ಕಲಬುರಗಿ: ಯುವಕ, ಯುವತಿಯರಿಗೆ ಕೋಟಿ ಕೋಟಿ ವಂಚಿಸಿದ್ದ ದಂಪತಿ ವಿರುದ್ಧ ದೂರು
ನಿಮ್ಮ ಹಣವನ್ನು ದ್ವಿಗುಣ ಮಾಡುತ್ತೇವೆ ನಮ್ಮಲ್ಲಿ ಹೂಡಿಕೆ ಮಾಡಿ ಅಂತ ಯುವಕ, ಯುವತಿಯರನ್ನು ನಂಬಿಸಿ, ಅವರಿಂದ ಹಣ ಪಡೆದು ವಂಚಿಸಿರುವ ಕಲಬುರಗಿ ನಗರದ ಗಾಂಧಿನಗರದಲ್ಲಿನ ಬಿ.ಎಲ್. ಕಾಂಪ್ಲ್ಯಾಕ್ಸ್ನಲ್ಲಿ ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಎಂಬ ಹೆಸರಿನ ಟ್ರೆಡಿಂಗ್ ಕಂಪನಿ ಮಾಲಿಕರ ವಿರುದ್ಧ ದೂರು ದಾಖಲಾಗಿದೆ.
ಕಲಬುರಗಿ, ಮೇ 26: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣವಾಗುತ್ತೆ ಅಂತ ಅಂತ ಯುವಕ, ಯುವತಿರಿಂದ ಹಣ ಪಡೆದು 30 ಕೋಟಿಗೂ ಅಧಿಕ ವಂಚನೆ ಮಾಡಿದ್ದ ದಂಪತಿ ವಿರುದ್ಧ ಕಲಬುರಗಿಯ (Kalaburagi) ರೋಜಾ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿ ಉತ್ಕರ್ಷ ಹಾಗೂ ಸಾವಿತ್ರಿ ವಂಚಿಸಿದ ಆರೋಪಿಗಳು.
ಗಾಂಧಿನಗರದಲ್ಲಿನ ಬಿ.ಎಲ್. ಕಾಂಪ್ಲ್ಯಾಕ್ಸ್ನಲ್ಲಿ ದಂಪತಿ ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಎಂಬ ಹೆಸರಿನ ಟ್ರೆಡಿಂಗ್ ಕಂಪನಿ ತೆರದಿದ್ದರು. ಇವರು “ನಿಮ್ಮ ಹಣ ದ್ವಿಗುಣ ಮಾಡಿ ಕೊಡುತ್ತೇವೆ” ಯುವಕ, ಯುವತಿಯರಿದ ಹಣ ಪಡೆದು ವಂಚಿಸುತ್ತಿದ್ದರು. ದಂಪತಿ ಬರೊಬ್ಬರಿ 500ಕ್ಕೂ ಅಧಿಕ ಜನರಿಗೆ ವಂಚಿಸಿದ್ದಾರೆ. ಇನ್ನು ಆರೋಪಿ ಉತ್ಕರ್ಷಗೆ ಸಹಾಯ ಮಾಡುತ್ತಿದ್ದ ವಿಜಯಸಿಂಗ್ ಹಜಾರೆ ಹಾಗೂ ಸುಧಾ ಎಂಬುವರ ವಿರುದ್ಧವೂ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದಂಪತಿ ಅಪಾರ್ಟ್ಮೆಂಟ್ನಿಂದ ಕಾಲ್ಕಿತ್ತಿದ್ದಾರೆ. ಪ್ರಕರಣ ಬಯಲಾಗುತ್ತಿದ್ದಂತೆ, ವಂಚನೆಗೆ ಒಳಗಾದವರು ಒಬ್ಬರಾಗಿ ಬಂದು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಾರೆ.
ಇದನ್ನೂ ಓದಿ: ಕಾರು ಕಲಿಯಲು ಹೋಗಿ ಬಾಲಕಿ ಮೇಲೆ ಕಾರು ಹತ್ತಿಸಿದ ಮಹಿಳೆ; ಬಾಲಕಿ ಸ್ಥಳದಲ್ಲೇ ಸಾವು
ಸುಲಿಗೆಕೋರರ ಬಂಧನ
ಬೆಂಗಳೂರು: ಬಾಣಸವಾಡಿ ಠಾಣೆ ಪೊಲೀಸರು ಇಬ್ಬರು ಸುಲಿಗೇಕೋರರನ್ನು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಜ್ ಬಂಧಿತ ಆರೋಪಿಗಳು. ಆರೋಪಿಗಳು ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಸ್ಕೂಟರ್ನಲ್ಲಿ ಬಂದು ಸುಲಿಗೆ ಮಾಡುತ್ತಿದ್ದರು.
ಕೆಲ ದಿನಗಳ ಹಿಂದೆ ಆರೋಪಿಗಳು ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ