದು, ನವಜೋಡಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯ್ತು.

ಕೊಪ್ಪಳ, (ಏಪ್ರಿಲ್ 11): ಜಿಲ್ಲೆಯ ಕನಕಗಿರಿ ತಾಲೂಕಿನ ಕನಕಾಪುರ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನೂತನ ವಧು-ವರರಿಗೆ ಮತದಾನ ಕುರಿತು ಜಾಗೃತಿಯನ್ನು (awareness awareness) ಮೂಡಿಸಲಾಯಿತು. ಗ್ರಾಮದ ಬೀರಲಿಂಗೇಶ್ವರ ದೇವರ 17 ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹದಲ್ಲಿ 10 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ತಾಲೂಕು ಸ್ವೀಪ್ ಸಮಿತಿಯ ಸದಸ್ಯ ಶಿವರಾಜ್ ಪಾಟೀಲ್ ಅವರು ನೂತನ ವಧು-ವರರಿಗೆ ಮತದಾನ ಕುರಿತು ಮಾಹಿತಿಯನ್ನು ನೀಡಿದರು. ಬಳಿಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ನಂತರ ಶಿರವಾರ ಗ್ರಾಮದ ಗವಿಸ್ವಾಮಿ ಗ್ಯಾನಪ್ಪಯ್ಯ ತಾತನವರು ಮಾತನಾಡಿ, ಮತದಾನ ಶ್ರೇಷ್ಠವಾದದ್ದು, ಪ್ರತಿಯೊಬ್ಬರೂ ಮತದಾನದಿಂದ ವಂಚಿತರಾಗದೇ ಕಡ್ಡಾಯವಾಗಿ ಮತದಾನ ಮಾಡಲು ತಿಳಿಸಿದರು. ಅಲ್ಲದೇ ಸಾಮೂಹಿಕ ವಿವಾಹದಿಂದ ಕುಟುಂಬದ ಆರ್ಥಿಕ ಹೊರೆಯನ್ನು ತಗ್ಗಿಸಬಹುದು ಎಂದರು.