ಹೆಚ್ ಡಿ ದೇವೇಗೌಡ ಮತ್ತು ನನ್ನ ಮನವಿಗೆ ಓಗೊಟ್ಟು ಪ್ರಜ್ವಲ್ ವಾಪಸ್ಸು ಬರುತ್ತಿರುವುದು ಸಮಾಧಾನ ತಂದಿದೆ: ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ದೇವೇಗೌಡ ಮತ್ತು ನನ್ನ ಮನವಿಗೆ ಓಗೊಟ್ಟು ಪ್ರಜ್ವಲ್ ವಾಪಸ್ಸು ಬರುತ್ತಿರುವುದು ಸಮಾಧಾನ ತಂದಿದೆ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2024 | 6:30 PM

ವಿಡಿಯೋನಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅದೆಲ್ಲ ತನಿಖೆಯಲ್ಲಿ ಗೊತ್ತಾಗಲಿದೆ ಎಂದರು. ಪ್ರಜ್ವಲ್ ಕ್ಷಮೆ ಕೇಳಿರುವ ಬಗ್ಗೆಯೂ ಮಾತಾಡಿದ ಕುಮಾರಸ್ವಾಮಿ, ಅವನು ಕಾರ್ಯಕರ್ತರ ಕ್ಷಮೆ ಕೇಳಿರುವುದು ಅವರ ಬಗ್ಗೆ ಗೌರವಾದರ ಮತ್ತು ಮಮತೆ ಹೊಂದಿರುವುದನ್ನು ತೋರಿಸುತ್ತದೆ, ಈ ವಿಷಯ ತನಗೆ ಬಹಳ ಸಮಾಧಾನ ನೀಡಿದೆ ಎಂದರು.

ಚಿಕ್ಕಬಳ್ಳಾಪುರ: ಪ್ರಜ್ವಲ್ ರೇವಣ್ಣ (Prajwal Revanna) ಇಂದು ಬಿಡುಗಡೆ ಮಾಡಿರುವ ವಿಡಿಯೋಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ ಡಿ ದೇವೇಗೌಡರು (HD Devegowda) ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸು ಅಂತ ಎಚ್ಚರಿಕೆ ನೀಡಿದ್ದರೆ ನಾನು ಮನವಿ ಮಾಡಿದ್ದೆ, ಅದಕ್ಕೆ ಓಗೊಟ್ಟು ಅವನು ವಾಪಸ್ಸು ಬರುತ್ತಿರುವುದು ಸಮಾಧಾನ ತಂದಿದೆ, ಅವನು ವಾಪಸ್ಸು ಬಂದು ತನಿಖಾಧಿಕಾರಿಗಳ ಮುಂದೆ ಹಾಜರಾದ ಬಳಿಕ ಕಾನೂನು ಪ್ರಕ್ರಿಯೆ ಶುರುವಾಗುತ್ತದೆ, ಅದು ಎಲ್ಲಿಗೆ ತಲುಪುತ್ತದೆಯೋ ನೋಡೋಣ ಎಂದು ಹೇಳಿದರು. ವಿಡಿಯೋನಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅದೆಲ್ಲ ತನಿಖೆಯಲ್ಲಿ ಗೊತ್ತಾಗಲಿದೆ ಎಂದರು. ಪ್ರಜ್ವಲ್ ಕ್ಷಮೆ ಕೇಳಿರುವ ಬಗ್ಗೆಯೂ ಮಾತಾಡಿದ ಕುಮಾರಸ್ವಾಮಿ, ಅವನು ಕಾರ್ಯಕರ್ತರ ಕ್ಷಮೆ ಕೇಳಿರುವುದು ಅವರ ಬಗ್ಗೆ ಗೌರವಾದರ ಮತ್ತು ಮಮತೆ ಹೊಂದಿರುವುದನ್ನು ತೋರಿಸುತ್ತದೆ, ಈ ವಿಷಯ ತನಗೆ ಬಹಳ ಸಮಾಧಾನ ನೀಡಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿಪ್ರಜ್ವಲ್ ರೇವಣ್ಣ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ ಪ್ರಶ್ನೆ ಕೇಳಿದಾಗ ಆರ್ ಅಶೋಕರಿಂದ ತಪ್ಪಿಸಿಕೊಳ್ಳುವ ಪ್ರಯತ್ನ!