‘ಯಾವ ಫ್ಯಾನ್ಸ್ ಕೂಡ ಇಷ್ಟು ಕೀಳು ಮಟ್ಟಕ್ಕೆ ಇಳಿಯಲ್ಲ’: ಸ್ನೇಹಿತನ ಮೇಲಿನ ಹಲ್ಲೆಗೆ ಧ್ರುವ ಪ್ರತಿಕ್ರಿಯೆ
ಕಳೆದ ಹಲವು ವರ್ಷಗಳಿಂದ ಪ್ರಶಾಂತ್ ಅವರು ಧ್ರುವ ಸರ್ಜಾಗೆ ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಅವರ ಮೇಲೆ ಹಲ್ಲೆ ಆಗಿದ್ದು, ಆ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಶಾಂತ್ ಅವರ ವೈಯಕ್ತಿಕ ವಿಚಾರ ಏನು ಇತ್ತೋ ಅದು ನನಗೆ ಗೊತ್ತಿಲ್ಲ. ನನ್ನ ಸ್ನೇಹಿತ ಮತ್ತು ಟ್ರೇನರ್ ಅವರು. ಹಲ್ಲೆಗೆ ಸಂಬಂಧಿಸಿದಂತೆ ಎಫ್ಐಆರ್ ಆಗಿದೆ’ ಎಂದಿದ್ದಾರೆ ಧ್ರುವ ಸರ್ಜಾ.
ಖ್ಯಾತ ನಟ ಧ್ರುವ ಸರ್ಜಾ ಅವರ ಜಿಮ್ ಟ್ರೇನರ್ (Dhruva Sarja Gym Trainer), ಸ್ನೇಹಿತ ಪ್ರಶಾಂತ್ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ಆಗಿದೆ. ಮಚ್ಚಿನಿಂದ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ (Dhruva Sarja) ಅವರು ಮಾಧ್ಯಮಗಳ ಎದುರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಗೂ ಫ್ಯಾನ್ಸ್ ವಾರ್ಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಧ್ರುವ ಸರ್ಜಾ ಅವರು ಸ್ಪಷ್ಟನೆ ನೀಡಿದ್ದಾರೆ. ‘ದಯವಿಟ್ಟು, ಸಂಬಂಧ ಇಲ್ಲದ ವಿಷಯದಿಂದ ಸುದ್ದಿ ಮಾಡಬೇಡಿ. ಯಾವ ಫ್ಯಾನ್ಸ್ ಕೂಡ ಇಷ್ಟು ಕೀಳುಮಟ್ಟಕ್ಕೆ ಇಳಿದು ಮಾಡಲ್ಲ. ಫ್ಯಾನ್ಸ್ ವಾರ್ ಅಂತ ಯಾರೂ ಅಂದುಕೊಳ್ಳಬೇಡಿ. ಅಷ್ಟು ಚೀಪ್ ಯಾರೂ ಇಲ್ಲ. ಇದು ಕೇವಲ ಪ್ರಶಾಂತ್ ಅವರಿಗೆ ಸಂಬಂಧಿಸಿದ್ದು ಅಷ್ಟೇ. ತನಿಖೆ ಆಗುತ್ತಿದೆ, ಎಲ್ಲವೂ ಗೊತ್ತಾಗುತ್ತದೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos