ಅರಕೂಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಪರ ಕುಮಾರಸ್ವಾಮಿ ಅಬ್ಬರದ ಪ್ರಚಾರ

ಅರಕೂಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಪರ ಕುಮಾರಸ್ವಾಮಿ ಅಬ್ಬರದ ಪ್ರಚಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 11, 2024 | 4:19 PM

ಇವತ್ತಿನ ಸಭೆಯಲ್ಲಿ ವೇದಿಕೆಯ ಮೇಲೆ ಸ್ಥಳೀಯ ಶಾಸಕ ಎ ಮಂಜು, ಹೊಳೆನರಸೀಪುರ ಶಾಸಕ ರೇವಣ್ಣ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಪ್ರಜ್ವಲ್ ಮೊದಲಾದವರಲ್ಲದೆ ಅನೇಕ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿದ್ದರು. ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರ ಗೈರು ಹಾಜರಿ ಎದ್ದುಕಾಣುತಿತ್ತು.

ಹಾಸನ: ಕಾಂಗ್ರೆಸ್ ನಾಯಕರು ಏನೇ ಹೇಳಲಿ, ಹಾಸನ ಜಿಲ್ಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಈಗಲೂ ಭಾರೀ ಜನಪ್ರಿಯರು. ಇಂದು ಅವರು ತಮ್ಮ ಸಹೋದರ ಹೆಚ್ ಡಿ ರೇವಣ್ಣ (HD Revanna) ಅವರ ಮಗ ಮತ್ತು ಹಾಲಿ ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಪರ ಪ್ರಚಾರಕ್ಕೆಂದು ಅರಕಲಗೂಡು ಪಟ್ಟಣಕ್ಕೆ ತೆರಳಿದಾಗ ಅವರ ಜನಪ್ರಿಯತೆಯ ಒಂದು ಝಲಕ್ ಸಿಕ್ಕಿತು. ನಿಮಗೆ ನೆನಪಿರಬಹುದು, ಇತ್ತೀಚಿಗೆ ಹಾಸನದಲ್ಲಿ ನಡೆದ ಸಭೆಯೊಂದರಲ್ಲಿ ಮಾತಾಡುವಾಗ ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣನ ಮಗ ಅಲ್ಲ ನನ್ನ ಮಗ ಎಂದು ಹೇಳಿ ಪ್ರಜ್ವಲ್ ಮೇಲೆ ತಮಗಿರುವ ಕಾಳಜಿ ಮತ್ತು ಪ್ರೀತಿಯನ್ನು ಜಾಹೀರುಗೊಳಿಸಿದ್ದರು. ಇವತ್ತಿನ ಸಭೆಯಲ್ಲಿ ವೇದಿಕೆಯ ಮೇಲೆ ಸ್ಥಳೀಯ ಶಾಸಕ ಎ ಮಂಜು, ಹೊಳೆನರಸೀಪುರ ಶಾಸಕ ರೇವಣ್ಣ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಪ್ರಜ್ವಲ್ ಮೊದಲಾದವರಲ್ಲದೆ ಅನೇಕ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿದ್ದರು. ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರ ಗೈರು ಹಾಜರಿ ಎದ್ದುಕಾಣುತಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಕುಮಾರಸ್ವಾಮಿಯವರಿಂದ ನೀತಿಸಂಹಿತೆ ಉಲ್ಲಂಘನೆಯಾಗಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು: ಚುನಾವಣಾಧಿಕಾರಿ