ಕಲುಷಿತಗೊಂಡಿರುವ ಶಿಕ್ಷಣ ಕ್ಷೇತ್ರದ ಬಗ್ಗೆ ನಾನು ಮಾತಾಡಿದ್ದು, ಹೇರ್ ಕಟಿಂಗ್ ಬಗ್ಗೆ ಅಲ್ಲ: ಬಿವೈ ವಿಜಯೇಂದ್ರ
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಮಾತಾಡಿದ ವಿಜಯೇಂದ್ರ ಜಾತಿ, ಪ್ರಾಂತ್ಯ ಮೊದಲಾದ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳಿಸಲಾಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರ ಅಂತಿಮ ಎಂದರು.
ಮಂಗಳೂರು: ಇವರಿಬ್ಬರು ಯುವನಾಯಕರು, ಶಿವಮೊಗ್ಗ ಜಿಲ್ಲೆಯವರು ಮತ್ತು ಮಾಜಿ ಮುಖ್ಯಮಂತ್ರಿಗಳ ಸುಪುತ್ರರು. ಆದರೆ ಇವರ ನಡುವಿನ ರಾಜಕೀಯ ವೈಷಮ್ಯ ಹೇರ್ ಕಟಿಂಗ್ಗೆ (hair cutting) ಬಂದು ನಿಂತಿದೆ. ಮೊದಲು ಬಿವೈ ವಿಜಯೇಂದ್ರ (BY Vijayendra) ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇರ್ ಸ್ಟೈಲ್ ಬಗ್ಗೆ ಕಾಮೆಂಟ್ ಮಾಡಿದರು. ನಂತರ ಸಚಿವ ನನ್ನ ಕ್ಷೌರಿಕನಿಗೆ ಪುರುಸೊತ್ತಿಲ್ಲ, ವಿಜಯೇಂದ್ರನೇ ಬಂದು ಮಾಡಲಿ ಅಂತ ಪ್ರತಿಕ್ರಿಯಿಸಿದರು. ಇವತ್ತು ಮಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ಮಧು ಬಂಗಾರಪ್ಪ ಹೇಳಿದ್ದನ್ನು ತಿಳಿಸಿದಾಗ ವಿಜಯೇಂದ್ರ ವಿಷಯವನ್ನು ಕ್ಷೌರ, ಕ್ಷೌರಿಕನಿಂದ ಬೇರೆಡೆ ತಿರುಗಿಸುವ ಪ್ರಯತ್ನ ಮಾಡಿದರು. ಶಿಕ್ಷಣ ಕ್ಷೇತ್ರದ ಸ್ಥಿತಿಯ ಬಗ್ಗೆ ಜನ ಆಡಿಕೊಳ್ಳುತ್ತಿರುವುದನ್ನು ತಾನು ಹೇಳಿದ್ದು, ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕಲುಷಿತಗೊಂಡಿದೆ, ಮಕ್ಕಳ ಮತ್ತು ಪೋಷಕರ ಜೊತೆ ಶಿಕ್ಷಕರು ಸಹ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ, ಶಿಕ್ಷಣ ಸಚಿವರು ಈ ಸಮಸ್ಯೆಗಳ ಕಡೆ ಹೆಚ್ಚು ಗಮನ ನೀಡಬೇಕೆಂದು ತಾನು ಹೇಳಿದ್ದು ಎಂದು ವಿಜಯೇಂದ್ರ ಹೇಳಿದರು. ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಮಾತಾಡಿದ ವಿಜಯೇಂದ್ರ ಜಾತಿ, ಪ್ರಾಂತ್ಯ ಮೊದಲಾದ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳಿಸಲಾಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರ ಅಂತಿಮ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಬಿಜೆಪಿ ನಿಲುವು ಸ್ಪಷ್ಟ: ಬಿವೈ ವಿಜಯೇಂದ್ರ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

