ಕಾರು ಕಲಿಯಲು ಹೋಗಿ ಬಾಲಕಿ ಮೇಲೆ ಕಾರು ಹತ್ತಿಸಿದ ಮಹಿಳೆ; ಬಾಲಕಿ ಸ್ಥಳದಲ್ಲೇ ಸಾವು
ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಕಾರು ಕಲಿಯಲು ಹೋಗಿದ್ದ ಮಹಿಳೆಯೊಬ್ಬರು ಬಾಲಕಿ ಮೇಲೆ ಕಾರು ಹತ್ತಿಸಿದ್ದಾರೆ. ಮನೆ ಮುಂದೆ ಆಟವಾಡ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಿಳೆಯನ್ನ ವಶಕ್ಕೆ ಪಡೆದು ಕಾರು ಸೀಜ್ ಮಾಡಲಾಗಿದೆ.
ಬೆಂಗಳೂರು, ಮೇ.26; ಕೆಲ ದಿನಗಳ ಹಿಂದೆ ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ 18 ವರ್ಷದ ಯುವಕ ಕಾರು ತೊಳೆಯುವಾಗ ಏಕಾಏಕಿ ಎಕ್ಸಿಲೇಟರ್ ತುಳಿದು ಮಾಡಿದ ಅಚಾತುರ್ಯಕ್ಕೆ 5 ವರ್ಷದ ಮಗು ಮೃತಪಟ್ಟಿತ್ತು (Death). ಮತ್ತೊಂದು ಮಗು ಆಸ್ಪತ್ರೆ ಸೇರಿತ್ತು. 7 ಬೈಕ್ ಗಳು, ಒಂದು ಕಾರ್ ಕೂಡ ಜಖಂ ಆಗಿತ್ತು. ಈಗ ಅದೇ ರೀತಿಯ ಮತ್ತೊಂದು ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ನಡೆದಿದೆ. ಕಾರು ಕಲಿಯಲು ಹೋಗಿದ್ದ ಮಹಿಳೆಯೊಬ್ಬರು ಬಾಲಕಿ ಮೇಲೆ ಕಾರು ಹತ್ತಿಸಿದ್ದಾರೆ (Accident). ಮನೆ ಮುಂದೆ ಆಟವಾಡ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕಗ್ಗಲೀಪುರ ಗ್ರಾಮದ ವೆಂಕಟೇಶ್ ಮತ್ತು ಲಕ್ಷ್ಮೀ ಎಂಬುವವರ ಪುತ್ರಿ ನಾಗಲಕ್ಷ್ಮೀ(7) ಮೃತ ಬಾಲಕಿ. ಪಕ್ಕದ ಮನೆಯ ಮಹಿಳೆಯಿಂದಲೇ ಅಪಘಾತ ಸಂಭವಿಸಿದೆ. ಬ್ರೇಕ್ ತುಳಿಯಲು ಹೋಗಿ ಎಕ್ಸಲೇಟರ್ ತುಳಿದು ಕಾರಣ ಮನೆ ಮುಂದೆ ಆಟವಾಡ್ತಿದ್ದ ಬಾಲಕಿ ಮೇಲೆ ಕಾರು ಹತ್ತಿದೆ. ಈ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಿಳೆಯನ್ನ ವಶಕ್ಕೆ ಪಡೆದು ಕಾರು ಸೀಜ್ ಮಾಡಲಾಗಿದೆ.
ಇದನ್ನೂ ಓದಿ: ಕುಡಿದು ಬಂದು ರಸ್ತೆ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸುತ್ತಿದ್ದ ಕಿಲ್ಲರ್ ಅಂದರ್!
ಕ್ಷಣಾರ್ಥದಲ್ಲಿ ಮಾಡುವ ಎಡವಟ್ಟಿಗೆ ಜೀವ ಬಲಿ
ಬೆಂಗಳೂರಿನ ಮುರುಗೇಶ್ ಪಾಳ್ಯದ ಕಾಳಪ್ಪ ಲೇಔಟ್ ನ 3 ನೇ ಅಡ್ಡ ರಸ್ತೆಯ ಮನೆ ಮುಂದೆ ಬೆಳಗ್ಗೆ 18 ವರ್ಷದ ದೇವರಾಜ್ ತನ್ನ ಭಾವನಿಗೆ ಸೇರಿದ ಚವರ್ ಲೆಂಟ್ ಕಾರ್ ವಾಶ್ ಮಾಡ್ತಿದ್ದ. ಆದ್ರೆ ದೇವರಾಜ್ ಇದ್ದಕ್ಕಿದ್ದಂತೆ ಕಾರ್ ಸ್ಟಾರ್ಟ್ ಮಾಡಿ ಮೂವ್ ಮಾಡಿದ್ದ. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಭಸವಾಗಿ ಮುಂದಕ್ಕೆ ನುಗ್ಗಿದೆ. ಇದೇ ವೇಳೆ ರಸ್ತೆಯ ಮನೆಗಳ ಮುಂದೆ ನಿಲ್ಲಿಸಿದ್ದ ಸುಮಾರು 7 ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆಯೂ ಕಾರು ಕಂಟ್ರೋಲ್ ಗೆ ಸಿಗದೆ ತಮ್ಮ ಮನೆಮುಂದೆಯೇ ಆಟ ಆಡ್ತಿದ್ದ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಐದು ವರ್ಷದ ಆರವ್ ಮೇಲೆ ಹರಿದ ಕಾರು ಮುಂದೆ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಆದ್ರೆ ಆರವ್ ಮೇಲೆ ಕಾರು ಹರಿದ್ದಿದ್ರಿಂದ ಬೀದಿ ತುಂಬಾ ರಕ್ತ ಚೆಲ್ಲಿ ಆರವ್ ಸ್ಥಳದಲ್ಲೇ ಮೃತಪಟ್ಟ. ಅದೃಷ್ಟವಶಾತ್ ಇನ್ನೊಬ್ಬ ಬಾಲಕ ರಾಯಚೂರಿನ ಮೂಲದ ಧನರಾಜ್ ಸಾವಿನಿಂದ ಪಾರಾಗಿದ್ದಾನೆ.
ಆರವ್ ಹಲವು ವರ್ಷಗಳಿಂದ ಇದೇ ಏರಿಯಾದಲ್ಲಿ ವಾಸವಿದ್ದ ಝಾನ್ಸಿ ಹಾಗೂ ತಾಮಾರೈಕಣ್ಣನ್ ದಂಪತಿಯ ಎರಡನೇ ಮಗ. ಆರವ್ ಯುಕೆಜಿ ಓದುತ್ತಿದ್ದ. ಕಳೆದ ವಾರವಷ್ಟೇ ಆರವ್ ಗೆ ಐದನೇ ವರ್ಷದ ಬರ್ತ್ ಡೇ ಸೆಲೆಬ್ರೆಷನ್ ಕೂಡ ಆಗಿತ್ತು. ಆದರೆ ಒಂದೇ ವಾರಕ್ಕೆ ಮನೆಯಲ್ಲಿನ ಸಂಭ್ರಮವೆಲ್ಲ ಸಮಾಧಿಯಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ