ಪ್ರಜ್ವಲ್ ರೇವಣ್ಣ ಇಂದು ಬಿಡುಗಡೆ ಮಾಡಿರುವ ವಿಡಿಯೋಗೆ ಶಿವಕುಮಾರ್ ನೀರಸ ಪ್ರತಿಕ್ರಿಯೆ!
ತನ್ನ ವಿಡಿಯೋದಲ್ಲಿ ಪಜ್ವಲ್, ನನ್ನ ವಿರುದ್ಧ ಪಿತೂರಿ ನಡೆದಿದೆ, ಷಡ್ಯಂತ್ರವೊಂದಕ್ಕೆ ತಾನು ಬಲಿಯಾಗಿದ್ದೇನೆ ಅಂತ ಹೇಳಿರುವುದಕ್ಕೆ ಪ್ರತಿಕ್ರಯಿಸಿದ ಶಿವಕುಮಾರ್, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಮಾತಾಡುವವರ ಬಾಯಿಗೆ ಬೀಗ ಹಾಕಲಾಗುತ್ತಾ ಅಂತ ಹೇಳಿದರು. ರಾಹುಲ್ ಗಾಂಧಿಯ ಹೆಸರು ಸಹ ಪ್ರಜ್ವಲ್ ಪ್ರಸ್ತಾಪ ಮಾಡಿದ್ದಾರೆ ಎಂದಾಗ ಶಿವಕುಮಾರ್ ಎಲ್ಲಾದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು.
ಬೆಂಗಳೂರು: ಮೇ 31 ರಂದು ವಾಪಸ್ಸು ಬೆಂಗಳೂರಿಗೆ ವಾಪಸ್ಸು ಬಂದು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಹೇಳಿರುವ ಪ್ರಜ್ವಲ್ ರೇವಣ್ಣನ (Prajwal Revanna) ವಿಡಿಯೋ ರಾಜ್ಯದಲ್ಲಿ ಚರ್ಚೆಯ ವಿಷಯವಾಗಿದೆ. ಏಪ್ರಿಲ್ 26 ರಿಂದ ತಲೆಮರೆಸಿಕೊಂಡಿರುವ ಪ್ರಜ್ವಲ್ ಯಾವುದೋ ದೇಶದಲ್ಲಿ ಕುಳಿತು ಬಿಡುಗಡೆ ಮಾಡಿರುವ ವಿಡಿಯೋ (video) ಬಗ್ಗೆ ಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರಜ್ವಲ್ ಬಿಡುಗಡೆ ವಿಡಿಯೋಗೆ ಹೆಚ್ಚಿನ ಮಹತ್ವವೇನೂ ನೀಡಲಿಲ್ಲ. ತನ್ನ ವಿಡಿಯೋದಲ್ಲಿ ಪಜ್ವಲ್, ನನ್ನ ವಿರುದ್ಧ ಪಿತೂರಿ ನಡೆದಿದೆ, ಷಡ್ಯಂತ್ರವೊಂದಕ್ಕೆ ತಾನು ಬಲಿಯಾಗಿದ್ದೇನೆ ಅಂತ ಹೇಳಿರುವುದಕ್ಕೆ ಪ್ರತಿಕ್ರಯಿಸಿದ ಶಿವಕುಮಾರ್, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಮಾತಾಡುವವರ ಬಾಯಿಗೆ ಬೀಗ ಹಾಕಲಾಗುತ್ತಾ ಅಂತ ಹೇಳಿದರು. ರಾಹುಲ್ ಗಾಂಧಿಯ ಹೆಸರು ಸಹ ಪ್ರಜ್ವಲ್ ಪ್ರಸ್ತಾಪ ಮಾಡಿದ್ದಾರೆ ಎಂದಾಗ ಶಿವಕುಮಾರ್ ಎಲ್ಲಾದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಕ್ತಿ ಯೋಜನೆಯನ್ನು ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಕೊಂಡಾಡಿದರು: ಡಿಕೆ ಶಿವಕುಮಾರ್

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!

ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ

ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
