Prajwal Revanna Video: ಪ್ರಜ್ವಲ್​ ವಿಡಿಯೋ ಹೇಳಿಕೆ ಬೆನ್ನಲ್ಲೇ ಎಸ್​ಐಟಿ ಅಲರ್ಟ್, ಗೌಡರ ಕುಟುಂಬ ನಿರಳ

Prajwal Revanna Video: ಹಾಸನ ಪೆನ್​​ಡ್ರೈವ್​ ಪ್ರಕರಣ ಬೆನ್ನಲ್ಲೇ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಇದೀಗ ಬರೋಬ್ಬರಿ ಒಂದು ತಿಂಗಳ ಬಳಿಕ ವಿಡಿಯೋ ಮೂಲಕ ಪ್ರತ್ಯಕ್ಷವಾಗಿದ್ದು, ಇದೇ ಮೇ 31ರಂದು ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಎಸ್​ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

Prajwal Revanna Video: ಪ್ರಜ್ವಲ್​ ವಿಡಿಯೋ ಹೇಳಿಕೆ ಬೆನ್ನಲ್ಲೇ ಎಸ್​ಐಟಿ ಅಲರ್ಟ್, ಗೌಡರ ಕುಟುಂಬ ನಿರಳ
Follow us
ರಮೇಶ್ ಬಿ. ಜವಳಗೇರಾ
|

Updated on:May 27, 2024 | 6:49 PM

ಬೆಂಗಳೂರು, (ಮೇ 27): ಅಶ್ಲೀಲ ವಿಡಿಯೋ ಪೆನ್​​ಡ್ರೈವ್​ ಪ್ರಕರಣಕ್ಕೆ (Hassan Pen drive Case) ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ (Prajwal revanna) ಅವದು ಮೇ 31ರಂದು ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ವಿದೇಶದಲ್ಲಿದ್ದುಕೊಂಡೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದರ ಬೆನಲ್ಲೇ ಇತ್ತ ಎಸ್​ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಪ್ರಜ್ವಲ್​ ಆಗಮಿಸುತ್ತಿದ್ದಂತೆಯೇ ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ,.ಅಲ್ಲದೇ ವಿದೇಶದಿಂದ ಬರುವ ಎಲ್ಲಾ ವಿಮಾನಗಳ ಟಿಕೆಟ್​ಗಳ ಮೇಲೆ ಎಸ್​ಐಟಿ ನಿಗಾ ಇಟ್ಟಿದೆ.

ಪ್ರಜ್ವಲ್ ರೇವಣ್ಣನ ಟಿಕೆಟ್ ಬುಕ್ಕಿಂಗ್ ಮೇಲೆ ಎಸ್​ಐ ಅಧಿಕಾರಿಗಳ ಕಣ್ಣಿಟ್ಟಿದ್ದು, ಯಾವ ವಿಮಾನದಲ್ಲಿ ಬರುತ್ತಾರೆ? ಯಾವ ನಿಲ್ದಾಣಕ್ಕೆ ಬಂದಿಳಿಯುತ್ತಾರೆ? ಎನ್ನುವ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ. ಈಗಾಗಲೇ ಲುಪ್ತಾನ್ಸಾ ಏರ್ಲೈನ್ಸ್ ನಲ್ಲಿ ಟಿಕೆಟ್​ ಬುಕ್​ ಮಾಡಿ ಕೊನೆ ಕ್ಷಣದಲ್ಲಿ ಕ್ಯಾನ್ಸಲ್​ ಮಾಡಿದ್ದರು. ಅದರ ಹಣ ಹಾಗೆ ಉಳಿದಿದ್ದು, ಅದೇ ಹಣದಲ್ಲಿ ಅದೇ ಲುಪ್ತಾನ್ಸಾ ಏರ್​ಲೈನ್ಸ್​ ಟಿಕೆಟ್​ ಬುಕ್ ಮಾಡಿಕೊಂಡು ಮೇ 30ರ ರಾತ್ರಿ ಬೆಂಗಳೂರಿಗೆ ಬರುವ ವಿಮಾನದಲ್ಲಿ ಆಗಮಿಸುವ ಸಾಧ್ಯತೆಗಳಿವೆ. ಹೀಗಾಗಿ ಎಸ್​ಐಟಿ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಿದ್ದು, ವಿದೇಶದಿಂದ ಬರುವ ವಿಮಾನ ಹಾಗೂ ಪ್ರಯಾಣಿಕರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: Prajwal Revanna Video: ಕೊನೆಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ, ತಂದೆ-ತಾಯಿ ಬಳಿ ಕ್ಷಮೆಯಾಚನೆ

ವಿಚಾರಣೆಗೆ ಹಾಜರಾಗುವ ಮುಂಚೆಯೇ ವಶಕ್ಕೆ

ಮೇ 31ರಂದು ಎಸ್​ಐಟಿ ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದ್ರೆ, ವಿಚಾರಣೆಗೆ ಹಾಜರಾಗುವ ಮುಂಚೆಯೇ ವಶಕ್ಕೆ ಪಡೆಯಲು ಎಸ್​ಐಟಿ ಮುಂದಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮತ್ತು ಅರೆಸ್ಟ್​ ವಾರಂಟ್​ ಸಹ ಜಾರಿಯಾಗಿದೆ. ಹೀಗಾಗಿ ಯಾವ ವಿಮಾನದಲ್ಲಿ ಪ್ರಜ್ವಲ ಬರುತ್ತಾರೆ ಎಂದು ಎಸ್​ಐಟಿ ಮಾಹಿತಿ ಪಡೆದುಕೊಂಡು ವಶಕ್ಕೆ ಪಡೆಯಲಿದೆ. ಅದಕ್ಕೂ ಮೊದಲು ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್​ ವಶಕ್ಕೆ ಪಡೆಯಲಿದ್ದಾರೆ. ಬಳಿಕ ಎಸ್ಐಟಿಗೆ ಒಪ್ಪಿಸಲಿದ್ದಾರೆ. ಅದಾದ ಬಳಿಕ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರಿಗೆ ಮೆಡಿಕಲ್ ಚೆಕಪ್ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ವೇಳೆ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್​ಗೆ ಮನವಿ ಮಾಡಲಿದ್ದಾರೆ.

ಪ್ರಜ್ವಲ್ ಕಾಂಟ್ಯಾಕ್ಟ್​ಗೆ ಮುಂದಾದ ಎಸ್ಐಟಿ

ಎಸ್​ಐಟಿ ನೋಟಿಸ್ ಜಾರಿ ಮಾಡಿದ್ದಾಗ ಪ್ರಜ್ವಲ್ ರೇವಣ್ಣ ಕಳೆದ ಬಾರಿ ಕೂಡ ಇದೇ ವಕೀಲರ ಮೂಲಕ ಕಾಲವಕಾಶ ಕೋರಿದ್ದರು. ಆದ್ರೆ ಕಳೆದ ಬಾರಿ ಹೇಳಿದಂತೆ ವಿಚಾರಣೆಗೆ ಹಾಜರಾಗದೆ ದೂರ ಉಳಿದ್ದರು. ಈ ಬಾರಿಯೂ ಮತ್ತೆ ಹಾಗೆ ಮಾಡುವ ಸಾಧ್ಯತೆ ಕೂಡ ಇರುತ್ತೆ. ಹೀಗಾಗಿ ಎಸ್​ಐಟಿ ಅಧಿಕಾರಿಗಳು ಈಗಲೇ ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಸ್​ಗೆ ಮುಂದಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಇಂಟರ್ಪೋಲ್​ನಿಂದಲೂ ಮಾಹಿತಿ ತಿಳಿದುಕೊಳ್ಳಲಿದ್ದಾರೆ.

ವಿಡಿಯೋ ರಿಲೀಸ್ ಆಗಿರುವುದು ಪ್ರಜ್ವಲ್ ರೇವಣ್ಣರನ್ನ ಅರೆಸ್ಟ್ ಮಾಡಲು ಸಹಾಯವಾಗಿದ್ದು, ಯಾವ ಏರ್ಪೋರ್ಟ್ ಗೆ ಬರುತ್ತಾರೆ. ಅಲ್ಲಿಂದಲೇ ಬಂಧಣ ಮಾಡೋದಾ? ಬೆಂಗಳೂರಿಗೆ ಬಂದಮೇಲೆ ಅರೆಸ್ಟ್ ಮಾಡೋದಾ? ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದೇವೇಗೌಡ ಕುಟುಂಬ ನಿರಾಳ

ಇನ್ನೊಂದೆಡೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳು ಬಳಿಕ ವಿಡಿಯೋ ಮೂಲಕ ಸಾರ್ವಜನಿಕವಾಗಿ ಕಾಣಿಸಿದ್ದಾರೆ. ಈ ವಿಡಿಯೋ ಹೇಳಿಕೆ ಬಿಡುಗಡೆ ಬೆನ್ನಲ್ಲೇ ದೇವೇಗೌಡರ ಕುಟುಂಬ ನಿರಳವಾಗಿದೆ. ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಇದ್ದಾನ? ,ಏನು ಮಾಡುತ್ತಿದ್ದಾನೆ ಎನ್ನುವ ಗೊಂದಲದಲ್ಲಿ ಗೌಡರ ಕುಟುಂಬ ಇತ್ತು. ಇದೀಗ ಖುದ್ದು ಪ್ರಜ್ವಲ್ ವಿದೇಶದಲ್ಲಿದ್ದುಕೊಂಡು ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತ್ಯಕ್ಷವಾಗಿದ್ದಕ್ಕೆ ದೇವೇಗೌಡರ ಕುಟುಂಬ ನಿಟ್ಟುಸಿರುಬಿಟ್ಟಿದೆ. ಅಲ್ಲದೇ ವಿಡಿಯೋ ಬಿಡುಗಡೆಯಿಂದ ಮುಂದಿನ ಕಾನೂನು ಹೋರಾಟದ ಮನೆಯಲ್ಲಿ ಚರ್ಚೆ ನಡೆದಿದೆ.

ಸಮಧಾನವಾಯ್ತು ಎಂದ ಕುಮಾರಸ್ವಾಮಿ

ಇನ್ನು ಈ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದು ಸಮಾಧಾನವಾಗಿದೆ. ತಕ್ಷಣ ವಾಪಸ್ ಬಂದು ತನಿಖೆಗೆ ಹಾಜರಾಗಬೇಕು. ದೇವೇಗೌಡ ಸೂಚನೆಗೆ ಪ್ರಜ್ವಲ್ ರೇವಣ್ಣ ಸ್ಪಂದಿಸಿದ್ದಕ್ಕೆ ಸಮಾಧಾನ ತಂದಿದೆ. ಸರ್ಕಾರ ಎಸ್.ಐ.ಟಿ ತನಿಖೆ ಕೈಗೊಂಡಿದೆ. ಪ್ರಕರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೆ ನೋಡೋಣ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:11 pm, Mon, 27 May 24

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್