ಪೂಜಾ ಸಾಮಗ್ರಿ ದುಬಾರಿ ಬೆಲೆಗೆ ಮಾರಾಟ ಆರೋಪ; ಬೆಂಗಳೂರಿನ ಬಸವನಗುಡಿ ದೊಡ್ಡಗಣಪತಿ ದೇಗುಲದಲ್ಲಿ ಗಲಾಟೆ
ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಸಿದ್ದ ದೇಗುಲಗಳಲ್ಲಿ ಒಂದಾದ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನ (Basavanagudi Dodda ganapathi temple)ದಲ್ಲಿ ಪೂಜಾ ಸಾಮಗ್ರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಭಕ್ತಾದಿಗಳು ಹಾಗೂ ಪೂಜಾ ಸಾಮಗ್ರಿ ಮಳಿಗೆ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿದೆ.
ಬೆಂಗಳೂರು, ಮೇ.26: ಬೆಂಗಳೂರಿನ(Bengaluru) ಪ್ರಖ್ಯಾತ ದೇವಸ್ಥಾನಗಳಲ್ಲಿ ಒಂದಾದ ಬಸವನಗುಡಿಯ ದೊಡ್ಡಗಣಪತಿ ದೇಗುಲ (Basavanagudi Dodda ganapathi temple)ದಲ್ಲಿ ಗಲಾಟೆ ನಡೆದಿದೆ. ಪೂಜಾ ಸಾಮಗ್ರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಭಕ್ತಾದಿಗಳು ಹಾಗೂ ಪೂಜಾ ಸಾಮಗ್ರಿ ಮಳಿಗೆ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿದೆ.
ದೊಡ್ಡ ಗಣೇಶ ದೇವಸ್ಥಾನದಲ್ಲಿ ಪೂಜಾ ಸಾಮಗ್ರಿಗಳಿಗೆ ಹೆಚ್ಚಿನ ದರ ವಿಧಿಸಿ, ಹಣವನ್ನು ವ್ಯಾಪಾರಸ್ಥರು ಪೀಕುತ್ತಿದ್ದರು. ಟೆಂಗಿನಕಾಯಿ, ಅಗರಭತ್ತಿ ಹಾಗೂ ದೂಪಕ್ಕೆ 150 ರಿಂದ 300 ರೂಪಾಯಿವರೆಗೆ ಹಣ ಪಡೆಯುತ್ತಿದ್ದ ಹಿನ್ನಲೆ ಭಕ್ತಾದಿಗಳು ಅಸಮಧಾನ ವ್ಯಕ್ತಪಡಿಸಿದ್ದು, ಯಾಕಿಷ್ಟು ಹಣ ತೆಗೆದುಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ‘ನಾವು ಟೆಂಡರ್ಗೆ ಹೆಚ್ಚು ದುಡ್ಡು ಕೊಟ್ಟಿದಿವಿ, ಅದಕ್ಕೋಸ್ಕರ ಹಚ್ಚುವರಿ ಹಣವನ್ನುತೆಗೆದುಕೊಳ್ಳುತ್ತೇವೆ ಎಂದು ಪೂಜಾ ಸಾಮಾಗ್ರಿ ಮಾರಾಟ ಮಾಡುವ ವ್ಯಾಪಾರಿಗಳು ಉತ್ತರಿಸಿದ್ದಾರೆ.
ಬೆಂಗಳೂರು ಬನಶಂಕರಿ ದೇವಸ್ಥಾನ ಹುಂಡಿ ಎಣಿಕೆ
ಮೇ.24 ರಂದು ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿ ಎಣಿಕೆ ಮಾಡಿದ್ದು, ಬೆಳ್ಳಿ ಸೇರಿದಂತೆ ವಿದೇಶಿ ನೋಟುಗಳು ಹರಿದು ಬಂದಿದೆ. ಕಳೆದ ತಿಂಗಳು ಏಪ್ರಿಲ್ನಲ್ಲಿ 39 ಲಕ್ಷ ರೂ. ಹುಂಡಿ ಹಣ ಕೆಲೆಕ್ಟ್ ಆಗಿತ್ತು. ಇದೀಗ ಬೇಸಿಗೆ ರಜೆ ಇರುವ ಕಾರಣ ಜನರು ಬರುತ್ತಿದ್ದು, ಆದಾಯ ಕೂಡ ಹೆಚ್ಚಿದೆ. ಅದರಂತೆ ಮೇ ತಿಂಗಳಲ್ಲಿ ಬರೊಬ್ಬರಿ 44 ಲಕ್ಷದ 4 ಸಾವಿರದ 840 ರೂ ಹಣ ಸಂಗ್ರಹವಾಗಿದ್ದು, ಅದರಲ್ಲಿ 96 ಗ್ರಾಂ 100 ಮಿಲಿ ಚಿನ್ನ, 573 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಅಲ್ಲದೇ ವಿದೇಶಿ ಹಣವು ಬಂದಿದ್ದು, USA 5 ನೋಟು, ವಿಯೆಟ್ನಂ16 ನೋಟು, ಮಲ್ಲೆಶಿಯಾ 14 ನೋಟು, ಬೂತಾನ್ 2 ನೋಟು, ನೇಪಾಳ್ 3 ನೊಟು, ತೈಲ್ಯಾಂಡ್ 3 ನೋಟು ಬಂದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Sun, 26 May 24