AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಫೋಟೋ ಬಳಕೆ; ಈಶ್ವರಪ್ಪನವರ ಮಾತು ಕೇಳಿದರೆ ಗಾಬರಿಯಾಗುತ್ತದೆ!: ಬಿವೈ ವಿಜಯೇಂದ್ರ

ಪ್ರಧಾನಿ ಮೋದಿ ಫೋಟೋ ಬಳಕೆ; ಈಶ್ವರಪ್ಪನವರ ಮಾತು ಕೇಳಿದರೆ ಗಾಬರಿಯಾಗುತ್ತದೆ!: ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 11, 2024 | 3:01 PM

Share

ಶಿವಮೊಗ್ಗದಲ್ಲಿ ಬಿಜೆಪಿ ಎರಡು ಅಂಶಗಳ ಆಧಾರದ ಮೇಲೆ ಮತ ಯಾಚಿಸುತ್ತಿದೆ, ಮೊದಲಮನೆಯದ್ದು ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಮಾಡಿರುವ ಸಾಧನೆ ಮತ್ತು ಅವರ ಜನಪ್ರಿಯತೆ ಹಾಗೂ ಅಲ್ಲಿನ ಕ್ರಿಯಾಶೀಲ ಸಂಸದ ರಾಘವೇಂದ್ರ ಮಾಡಿರುವ ಅಭಿವೃದ್ಧಿ ಕೆಲಸಗಳು ಎಂದು ಹೇಳಿದರು.

ಚಾಮರಾಜನಗರ: ತಾಕತ್ತಿದ್ದರೆ ಯಡಿಯೂರಪ್ಪ (BS Yediyurappa) ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಫೋಟೋ ಬಳಸದೆ ಪ್ರಚಾರ ಮಾಡಲಿ ಮತ್ತು ಧಮ್ಮಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತನ್ನನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಕೆಎಸ್ ಈಶ್ವರಪ್ಪ ಸವಾಲೆಸೆದಿರುವದನ್ನು ಮಾಧ್ಯಮ ಪ್ರತಿನಿಧಿಗಳು ನಗರದಲ್ಲಿಂದು ಪ್ರಚಾರ ಮಾಡುವಾಗ ಪತ್ರಿಕಾ ಗೋಷ್ಟಿ ನಡೆಸಿದ ವಿಜಯೇಂದ್ರ ಗಮನಕ್ಕೆ ತಂದಾಗ, ಅವರು ಮುಗುಳ್ನಕ್ಕರು. ಅವರ ಮಾತುಗಳಿಂದ ಗಾಬರಿಯಾಗುತ್ತದೆ ಎಂದು ನಗುತ್ತಾ ಹೇಳಿದ ವಿಜಯೇಂದ್ರ, ಪ್ರಧಾನಿ ಮೋದಿ ಅವರು ಭಾರತ ಮತ್ತು ಬಿಜೆಪಿಯ ಹೆಮ್ಮೆ, ಅವರು ತಮ್ಮೆಲ್ಲರ ಹೃದಯಗಳಲ್ಲಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಎರಡು ಅಂಶಗಳ ಆಧಾರದ ಮೇಲೆ ಮತ ಯಾಚಿಸುತ್ತಿದೆ, ಮೊದಲಮನೆಯದ್ದು ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಮಾಡಿರುವ ಸಾಧನೆ ಮತ್ತು ಅವರ ಜನಪ್ರಿಯತೆ ಹಾಗೂ ಅಲ್ಲಿನ ಕ್ರಿಯಾಶೀಲ ಸಂಸದ ರಾಘವೇಂದ್ರ ಮಾಡಿರುವ ಅಭಿವೃದ್ಧಿ ಕೆಲಸಗಳು ಎಂದು ಹೇಳಿದರು. ಪ್ರಧಾನಿ ಮೋದಿಯವರ ಫೋಟೋವನ್ನು ಬಿಜೆಪಿಯವರಾದ ತಾವು ಬಳಸದೆ ಬೇರೆಯವರು ಬಳಸುವುದು ಸಾಧ್ಯವೇ? ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವರಿಷ್ಠರು ಯದುವೀರ್​ಗೆ ಟಿಕೆಟ್ ನೀಡಿದ್ದರೂ ಪ್ರತಾಪ್ ಸಿಂಹಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಕಾದಿದೆ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ