Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ

ಬೆಂಗಳೂರಿನಲ್ಲಿ ನಟೋರಿಯಸ್ ಕೊಲೆಗಾರನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದಾನೆ. ವೃತ್ತಿ ಪರ ಕ್ರಿಮಿನಲ್ ಹಿನ್ನಲೆ ಹೊಂದಿದ್ದಾನೆ. ಈ ಹಿಂದೆ ಲೈಂಗಿಕ ದೌರ್ಜನ್ಯ, ದರೋಡೆ ಸಂಚು ಸೇರಿದಂತೆ ಆತನ ವಿರುದ್ಧ ಸುಬ್ರಮಣ್ಯಪುರ, ಬನಶಂಕರಿ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಸದ್ಯ ವಿಚಾರಣೆ ಮಾಡಿದ ಪೊಲೀಸರು ದಂಗಾಗಿದ್ದಾರೆ.

ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ
ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on: May 27, 2024 | 3:07 PM

ಬೆಂಗಳೂರು, ಮೇ 27: ಮೇ 12ರಂದು ಕುಡಿದ ಮತ್ತಿನಲ್ಲಿ ಜಯನಗರದ 7ನೇ ಬಡಾವಣೆ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ (murder) ಮಾಡಿದ್ದ ಆರೋಪಿ ಗಿರೀಶ್​ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಆತನನ್ನು ವಿಚಾರಣೆ ಮಾಡಿದ ಪೊಲೀಸರೇ ಇದೀಗ ಒಂದು ಕ್ಷಣ ದಂಗಾಗಿದ್ದಾರೆ. ಏಕೆಂದರೆ ಆತನ ಹಿನ್ನೆಲೆಯೇ ಭಯಾನಕವಾಗಿದೆ. ವೃತ್ತಿ ಪರ ಕ್ರಿಮಿನಲ್ ಹಿನ್ನಲೆ ಹೊಂದಿರುವ ಬಂಧಿತ ಆರೋಪಿ ಗಿರೀಶ್​ ಒಂದೇ ವಾರದಲ್ಲಿ ಎರಡೆರೆಡು ಕೊಲೆ ಮಾಡಿದ್ದಾನೆ.

ಈ ಹಿಂದೆ ಲೈಂಗಿಕ ದೌರ್ಜನ್ಯ, ದರೋಡೆ ಸಂಚು ಸೇರಿದಂತೆ ನಾಲ್ಕು ಪ್ರಕರಣಗಳು ಸುಬ್ರಮಣ್ಯಪುರ, ಬನಶಂಕರಿ ಠಾಣೆಗಳಲ್ಲಿ ಈತನ ವಿರುದ್ಧ ದಾಖಲಾಗಿತ್ತು. ಜೈಲು ವಾಸ ಅನುಭವಿಸಿ ಬಂದಿದ್ದ ಬಂಧಿತ ಆರೋಪಿ ಗಿರೀಶ್​​, 2020ರಲ್ಲಿ 10 ತಿಂಗಳ ಜೈಲು ವಾಸ ಅನುಭವಿಸಿದ್ದ. ಆ ಬಳಿಕ ಹೋಟೆಲ್​​​ನಲ್ಲಿ ಸಹಾಯಕನಾಗಿ ಮತ್ತು ಜೊತೆಗೆ ಗಾರೆ ಕೆಲಸ ಕೂಡ ಮಾಡಿಕೊಂಡಿದ್ದ.

ಇದನ್ನೂ ಓದಿ: ಕುಡಿದು ಬಂದು ರಸ್ತೆ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸುತ್ತಿದ್ದ ಕಿಲ್ಲರ್‌ ಅಂದರ್‌!

ಈ ನಡುವೆ ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಕಳ್ಳತನ ಶುರು ಮಾಡಿದ್ದ. ಗೆಳೆಯ ಸುರೇಶ್ ಎಂಬಾತನ ಜೊತೆಗೂಡಿ ಕಳ್ಳತನಕ್ಕೆ ಇಳಿದಿದ್ದರು. ರಾತ್ರಿ ವೇಳೆ ರಸ್ತೆಯಲ್ಲಿ ಮಲಗುವವರೇ ಇವರ ಟಾರ್ಗೆಟ್​. ರಸ್ತೆಯಲ್ಲಿ ಮಲಗಿದ್ದವರ ವಸ್ತುಗಳನ್ನು ಇಬ್ಬರು ಕಳ್ಳತನ ಮಾಡುತ್ತಿದ್ದರು. ಸಿಟಿ ಮಾರ್ಕೆಟ್ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಒಂಟಿಯಾಗಿದ್ದವರನ್ನು ಬೆದರಿಸಿ ಸುಲಿಗೆ ಮಾಡುತಿದ್ದರು.

ಇದನ್ನೂ ಓದಿ: ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ಆಕ್ರೋಶ: ಚಾಕುವಿನಿಂದ ಇರಿದು ಹಲ್ಲೆ, ಆರೋಪಿ ವಶಕ್ಕೆ

ಕದ್ದ ಮೊಬೈಲ್​ ವಿಚಾರವಾಗಿ ಮೇ.18ರಂದು ಸಿಟಿ ಮಾರ್ಕೆಟ್​​ನಲ್ಲಿ ಇಬ್ಬರು ಜಗಳ ಮಾಡಿದ್ದಾರೆ. ಈ ವೇಳೆ ಸುರೇಶ್​ನ ಮೇಲೆ ಗಿರೀಶ್​ನಿಂದ ಹಲ್ಲೆ ಮಾಡಲಾಗಿದೆ. ಬಳಿಕ ತಲೆ ಮೇಲೆ ಕಲ್ಲು ಹಾಕಿ ಹತ್ಯೆಗೈದಿದ್ದಾನೆ. ಇದಕ್ಕೂ ಕೆಲ ದಿನಗಳ ಹಿಂದೆ ಗಿರೀಶ್​ ಮತ್ತೊಂದು ಕೊಲೆ ಮಾಡಿದ್ದ. ಸಿಗರೇಟ್ ಕೊಡದೇ ಇದ್ದ ಕಾರಣಕ್ಕೆ ಕೊಲೆ ಮಾಡಿದ್ದ. ಮೇ 12ರಂದು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸದ್ಯ ಈ ಸಂಬಂಧ ಬನಶಂಕರಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ದಾವಣಗೆರೆ: ಇದ್ದಕ್ಕಿದ್ದಂತೆ ಒಡೆದು ಹೋದ ಭದ್ರಾ ಕಾಲುವೆ
ದಾವಣಗೆರೆ: ಇದ್ದಕ್ಕಿದ್ದಂತೆ ಒಡೆದು ಹೋದ ಭದ್ರಾ ಕಾಲುವೆ
‘ಒಮ್ಮೆ ಬಂದು ನೊಡ್ಕೊಂಡು ಹೋಗೋ ಕಂದಾ’; ಸೋದರತ್ತೆ ನಾಗಮ್ಮ ಮಾತು
‘ಒಮ್ಮೆ ಬಂದು ನೊಡ್ಕೊಂಡು ಹೋಗೋ ಕಂದಾ’; ಸೋದರತ್ತೆ ನಾಗಮ್ಮ ಮಾತು
ಮಹದೇವಪ್ಪ ಮನೆಯಲ್ಲಿ ಎಸ್​ಸಿ ಎಸ್​ಟಿ ನಾಯಕರ ಸಭೆಯ ರಹಸ್ಯವೇನು?
ಮಹದೇವಪ್ಪ ಮನೆಯಲ್ಲಿ ಎಸ್​ಸಿ ಎಸ್​ಟಿ ನಾಯಕರ ಸಭೆಯ ರಹಸ್ಯವೇನು?
ಮೈಸೂರಿನ ಹಲವೆಡೆ ಆಲಿಕಲ್ಲು ಮಳೆ: ವರ್ಷದ ಮೊದಲ ಮಳೆಗೆ ಜನ ಖುಷ್
ಮೈಸೂರಿನ ಹಲವೆಡೆ ಆಲಿಕಲ್ಲು ಮಳೆ: ವರ್ಷದ ಮೊದಲ ಮಳೆಗೆ ಜನ ಖುಷ್
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ