ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ಆಕ್ರೋಶ: ಚಾಕುವಿನಿಂದ ಇರಿದು ಹಲ್ಲೆ, ಆರೋಪಿ ವಶಕ್ಕೆ

ಗದಗ ನಗರದ ಟಾಂಗಾ ಕೂಟ್ ಬಳಿ ಹಾಡ ಹಗಲೇ ಚಾಕುವಿನಿಂದ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಸಿಟ್ಟಿಗೆದ್ದು ಚಾಕುವಿನಿಂದ ಇರಿಯಲಾಗಿದೆ. ಸದ್ಯ ಆರೋಪಿ ವಿನಾಯಕನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ. ಗದಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ಆಕ್ರೋಶ: ಚಾಕುವಿನಿಂದ ಇರಿದು ಹಲ್ಲೆ, ಆರೋಪಿ ವಶಕ್ಕೆ
ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ಆಕ್ರೋಶ: ಚಾಕುವಿನಿಂದ ಇರಿದು ಹಲ್ಲೆ, ಆರೋಪಿ ವಶಕ್ಕೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: May 26, 2024 | 6:24 PM

ಗದಗ, ಮೇ 26: ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಸಿಟ್ಟಿಗೆದ್ದು ಹಾಡ ಹಗಲೇ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ (knife) ಇರಿದು ಹಲ್ಲೆ (attack) ಮಾಡಿರುವಂತಹ ಘಟನೆ ಗದಗದ ಟಾಂಗಾ ಕೂಟ್ ಬಳಿ ನಡೆದಿದೆ. ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ವಿನಾಯಕ ಕಬಾಡಿಯಿಂದ ಗೋವಿಂದರಾಜ ಶಿರಹಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿ ವಿನಾಯಕನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ. ಗದಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಲ್ಲೆಗೊಳಗಾದ ಗೋವಿಂದರಾಜ ಶಿರಹಟ್ಟಿ ಇಸ್ಕಾನ್ ಕೀರ್ತನೆ ಸಂಘ ನಡೆಸುತ್ತಿದ್ದರು. ಇದೇ ಸಂಘದಿಂದ ವಿನಾಯಕ​ನನ್ನ ತೆಗೆದು ಹಾಕಲಾಗಿತ್ತು. 2018ರಿಂದ 2023ರವರೆಗೆ ಕೀರ್ತನಾ ಸಂಘದಲ್ಲಿದ್ದ ವಿನಾಯಕ ಕಬಾಡಿ, ಕಳೆದ 1 ವರ್ಷದಿಂದ ದೂರ ಇಡಲಾಗಿತ್ತು. ಇದಕ್ಕೆ ಆಕ್ರೋಶ ಕೂಡ ವ್ಯಕ್ತಪಡಿಸಲಾಗಿತ್ತು.

ಇದನ್ನೂ ಓದಿ: ಹುಡ್ಗೀರ ಎಡಿಟೆಡ್ ಬೆತ್ತಲೆ ಫೋಟೋ ತೋರಿಸಿ ಮಂಚಕ್ಕೆ ಕರೆಯುತ್ತಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದ

ಕಾರಣ ತಿಳಿಸದೆ ಸಂಘದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡಿದ್ದ ವಿನಾಯಕ, ಇದೇ ವಿಚಾರಕ್ಕೆ 1 ವರ್ಷದಿಂದ ಗೋವಿಂದರಾಜ ಜತೆ ಗಲಾಟೆ ಮಾಡುತ್ತಿದ್ದ. ಇಂದು ಟಾಂಗಾಕೂಟ್​​ ಬಳಿಯಿರುವ ಜಗನ್ನಾಥ ಕಿರಾಣಿ ಅಂಗಡಿಯಲ್ಲಿ ಕೂತಿದ್ದಾಗ ಗೋವಿಂದರಾಜ ಶಿರಹಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ.

ಕಳ್ಳತನ ಮಾಡಿರುವ ಆರೋಪ: ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ವಿಜಯಪುರ: ಕಳ್ಳತನ ಮಾಡಿರುವ ಆರೋಪ ಕೇಳಿಬಂದ ಹಿನ್ನೆಲೆ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದವರಿಂದ ಚಂದ್ರು ಬಬಲೇಶ್ವರಿಗೆ ಎದೆ ಭಾಗ, ಹೊಟ್ಟೆ, ಕೈಗಳು, ಬೆನ್ನ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ: ಉಡುಪಿ ಗ್ಯಾಂಗ್​ ವಾರ್​: 3 ಪೊಲೀಸರಿಗೆ ಶರಣು, ಬೆಂಗಳೂರಿಗೂ ಹಬ್ಬಿದೆ ಆರೋಪಿಗಳ ಲಿಂಕ್​

ಸಿದ್ದಪ್ಪಶಿವಪ್ಪ ನಿಡಗುಂದಿ, ಸಮರ್ಥಶಿವಪ್ಪ ನಿಡಗುಂದಿ ಇತರರಿಂದ ಕೃತ್ಯವೆಸಲಾಗಿದೆ. ಗಾಯಾಳು ಚಂದ್ರು ಬಬಲೇಶ್ವರಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಅಮಲಿನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಯುವಕ ಹುಚ್ಚಾಟ

ಶಿವಮೊಗ್ಗ: ಗಾಂಜಾ ಅಮಲಿನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಯುವಕ ಹುಚ್ಚಾಟ ಮೇರೆದಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ. ಮಚ್ಚು ಹಿಡಿದು ಸಮೀರ್ ಎನ್ನುವ ಯುವಕನಿಂದ ಹುಚ್ಚಾಟ ಮಾಡಲಾಗಿದೆ. ಆತನಿಂದ ಮಚ್ಚು ಕಿತ್ತುಕೊಳ್ಳಲು ಸ್ಥಳೀಯರು ಹರಸಾಹಸ ಪಟ್ಟಿದ್ದು ಕೊನೆಗೂ ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ಸಮೀರ್‌ನನ್ನು ಆನಂದಪುರ ಪೊಲೀಸರಿಗೆ ಯುವಕರು ಒಪ್ಪಿಸಿದ್ದಾರೆ. ಸ್ನೇಹಿತನ ಸಂಬಂಧಿ ಮದುವೆಗೆ ಬಂದಿದ್ದ ಸಾಗರದ ನಿವಾಸಿ ಸಮೀರ್​, ಆನಂದಪುರ ಬಸ್ ನಿಲ್ದಾಣದಲ್ಲಿ ಸ್ನೇಹಿತರ ಜತೆ ಅಸಭ್ಯವಾಗಿ ವರ್ತಿಸಿದ್ದ. ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಮಚ್ಚು ಹಿಡಿದು ಹುಚ್ಚಾಟ ಮಾಡಿದ್ದ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.