ಪ್ರಜ್ವಲ್ ರೇವಣ್ಣ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ ಆರ್ ಅಶೋಕ ಪ್ರತಿಕ್ರಿಯೆ !
ಪ್ರಜ್ವಲ್ ತಪ್ಪಿಸಿಕೊಂಡಿದ್ದು ಸರಿಯಲ್ಲ ಎಂದು ಹೇಳುವ ಅಶೋಕ ನಂತರ ರಾಜ್ಯ ಸರ್ಕಾರವನ್ನು ದೂಷಿಸಲಾರಂಭಿಸುತ್ತಾರೆ. ಇದು ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವೆಂದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ, ತಮ್ಮವರನ್ನು ಬಚಾವ್ ಮಾಡುವುದಕ್ಕೋಸ್ಕರ ಕಾಂಗ್ರೆಸ್ ಸರ್ಕಾರ ಎಸ್ಐಟಿಯನ್ನು ರಚಿಸಿದೆ ಎಂದು ಅಶೋಕ ಹೇಳಿದರು.
ಚಿಕ್ಕಬಳ್ಳಾಪುರ: ಲೈಂಗಿಕ ಹಗರಣಗಳ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡು ಯಾವುದೋ ದೇಶದಲ್ಲಿ ಕೂತು ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಇವತ್ತು ಬಿಡುಗಡೆ ಮಾಡಿರುವ ವಿಡಿಯೋದ ಬಗ್ಗೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಪ್ರತಿಕ್ರಿಯೆ ನೀಡಿದರು. ಅವರಸದಲ್ಲಿದ್ದ ಅವರು ಆಮೇಲೆ ಹೇಳ್ತೀನಿ ಅಂತ ಹೇಳಿದರೂ ಪತ್ರಕರ್ತರು ಬಿಡಲಿಲ್ಲ. ಅವರೊಂದಿಗೆ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಸಹ ಇದ್ದರು. ತಡವಾದರೂ ಕೊನೆಗೆ ಪ್ರಜ್ವಲ್ ತಪ್ಪು ಒಪ್ಪಿಕೊಂಡಿದ್ದಾರೆ, ಯಾರೂ ಕಾನೂನಿಗಿಂತ ದೊಡ್ಡವರಲ್ಲ, ಕಾನೂನು ಮುಂದೆ ತಲೆಬಾಗಲೇ ಬೇಕು, ಪ್ರಜ್ವಲ್ ತಪ್ಪಿಸಿಕೊಂಡಿದ್ದು ಸರಿಯಲ್ಲ ಎಂದು ಹೇಳುವ ಅಶೋಕ ನಂತರ ರಾಜ್ಯ ಸರ್ಕಾರವನ್ನು ದೂಷಿಸಲಾರಂಭಿಸುತ್ತಾರೆ. ಇದು ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವೆಂದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ, ತಮ್ಮವರನ್ನು ಬಚಾವ್ ಮಾಡುವುದಕ್ಕೋಸ್ಕರ ಕಾಂಗ್ರೆಸ್ ಸರ್ಕಾರ ಎಸ್ಐಟಿಯನ್ನು ರಚಿಸಿದೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನೀರಿನ ಸಮಸ್ಯೆಯಿಂದ ಕಂಪನಿಗಳು ರಾಜ್ಯಕ್ಕೆ ಬರಲು ಹಿಂದೇಟು: ಆರ್ ಅಶೋಕ ಹೇಳಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು