ಕೆಡೆರ್​ ಬೇಸ್​ ಪಾರ್ಟಿ ಮಾಡಲು ನಿರ್ಧಾರ, ಇದು ಕಾಂಗ್ರೆಸ್​ ಕುಟುಂಬ: ಡಿಕೆ ಶಿವಕುಮಾರ್​ ಘರ್ಜನೆ

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಜವಾಹರ್​ ಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿತು. ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​ ಇದು ನಾಲ್ಕು ವರ್ಷದ ಸರ್ಕಾರ ಅಲ್ಲ, ಹತ್ತು ವರ್ಷದ ಸರ್ಕಾರ. ಕಾಂಗ್ರೆಸ್ ಕುಟುಂಬ ಅಂತ 50 ಜನ ತಂಡ ರಚನೆ ಮಾಡಬೇಕು ಎಂದರು.

ಕೆಡೆರ್​ ಬೇಸ್​ ಪಾರ್ಟಿ ಮಾಡಲು ನಿರ್ಧಾರ, ಇದು ಕಾಂಗ್ರೆಸ್​ ಕುಟುಂಬ: ಡಿಕೆ ಶಿವಕುಮಾರ್​ ಘರ್ಜನೆ
ಡಿಕೆ ಶಿವಕುಮಾರ್​
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on: May 27, 2024 | 2:50 PM

ಬೆಂಗಳೂರು, ಮೇ 27: ಪಕ್ಷ ಸಂಘಟನೆಗೆ ಬದಲಾವಣೆ ತರಲು ಕಾಂಗ್ರೆಸ್ (Congress)​ ನಿರ್ಧರಿಸಿದೆ. ಇಷ್ಟು ದಿನ ಮಾಸ್​ ಪಾರ್ಟಿಯಾಗಿದ್ದ ಕಾಂಗ್ರೆಸ್​ ಇದೀಗ ಕೆಡರ್​ ಬೇಸ್​ ಪಾರ್ಟಿಯಾಗಲು ಹೊರಟಿದೆ. ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ ಪಾರ್ಟಿ (Cadre base Party) ಮಾಡಲೇಬೇಕು. ಕೇಡರ್ ಬೇಸ್ ಪಾರ್ಟಿ ಮಾಡದೆ ಇದ್ದರೆ ಮುಂದೆ ಕಷ್ಟವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರು ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಇಂದು (ಮೇ 27) ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರ್​ ಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೇ ದೊಡ್ಡವರಾದರೂ ಪಕ್ಷಕ್ಕೆ ಕೊಡುಗೆ ನೀಡಲೇಬೇಕು.

ಇದು ನಾಲ್ಕು ವರ್ಷದ ಸರ್ಕಾರ ಅಲ್ಲ, ಹತ್ತು ವರ್ಷದ ಸರ್ಕಾರ. ಕಾಂಗ್ರೆಸ್ ಕುಟುಂಬ ಅಂತ 50 ಜನ ತಂಡ ರಚನೆ ಮಾಡಬೇಕು. ಸಚಿವರ ಜತೆಗೂ ಮಾತನಾಡಿದ್ದೇನೆ. ಬೆಂಗಳೂರು ನಗರದಲ್ಲೂ ಸಹ ಹೊಸ ಕಚೇರಿ ಸ್ಥಾಪಿಸುತ್ತೇವೆ. ಒಂದು ವರ್ಷದಲ್ಲಿ ಪಕ್ಷದ ಕಚೇರಿಗೆ ಅಡಿಪಾಯ ಹಾಕಬೇಕು. ಎಲ್ಲ ಸಚಿವರು ಇದಕ್ಕೆ ಸಜ್ಜಾಗಬೇಕು. ಪಕ್ಷದ ಕಚೇರಿಯೇ ಮೊದಲ ದೇವಸ್ಥಾನ. ಸಚಿವ ಹೆಚ್​ಸಿ ಮಹದೇವಪ್ಪ ಅವರಿಗೂ ಕೂಡ ಎಚ್ಚರಿಕೆ ನೀಡಿದ್ದೇವೆ. ಪಕ್ಷದ ಜಿಲ್ಲಾ ಕಚೇರಿ ಒಂದು ವರ್ಷದಲ್ಲಿ ಕಟ್ಟದೇ ಹೋದರೆ ಬೇರೆ ಕಡೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನನಗೆ ಒಮ್ಮೊಮ್ಮೆ ಮುಜುಗರ ಆಗುತ್ತದೆ. ಕಾರ್ಯಕರ್ತರು ನಮ್ಮನ್ನು ಭೇಟಿ ಮಾಡಲು ಬಂದಿರುತ್ತಾರೆ. ಸೂಟ್ ಬೂಟ್, ದೊಡ್ಡ ಖಾದಿ ಬಟ್ಟೆ ಹಾಕಿದವರನ್ನೇ ನಾವು ಕರೆದು ಮಾತಾಡುತ್ತೇವೆ. ನಮ್ಮನ್ನು ಎತ್ತಿಕೊಂಡು ಬಂದು ವಿಧಾನಸೌಧದಲ್ಲಿ ಕೂರಿಸಿದ ಒಬ್ಬರನ್ನು ನಾವು ಮಾತನಾಡಿಸುವುದಿಲ್ಲ. ನಮ್ಮ ಗನ್ ಮ್ಯಾನ್​ಗಳು, ಪಿಎಗಳು ಹಂಗೆ ಮಾಡುತ್ತಾರೆ. ಯಾರು ಚನ್ನಾಗಿ ಬಟ್ಟೆ ಹಾಕಿರುತ್ತಾರೆ ಅವರನ್ನ ಕರೆದು ಒಳಗಡೆ ಕೂರಿಸುತ್ತಾರೆ. ನನಗೆ ಅನುಭವ ಆಗಿದೆ‌. ಇದನ್ನ ನಾವು ಬಂದ್ ಮಾಡಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್​ಗೆ ಜನ್ಮದಿನದ ಶುಭಾಶಯ ಕೋರಿದ ಉಪರಾಷ್ಟ್ರಪತಿ ಜಗದೀಪ್​ ಧನಕರ್​

ಡಿಕೆ ಶಿವಕುಮಾರ್ ತಲೆಹಿಡಿಕರು ಎಂಬ ಹೆಚ್‌ ಡಿ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಮಾತನಾಡಿದ ಅವರು, ತಲೆ ಹಿಡಿಯುತ್ತಾರೋ, ಏನ್ ಮಾಡ್ತಾರೋ, ಆ ಬಗ್ಗೆ ಮಾತಾಡಲ್ಲ. ಆ ಮಾಹಿತಿ ತಿಳಿದುಕೊಂಡು, ಕಣ್ಣಲ್ಲಿ ನೋಡಬಿಟ್ಟು, ಕಿವಿಯಲ್ಲಿ ಕೇಳಿಬಿಟ್ಟು ನಾನು ಮಾತನಾಡುತ್ತೇನೆ ಎಂದರು.

ಕೆಪಿಸಿಸಿ ಪದಾಧಿಕಾರಿಗಳ ಮೇಲೆ ಗರಂ

ಕೆಪಿಸಿಸಿ ಪದಾಧಿಕಾರಿಗಳಿಗೆ ವೇದಿಕೆ ಮೇಲಿಂದ ಇಳಿಯುವಂತೆ ನಿರೂಪಕರು ಮನವಿ ಮಾಡಿದರು. ಆದರೂ ಕೂಡ ಪದಾಧಿಕಾರಿಗಳು ಮಾತು ಕೇಳಲಿಲ್ಲ. ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿ‌.ಕೆ.ಶಿವಕುಮಾರ್, ಪದಾಧಿಕಾರಿಗಳು ಮೊದಲು ಕಾರ್ಯಕರ್ತರು ಅನ್ನೋದು ಗೊತ್ತಿರಲಿ. ಯಾವಾಗ ನೀವು ಶಿಸ್ತು ಕಲಿತುಕೊಳ್ಳುವುದು ಎಂದು ಗರಂ ಆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್