- Kannada News Photo gallery Bangalore Banashankari Temple Hundi Enike, Millions collected in a single month
ಬೆಂಗಳೂರು ಬನಶಂಕರಿ ದೇವಸ್ಥಾನ ಹುಂಡಿ ಎಣಿಕೆ: ‘ನನ್ನ ತಾಯಿ ಕಡೆಯಿಂದ ಬರುವ ಆಸ್ತಿ ನನಗೆ ಬರಲೆಂದು ಕರುಣಿಸು’ ಎಂದು ದೇವಿಗೆ ಪತ್ರ
ಇಂದು(ಮೇ.24) ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿ ಎಣಿಕೆ ಮಾಡಿದ್ದು, ಕಳೆದ ತಿಂಗಳಿಗಿಂತ ಭರ್ಜರಿ ಆದಾಯ ಬಂದಿದೆ. ಚಿನ್ನ, ಬೆಳ್ಳಿ ಸೇರಿದಂತೆ ವಿದೇಶಿ ನೋಟುಗಳು ಹರಿದು ಬಂದಿದ್ದು, ಇದರ ಜೊತೆಗೆ ಹಲವಾರು ಭಕ್ತರು ದೇವಿಯ ಬಳಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಕಾಗದದಲ್ಲಿ ಬರೆದು ಹುಂಡಿಗೆ ಹಾಕಿದ್ದಾರೆ. ಈ ಎಲ್ಲದರ ಕುರಿತು ಒಂದು ಸ್ಟೋರಿ ಇಲ್ಲಿದೆ.
Updated on:May 24, 2024 | 5:05 PM

ಬೆಂಗಳೂರಿನ ಬನಶಂಕರಿ ದೇವಸ್ಥಾನ ಪ್ರಸಿದ್ದವಾದ ದೇವಸ್ಥಾನಗಳಲ್ಲೊಂದು. ಶಕ್ತಿ ದೇವತೆ ಆದ ಬನಶಂಕರಿ ದೇವಿಯ ಆರ್ಶಿವಾದ ಪಡೆಯಲು ಲಕ್ಷಾಂತರ ಜನ ಆಗಮಿಸುತ್ತಾರೆ.

ಅದರಂತೆ ಇಂದು(ಮೇ.24) ಬನಶಂಕರಿ ಹುಂಡಿ ಎಣಿಕೆ ಮಾಡಿದ್ದು, ಕಳೆದ ತಿಂಗಳಿಗಿಂತ ಭರ್ಜರಿ ಆದಾಯ ಬಂದಿದೆ. ಕಳೆದ ತಿಂಗಳು ಏಪ್ರಿಲ್ನಲ್ಲಿ 39 ಲಕ್ಷ ರೂ. ಹುಂಡಿ ಹಣ ಕೆಲೆಕ್ಟ್ ಆಗಿತ್ತು. ಇದೀಗ ಬೇಸಿಗೆ ರಜೆ ಇರುವ ಕಾರಣ ಜನರು ಬರುತ್ತಿದ್ದು, ಆದಾಯ ಕೂಡ ಹೆಚ್ಚಿದೆ.

ಮೇ ತಿಂಗಳಲ್ಲಿ ಬರೊಬ್ಬರಿ 44 ಲಕ್ಷದ 4 ಸಾವಿರದ 840 ರೂ ಹಣ ಸಂಗ್ರಹವಾಗಿದ್ದು, ಅದರಲ್ಲಿ 96 ಗ್ರಾಂ 100 ಮಿಲಿ ಚಿನ್ನ, 573 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಅಲ್ಲದೇ ವಿದೇಶಿ ಹಣವು ಬಂದಿದ್ದು, USA 5 ನೋಟು, ವಿಯೆಟ್ನಂ16 ನೋಟು, ಮಲ್ಲೆಶಿಯಾ 14 ನೋಟು, ಬೂತಾನ್ 2 ನೋಟು, ನೇಪಾಳ್ 3 ನೊಟು, ತೈಲ್ಯಾಂಡ್ 3 ನೋಟು ಬಂದಿವೆ.

ಇದರ ಜೊತೆ ಹಲವಾರು ಭಕ್ತರು ದೇವಿಯ ಬಳಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಕಾಗದದಲ್ಲಿ ಬರೆದು ಹುಂಡಿಗೆ ಹಾಕಿದ್ದು, ಅದರಲ್ಲೊಬ್ಬರು, ‘ನನ್ನ ತಾಯಿ ಕಡೆಯಿಂದ ಬರುವ ಆಸ್ತಿ ನನಗೆ ಬರುವ ಹಾಗೆ ಮಾಡು, ಯಾವುದೇ ಅಡ್ಡಿ ಇಲ್ಲದೆ ನನಗೆ ಸಿಗುವ ತರಹ ಮಾಡು ಎಂದು ಬೇಡಿಕೆ ಇಟ್ಟಿದ್ದಾರೆ.

ಇನ್ನೊಬ್ಬರು ಓಂ ಶ್ರೀ ಬನಶಂಕರಿಯೇ ನಮೋ ನಮೋಃ ಎಂದು ಬರೆದು ಮುಮದುವರೆಸಿ, ‘ಅಮ್ಮ ನಿನ್ನಲ್ಲಿ ನನ್ನ ಕೋರಿಕೆ ಇದೆ. ನನ್ನ ಮಗನ ಮದುವೆ ಸೆಟ್ ಆಗಿದೆ. ಈಗಾಗಲೇ ನಿಶ್ಚಿತಾರ್ಥ್ ಕೂಡ ಆಗಿದ್ದು, ಮದುವೆ ಕೆಲಸಗಳು ಮುಂದುವರೆದಿದೆ. ಅದರಂತೆ ನನ್ನ ಮಗನ ಮದುವೆ ಆಗುವ ಹುಡುಗಿ, ನನ್ನ ಮಗ, ಮನೆಯವರ ಜೊತೆ ಚೆನ್ನಾಗಿ ಇರುವಂತೆ ಮಾಡು ಎಂದು ಬೇಡಿಕೊಂಡಿದ್ದಾರೆ.

ಅದರಂತೆ ಮತ್ತೊಬ್ಬರು, ‘ಹೇಮನಿಗೆ ಒಳ್ಳೆ ಕಡೆಯ ಸಂಬಂಧ ಒದಗಿಬಂದು ಸಂತೋಷದಿಂದ ಒಪ್ಪಿ ಮದುವೆ ಆಗುವ ಹಾಗೇ ದಾರಿ ತೋರಿಸವ್ವ. ಜೊತೆಗೆ ಅಮ್ಮನ ಮನೆ ಸಮಸ್ಯೆ ಸರಿಹೋಗಿ ದುಡ್ಡು ಬರುವ ಹಾಗೆ ಮಾಡವ್ವ ಎಂದು ವಿಧವಿಧವಾದ ಬೇಡಿಕೆಯನ್ನ ದೇವಿ ಮುಂದೆ ಇಟ್ಟಿದ್ದಾರೆ.
Published On - 4:53 pm, Fri, 24 May 24



















